Happy New Year 2024: ಈ ವರ್ಷ ಚಂದನವನದಲ್ಲಿ ಬಂಗಾರದ ಬೆಳೆ .. ಯಾವ್ಯಾವ ಸಿನಿಮಾ ಚಿತ್ರಮಂದಿರಕ್ಕೆ?
ನಟ ದರ್ಶನ್ ನಟನರಯ 'ಕಾಟೇರ'ದ ಯಶಸ್ಸಿನೊಂದಿಗೆ ಕನ್ನಡ ಚಿತ್ರರಂಗ ಈ ವರ್ಷ ಒಲ್ಳೆ ಬುನಾದಿಯ ಮೇಲೆ ನಿಂತಿದೆ. 2024 ರಲ್ಲಿ ಕೂಡ ಬಂಗಾರದ ಬೆಳೆ ತೆಗೆಯುವ ಹಂಬದಲ್ಲಿದೆ ಚಿತ್ರರಂಗ. ಹಲವು ವರ್ಷಗಳಿಂದ ಥಿಯೇಟರ್‌ಗೆ ಬರದ ನಟರು ಸಹ ಈ ವರ್ಷ ತೆರೆಗೆ ಬರಲು ಸಜ್ಜಾಗಿದ್ದಾರೆ. ಹೊದ ಬಗೆಯ ಕತೆಗಳು, ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹಾಗಾದರೇ ಈ ವರ್ಷ ಸಾಕಷ್ಟು ಭರವಸೆ ಮೂಡಿಸಿರುವ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳು ಯಾವುವು ಎಂಬುದನ್ನು ಮುಂದೆ ನೋಡಿ.
ಕೆಡಿ - ದಿ ಡೆವಿಲ್
ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ - ದಿ ಡೆವಿಲ್' ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿದ್ದಾರೆ. ಆಕ್ಷನ್ ಡ್ರಾಮಾ ಎಂದು ಹೇಳಲಾದ ಈ ಚಿತ್ರದ ಮೂಲಕ ನಟಿ ಶಿಲ್ಪಾ ಶೆಟ್ಟಿ ಮತ್ತೆ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಕೆಜಿಎಫ್‌ನಲ್ಲಿ ಅಬ್ಬರಿಸಿದ್ದ ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫಸ್ಟ್‌ಲುಕ್ ಪೋಸ್ಟರ್ ಸಕತ್ ಹೈಪ್ ಕ್ರಿಯೆಟ್ ಮಾಡಿದೆ.

ಉತ್ತರಕಾಂಡ
ಮೊದಲ ಬಾರಿಗೆ ನಟ ಧನಂಜಯ್ ಮತ್ತು ರಮ್ಯಾ ಜೋಡಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅದು ನಿರ್ದೇಶಕರಾದ ಶರತ್ ಮಂಜುನಾಥ್ ಮತ್ತು ರೋಹಿತ್ ಪದಕಿ ಅವರ ನಿರ್ದೇಶನದ ಉತ್ತರಕಾಂಡ ಸಿನಿಮಾದಲ್ಲಿ . ಈ ಚಿತ್ರದಲ್ಲಿ ನಟ ಶಿವರಾಜಕುಮಾರ್ ಕೂಡ ಒಮದು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಸಿನಿಮಾ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.
ಭೀಮ
ಸೂಪರ್ ಹಿಟ್ 'ಸಲಗ' ಬಳಿಕ ದುನಿಯಾ ವಿಜಯ್ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. 'ಭೀಮ' ಎಂದು ಹೆಸರಿಡಲಾಗಿರುವ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಚಿತ್ರಕ್ಕೆ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಬಂಡವಾಳ ಹೂಡಲಿದ್ದಾರೆ. ಚರಣ್ ರಾಜ್ ಸಂಗೀತವಿದೆ. ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆಯಾಗಿದೆ

