ಅಂದು ಆರತಿ ಇಂದು ಅಧಿತಿ: 'ರಂಗನಾಯಕಿ' ಆರಂಭಕ್ಕೆ ವಿವಾದ.!

ಪುಟ್ಟಣ್ಣ ಕಣಗಾಲ್ ನಿರ್ದೇಶನದ ರಂಗನಾಯಕಿ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಯಶಸ್ಸು ಕಂಡ ಸಿನಿಮಾ. ಮಹಿಳಾ ಪ್ರಧಾನವಾದ ಈ ಚಿತ್ರದಲ್ಲಿ ಆರತಿ ನಾಯಕಿಯಾಗಿ ನಟಿಸಿದ್ದರು. ರೆಬೆಲ್ ಸ್ಟಾರ್ ಅಂಬರೀಶ್, ಅಶೋಕ್, ರಾಮಕೃಷ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

1981ರಲ್ಲಿ ತೆರೆಕಂಡಿದ್ದ ಈ ಚಿತ್ರದ ಹೆಸರಿನಲ್ಲೇ ಈಗ ಹೊಸ ಸಿನಿಮಾ ಬರ್ತಿದೆ. ಹೌದು, ಸ್ಯಾಂಡಲ್ ವುಡ್ ನಲ್ಲಿ ಈಗ' ರಂಗನಾಯಕಿ' ಹೆಸರಿನಲ್ಲಿ ಸಿನಿಮಾ ಸೆಟ್ಟೇರುತ್ತಿದ್ದು, ಯುವನಟಿ ಅಧಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕಲಾತ್ಮಕ ಚಿತ್ರಗಳ ಯಶಸ್ವಿ ನಿರ್ದೇಶಕ ದಯಾಳ್ ಪದ್ಮನಾಭನ್ ಹೊಸ ರಂಗನಾಯಕಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಧಿತಿ ಜೊತೆ ಶ್ರೀನಿ ಮತ್ತು ವಿಕ್ರಂ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

New Ranganayaki launching today

ಅಂದ್ಹಾಗೆ, ಹೊಸ ರಂಗನಾಯಕಿ ಶೀರ್ಷಿಕೆಗೆ ವಿವಾದ ಅಂಟಿಕೊಳ್ಳುವ ಸಾಧ್ಯತೆ ಇದೆ. ಯಾಕಂದ್ರೆ, ರಂಗನಾಯಕಿ ಟೈಟಲ್ ಗೆ ವಾಲ್ಯೂಮ್ 1-ವರ್ಜಿನಿಟಿ ಎಂದು ಸಬ್ ಟೈಟಲ್ ಇಡಲಾಗಿದೆ. ಇದು ಸಹಜವಾಗಿ ಚರ್ಚೆಗೆ ಕಾರಣವಾಗಿದೆ.

ಏಪ್ರಿಲ್ 26 ರಂದು ರಂಗನಾಯಕಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಹಗ್ಗದ ಕೊನೆ, ಆಕ್ಟರ್, ಆ ಕರಾಳ ರಾತ್ರಿ, ಪುಟ 109 ಅಂತಹ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ದಯಾಳ್ ಈಗ ರಂಗನಾಯಕಿ ಕೈಗೆತ್ತಿಕೊಂಡಿರುವುದು ನಿಜಕ್ಕೂ ಕುತೂಹಲ ಮೂಡಿಸಿದೆ.

More from Filmibeat

English summary
Kannada actress aditi prabhudeva starrer Ranganayaki movie launching tomorrow (april 26th). the movie directed by dayal padmanabhan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X