»   » ಚಿತ್ರಗಳು: 'ಅಲ್ಲಮ'ನಿಗೆ ಪರಕಾಯ ಪ್ರವೇಶ ಮಾಡಿದ ಧನಂಜಯ್

ಚಿತ್ರಗಳು: 'ಅಲ್ಲಮ'ನಿಗೆ ಪರಕಾಯ ಪ್ರವೇಶ ಮಾಡಿದ ಧನಂಜಯ್

Posted By:
Subscribe to Filmibeat Kannada

12ನೇ ಶತಮಾನದ ವಚನಕಾರ 'ಅಲ್ಲಮ ಪ್ರಭು' ಎಂಬ ಯೋಗಿಯೊಬ್ಬರ ಕಥೆಯಾಧರಿತ 'ಅಲ್ಲಮ' ಚಿತ್ರ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಈಗಾಗಲೇ ಚಿತ್ರದ ಹಾಡುಗಳನ್ನು ಕೂಡ ರಿಲೀಸ್ ಮಾಡಿದೆ. ಹಾಡುಗಳು ಮಾರುಕಟ್ಟೆಯಲ್ಲಿ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ಆಕ್ಷನ್-ಕಟ್ ಹೇಳಿರುವ 'ಅಲ್ಲಮ' ಚಿತ್ರದಲ್ಲಿ 'ಜೆಸ್ಸಿ' [ವಿಮರ್ಶೆ; 'ಜೆಸ್ಸಿ' ಸುಂದರ, ಅಷ್ಟೇ ಭಯಾನಕ ಪ್ರೇಮ ಕಾವ್ಯ!] ಖ್ಯಾತಿಯ ನಟ ಧನಂಜಯ್ ಅವರು 'ಅಲ್ಲಮ' ಯೋಗಿಯ ಪಾತ್ರದಲ್ಲಿ ಮಿಂಚಿದ್ದು, ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.


New Stills of Dhananjay's Kannada Movie 'Allama'

ಈ ಚಿತ್ರಕ್ಕಾಗಿ ಧನಂಜಯ್ ಅವರು ಸುಮಾರು 18 ತಿಂಗಳುಗಳ ಕಾಲ ಮೃದಂಗ ಕಲಿಯುವಿಕೆ, ಯೋಗ ಹಾಗೂ ಅಧ್ಯಯನ ನಡೆಸಲು ಪಟ್ಟ ಶ್ರಮ ಸಾರ್ಥಕವಾಯಿತು ಎಂದು ನಿಟ್ಟುಸಿರು ಬಿಡುತ್ತಾರೆ. ಮಾಯಾದೇವಿಯಾಗಿ ನಾಯಕಿ ಪಾತ್ರದಲ್ಲಿ ನಟಿ ಮೇಘನಾ ರಾಜ್ ಅವರು ವಿಭಿನ್ನವಾಗಿ ಮಿಂಚಿದ್ದಾರೆ.


ಸುಮಾರು ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದ್ದ 'ಅಲ್ಲಮ' ಸಿನಿಮಾ ಕೊನೆಗೂ ಸಂಪೂರ್ಣ ಕೆಲಸಗಳನ್ನು ಮುಗಿಸಿ ಬಿಡುಗಡೆ ಹಂತದಲ್ಲಿದೆ. ಚಿತ್ರದಲ್ಲಿ ಬಸವಣ್ಣನವರ ಪಾತ್ರದಲ್ಲಿ ನಟ ಸಂಚಾರಿ ವಿಜಯ್ ಅವರು ಮಿಂಚಿದ್ದು, ಚಿತ್ರಕ್ಕೆ ಖ್ಯಾತ ಕೊಳಲು ವಾದಕ ಬಾಪು ಪದ್ಮನಾಭ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.['ಅಲ್ಲಮ'ನಿಗಾಗಿ ಮದ್ದಳೆ ಕಲಿಯಲು ಧನಂಜಯ್ ಕಸರತ್ತು]


ಒಟ್ನಲ್ಲಿ ಒಂದು ಐತಿಹಾಸಿಕ ಕಥೆಯನ್ನು ಸಿನಿಮಾ ಮಾಡುವ ಮೂಲಕ ತೆರೆಯ ಮೇಲೆ ಜನರಿಗೆ ತೋರಿಸಬೇಕು ಎಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ನಿರ್ದೇಶಕ ಟಿ.ಎಸ್ ನಾಗಾಭರಣ ಅವರ ಪ್ರಯತ್ನವನ್ನು ಶ್ಲಾಘಿಸಲೇಬೇಕು.['ಜೆಸ್ಸಿ' ನಟ ಧನಂಜಯ್ ಗೆ ಸ್ಫೂರ್ತಿಯ ಸೆಲೆ ಯಾರು?]


ಈಗಾಗಲೇ ಚಿತ್ರತಂಡದವರು ಹೊಸ ಸ್ಟಿಲ್ಸ್ ಗಳನ್ನು ಬಿಡುಗಡೆ ಮಾಡಿದ್ದು, 'ಅಲ್ಲಮ' ಪಾತ್ರಕ್ಕೆ ಧನಂಜಯ್ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಚಿತ್ರದ ಫೋಟೋ ಆಲ್ಬಂ ನೋಡಿ ಕೆಳಗಿನ ಸ್ಲೈಡುಗಳಲ್ಲಿ...


-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
In Pics: Kannada Movie 'Allama' New Stills. Kannada Actor Dhananjay, Kannada Actress Meghana Raj, Actor Sanchari Vijay in the lead role. The movie is Directed by TS Nagabharana.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada