ಹರಿಪ್ರಿಯಾ ಹುಟ್ಟುಹಬ್ಬಕ್ಕೆ ಸಿಕ್ಕ 4 ವಿಶೇಷ ಉಡುಗೊರೆಗಳು
Recommended Video

ನಟಿ ಹರಿಪ್ರಿಯಾ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ.
ಹುಟ್ಟುಹಬ್ಬದ ವಿಶೇಷವಾಗಿ ಅವರ ಮುಂದಿನ ಸಿನಿಮಾ ತಂಡಗಳು ಉಡುಗೊರೆಗಳನ್ನು ನೀಡಿವೆ. 'ಡಾಟರ್ ಆಫ್ ಪಾರ್ವತಮ್ಮ', 'ಕನ್ನಡ್ ಗೊತ್ತಿಲ್ಲ', 'ಸೂಜಿದಾರ' ಹಾಗೂ 'ಬೆಲ್ ಬಾಟಂ' ಚಿತ್ರಗಳ ಪೋಸ್ಟರ್ ಮತ್ತು ಟೀಸರ್ ಗಳು ಇಂದು ಬಿಡುಗಡೆಯಾಗಿವೆ.
ಇದುವರೆಗೆ ಹರಿಪ್ರಿಯಾ ಬೇರೆ ಬೇರೆ ರೀತಿಯಾದ ಪಾತ್ರಗಳನ್ನು ಪ್ರಯತ್ನ ಮಾಡುತ್ತ ಬಂದಿದ್ದಾರೆ. ಅದೇ ರೀತಿ ಅವರ ಮುಂದಿನ ಸಿನಿಮಾಗಳು ಕೂಡ ಡಿಫರೆಂಟ್ ಆಗಿವೆ. ಮುಂದೆ ಓದಿ...

'ಡಾಟರ್ ಆಫ್ ಪಾರ್ವತಮ್ಮ' ಎರಡನೇ ಲುಕ್
'ಡಾಟರ್ ಆಫ್ ಪಾರ್ವತಮ್ಮ' ಹರಿಪ್ರಿಯಾ ಅವರ 25 ನೇ ಚಿತ್ರವಾಗಿದೆ. ಈ ಚಿತ್ರದ ಹರಿಪ್ರಿಯಾ ಪಾತ್ರದ ಎರಡನೇ ಲುಕ್ ಇಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಾಲೆಂಜಿಂಗ್ ರೋಲ್ ಅನ್ನು ಹರಿಪ್ರಿಯಾ ಆರಿಸಿಕೊಂಡಿದ್ದಾರೆ. ಹರಿಪ್ರಿಯಾ ಅವರ ತಾಯಿಯ ಪಾತ್ರವನ್ನು ಸುಮಲತಾ ಅಂಬರೀಶ್ ನಿರ್ವಹಿಸುತ್ತಿದ್ದಾರೆ. ಶಂಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
'ಕನ್ನಡ್ ಗೊತ್ತಿಲ್ಲ' ಮೋಷನ್ ಪೋಸ್ಟರ್
'ಕನ್ನಡ್ ಗೊತ್ತಿಲ್ಲ' ಸಿನಿಮಾ ಟೈಟಲ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇಂದು ಈ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರವನ್ನು ಆರ್ ಜೆ ಮಯೂರ್ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಹಾರರ್ ಜಾನರ್ ನಲ್ಲಿ ಸಿನಿಮಾ ಇರಲಿದ್ದು, ಇಂದಿನ ದಿನಕ್ಕೆ ತುಂಬ ಹತ್ತಿರ ಆಗಲಿದೆಯಂತೆ.

'ಬೆಲ್ ಬಾಟಂ' ಪೋಸ್ಟರ್
ಹರಿಪ್ರಿಯಾ ಅವರ 'ಬೆಲ್ ಬಾಟಂ' ಚಿತ್ರದ ಹೊಸ ಪೋಸ್ಟರ್ ಕೂಡ ಇಂದೇ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅವರು ಕುಸುಮ ಎಂಬ ಹುಡುಗಿ ಪಾತ್ರ ಮಾಡುತ್ತಿದ್ದಾರೆ. ಸಿನಿಮಾ 70ರ ದಶಕದ ಕಥೆ ಹೊಂದಿದೆ. ರಿಷಬ್ ಶೆಟ್ಟಿ ಸಿನಿಮಾ ನಾಯಕನಾಗಿದ್ದಾರೆ. ಜಯತೀರ್ಥ ಚಿತ್ರದ ನಿರ್ದೇಶನ ಮಾಡಿದ್ದಾರೆ.

'ಸೂಜಿದಾರ'
'ಸೂಜಿದಾರ' ಹರಿಪ್ರಿಯಾ ಕೆರಿಯರ್ ನಲ್ಲಿ ಬರುತ್ತಿರುವ ಮತ್ತೊಂದು ವಿಭಿನ್ನ ಸಿನಿಮಾವಾಗಿದೆ. ಈ ಚಿತ್ರದ ಹರಿಪ್ರಿಯಾ ಅವರ ಪಾತ್ರದ ಟೀಸರ್ ಇಂದು ಸಂಜೆ ರಿಲೀಸ್ ಆಗಲಿದೆ. ಈ ಮೌನೇಶ್ ಬಡಿಗೇರ್ ನಿರ್ದೇಶನ ಮಾಡಿದ್ದಾರೆ. ಹರಿಪ್ರಿಯಾ ಜೊತೆಗೆ ಯಶ್ ಶೆಟ್ಟಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