ರಿಚರ್ಡ್ ಆಂಟನಿ
ರಿಚರ್ಡ್ ಆಂಟನಿ ಸಿನಿಮಾದಲ್ಲಿ ಸ್ನೇಹಿತರಾದ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಒಟ್ಟಿಗೆ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಥ್ರಿಲ್ಲರ್ ಸಿನಿಮಾ ಒಬ್ಬ ಧೈರ್ಯಶಾಲಿ ಹುಡುಗನ ಸುತ್ತ ಸುತ್ತುತ್ತದೆ. ಅಚ್ಯುತ್ ಕುಮಾರ್, ಕಿಶೋರ್ ಕುಮಾರ್ ಜಿ, ಮತ್ತು ಪ್ರಮೋದ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಿಗೆ ಆಯ್ಕೆಯಾಗಿದ್ದಾರೆ.
ಬ್ಯಾಚುಲರ್ ಪಾರ್ಟಿ
ಅಭಿಜಿತ್ ಮಹೇಶ್ ನಿರ್ದೇಶನದ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜನವರಿ 26ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡೀಯೋಸ್ ನಿರ್ಮಾಣ ಮಾಡಿದೆ.
ಬಘೀರಾ
ಬಘೀರಾ 2024 ರ ಬಹು ನಿರೀಕ್ಷಿತ ಕನ್ನಡ ಚಲನಚಿತ್ರಗಳಲ್ಲಿ ಒಂದು. ಮದಗಜ ಸಿನಿಮಾ ಬಳಿಕ ಶ್ರೀ ಮುರಳಿ ಮತ್ತೆ ಥಿಯೇಟರ್ ಕಡೆಗೆ ಬರುತ್ತಿದ್ದಾರೆ. ಚಿತ್ರದ ಟೀಸರ್ ಮತ್ತು ಫೊಸ್ಟರ್ ಶ್ರೀ ಮುರುಳಿ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್‌ನ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಸೂರಿ ನಿರ್ದೇಶಿಸಿದ್ದಾರೆ.
45
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನ '45' ಸಿನಿಮಾದಲ್ಲಿ ನಟ ಶಿವರಾಜಕುಮಾರ್ ನಟಿಸಲಿದ್ದಾರೆ. ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಿರ್ಣಾಯಕ ಪಾತ್ರಗಳಲ್ಲಿ ನಟಿಸಿದರೆ, ಕಿರುತೆರೆ ನಟಿ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ನೆಲ್ಸನ್
ವಿನೋದ್ ಪ್ರಭಾಕರ್ ನಾಯಕನಾಗಿರುವ ನೆಲ್ಸನ್ ಸಿನಿಮಾವನ್ನು ನಿರ್ದೇಶಕ ಅರುಣ್ ಕುಮಾರ್ ನಿರ್ದೇಶಿಸಿದ್ದಾರೆ. ವರದಿಗಳ ಪ್ರಕಾರ, ಆಕ್ಷನ್ ಎಂಟರ್ಟೈನರ್ ಜೊತೆಗೆ ಜಾನಪದ ಅಂಶಗಳನ್ನು ತುಂಬಲಾಗಿದೆ. 60ರಿಂದ 90ರ ದಶಕದವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ನೈಜ ಕಥೆಯನ್ನು ಆಧರಿಸಿದ ಚಿತ್ರವಾಗಿದೆ.
ಬೆಲ್ ಬಾಟಮ್ 2
ಬೆಲ್ ಬಾಟಮ್ ಸಿನಿಮಾ ರಿಷಬ್ ಶೆಟ್ಟಿ 2019 ರಲ್ಲಿ ನಟಿಸಿದ ಹಾಸ್ಯ ಮತ್ತು ಥ್ರಿಲ್ಲರ್ ಸಿನಿಮಾ. ಈಗ ಐದು ವರ್ಷಗಳ ನಂತರ, ನಿರ್ಮಾಪಕರು ಬೆಲ್ ಬಾಟಮ್ 2 ಎಂಬ ಚಿತ್ರದ ಸೀಕ್ವೇಲ್ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರಿಷಬ್ ಶೆಟ್ಟಿ ಎರಡನೇ ಭಾಗದಲ್ಲಿಯೂ ಡಿಟೆಕ್ಟಿವ್ ದಿವಾಕರನ ಪಾತ್ರವನ್ನು ನಿರ್ವಹಿಸುತ್ತಾರೆ. ಚಿತ್ರವನ್ನು ಜಯತೀರ್ಥ ನಿರ್ದೇಶಿಸಲಿದ್ದಾರೆ.


Click it and Unblock the Notifications











