ನಮ್ಮ ಊರೆ ನಮಗೆ ಎಂದು ಶಾಂತಿ ಕೊಡ್ತದೆ ಎಂದ ಪೃಥ್ವಿ ಅಂಬಾರ್
ಭಾಗೀರಥಿ ಹಾಗೂ ಕುವಾ ಕುವಾ ಕುವಾಲೆ ಹಾಡಿನ ಮೂಲಕ ಮತ್ಸ್ಯಗಂಧ ಸಿನಿಮಾ ಯುವ ಸಮೂಹದ ಮನಗೆದ್ದಿದೆ. ಯುವ ಮನಸುಗಳನ್ನು ಮೊದಲ ಕೇಳುವಿಕೆಯಲ್ಲಿಯೇ ಆವರಿಸಿಕೊಂಡಿರೋ ಈ ಹಾಡುಗಳ ಪ್ರಭೆಯಲ್ಲಿಯೇ ಮತ್ತೊಂದು ಹಾಡನ್ನು ಮತ್ಸ್ಯಗಂಧ ಚಿತ್ರತಂಡ ಬಿಡುಗಡೆ ಮಾಡಿದೆ. ನಿರೀಕ್ಷಿಸಿದಂತೆಯೇ ಈ ಹಾಡು ಕೂಡ ಗಾನ ಪ್ರಿಯರ ಕಣ್ಮನ ಸೆಳೆಯುತ್ತಿದೆ
ಕಡಲ-ಒಡಲ-ತಡಿಯ ಮೇಲೆ ನೂರು ತಳಿರು ತೋರಣ.. ಮೇಲೆ ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡಿಗೆ ಹೇಮಂತ್ ಕುಮಾರ್ ಧ್ವನಿಯಾಗಿದ್ದಾರೆ. ಇನ್ನೂ ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಲೇಖನಿಯಲ್ಲಿ ಹೊರ ಹೊಮ್ಮಿರುವ ಸಾಹಿತ್ಯಕ್ಕೆ ಪ್ರಶಾಂತ್ ಸಿದ್ದಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಮತ್ಸ್ಯಗಂಧ ಮೂಲಕ ಸಂಗೀತ ನಿರ್ದೇಶಕರಾದ ಪ್ರಶಾಂತ್ ಸಿದ್ದಿ
ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿರುವ ಪ್ರಶಾಂತ್ ಸಿದ್ದಿ, ಮತ್ಸ್ಯಗಂಧ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಬಡ್ತಿಯನ್ನ ಪಡೆದಿದ್ದಾರೆ. ಹಾಗಂಥ ಇದನ್ನ ಅದೃಷ್ಟದ ಆಟ ಎಂದು ಹೇಳಲು ಸಾಧ್ಯ ಇಲ್ಲ. ಯಾಕೆಂದರೆ ಸಂಗೀತ ಪ್ರಶಾಂತ್ ಸಿದ್ದಿ ಅವರ ರಕ್ತದಲ್ಲಿಯೇ ಇದೆ. ಇವರ ಅಮ್ಮನ ಹಾಡುಗಾರಿಕೆ ಇವರನ್ನ ಇಲ್ಲಿಯವರೆಗೆ ಕರೆತಂದಿದೆ. ತನು-ಮನವನ್ನ ಅರ್ಪಿಸಿ, ಚಿತ್ರಕ್ಕೆ ಸಂಗೀತ ನೀಡಿರುವ ಪ್ರಶಾಂತ್ ಸಿದ್ದಿ ಅವರಿಗೆ ಮತ್ಸ್ಯಗಂಧ ತಮ್ಮ ವೃತ್ತಿ ಬದುಕಿಗೆ ತಿರುವು ನೀಡುತ್ತೆ ವಿಶ್ವಾಸ ಇದೆ.

ಖಾಕಿಯಲ್ಲಿ ಪೃಥ್ವಿ ಅಂಬಾರ್ ಮಿಂಚು
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮೀನುಗಾರರ ಭಾಷೆ, ಬದುಕು, ಸಂಪ್ರದಾಯ ,ಹೋರಾಟ, ಮೀನುಗಾರರ ಸ್ವಾಭಿಮಾನ , ಬವಣೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ತಯಾರಾದ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಅವತಾರವನ್ನೆತ್ತಿದ್ದಾರೆ. ಹಿರಿಯ ನಟ ಶರತ್ ಲೋಹಿತಾಶ್ವ , ಭಜರಂಗಿ ಲೋಕಿ, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಮೈಮ್ ರಾಮದಾಸ್ , ಪಿ.ಡಿ. ಸತೀಶ್ ಚಂದ್ರ, ದಿಶಾ ಶೆಟ್ಟಿ, ಅಂಜಲಿ ಪಾಂಡೆ, ದಿವ್ಯಾ ಶೆಟ್ಟಿ, ಕಾಂತ್ ರಾಜ್ ಕಡ್ಡಿಪುಡಿ ಹೀಗೆ ಅನೇಕರು ಚಿತ್ರದಲ್ಲಿದ್ದಾರೆ.

ಕನ್ನಡ ಪಿಚ್ಚರ್ ಅರ್ಪಿಸುವ ಚಿತ್ರವನ್ನ ಬಿ.ಎಸ್. ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಮತ್ಸ್ಯಗಂಧ ಚಿತ್ರದ ಈ ನಯಾ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ನಿರೀಕ್ಷೆಯನ್ನ ಹುಟ್ಟುಹಾಕಿರುವ ಚಿತ್ರ ಇದೇ ಫೆಬ್ರವರಿ 23ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications










