Happy New Year 2026: ಹೊಸ ವರ್ಷಕ್ಕೆ ಬಹುನಿರೀಕ್ಷಿತ ಚಿತ್ರಗಳ ಹೊಚ್ಚ ಹೊಸ ಪೋಸ್ಟರ್‌ಗಳು
2025 ಕಳೆದ 2026 ವರ್ಷ ಶುರುವಾಗಿದೆ. ಬಹಳ ಅದ್ಧೂರಿಯಾಗಿ ಜನ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಸಿನಿಮಾ ತಾರೆಯರು ವಿಶೇಷವಾಗಿ ಆಪ್ತರ ಜೊತೆ ಹೊಸ ವರ್ಷದ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಇನ್ನು ಹೊಸ ವರ್ಷದ ಸಂಭ್ರಮದಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಹೊಸ ಹೊಸ ಪೋಸ್ಟರ್ ರಿಲೀಸ್ ಆಗಿದೆ.
1. ಸ್ಪಿರಿಟ್
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ 'ಸ್ಪಿರಿಟ್'. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಅರ್ಜುನ್ ರೆಡ್ಡಿ ಹಾಗೂ ಅನಿಮಲ್ ಸಿನಿಮಾಗಳ ಸಾರಥಿ ವಂಗಾ ಈಗ ಪ್ರಭಾಸ್ ಜೊತೆ ಕೈಜೋಡಿಸಿರುವುದು ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಗಾಯಗೊಂಡು ಬ್ಯಾಂಡೇಜ್ ಸುಟ್ಟಿಕೊಂಡು ಶರ್ಟ್‌ಲೆಸ್ ಆಗಿ ಸಿಗರೇಟ್ ಸೇದುತ್ತಾ ಪ್ರಭಾಸ್ ಕಾಣಿಸಿಕೊಂಡಿರುವ ಪೋಸ್ಟರ್ ರಿಲೀಸ್ ಆಗಿದೆ. ಹೊಸ ವರ್ಷಕ್ಕೆ ಪ್ರಭಾಸ್ ಅಭಿಮಾನಿಗಳು ಭರ್ಜರಿ ಗಿಫ್ಟ್ ಸಿಕ್ಕಂತಾಗಿದೆ.

2. ಡ್ಯಾಡ್
ಶಿವರಾಜ್‌ಕುಮಾರ್ ನಟನೆಯ 'ಡ್ಯಾಡ್' ಚಿತ್ರಕ್ಕೆ ಅನಿಲ್ ಕನ್ನೆಗಂಟಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಶಿವಣ್ಣ ವೈದ್ಯನ ಪಾತ್ರದಲ್ಲಿ ನಟಿಸಿದ್ದು ತಂದೆ- ಮಗಳ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ ಚಿತ್ರದ ತಾರಾಗಣದಲ್ಲಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಹೊಸ ವರ್ಷಕ್ಕೆ ಚಿತ್ರದ ಮತ್ತೊಂದು ಪೋಸ್ಟರ್ ಹೊರಬಿದ್ದಿದೆ.
3. ಭಾರ್ಗವ
ಉಪೇಂದ್ರ ನಟನೆಯ '45' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಸ ವರ್ಷದ ಸಂಭ್ರಮದಲ್ಲಿ ತಮ್ಮ ಮುಂದಿನ ಸಿನಿಮಾ ಪೋಸ್ಟರ್‌ಗಳನ್ನು ಉಪ್ಪಿ ಹಂಚಿಕೊಂಡಿದ್ದಾರೆ. ನಾಗಣ್ಣ ನಿರ್ದೇಶನದ 'ಭಾರ್ಗವ' ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಎಂಬಿ ಬಾಬು ಚಿತ್ರಕ್ಕೆ ಹಣ ಹೂಡಿದ್ದಾರೆ.

4. ಟಾಕ್ಸಿಕ್
ಯಶ್ ನಿರ್ಮಿಸಿ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈ ಚಿತ್ರದ ಮಹಿಳಾ ಪಾತ್ರಗಳನ್ನು ಇತ್ತೀಚೆಗೆ ಫಸ್ಟ್ ಲುಕ್ ಪೋಸ್ಟರ್ ಸಮೇತ ಚಿತ್ರತಂಡ ಪರಿಚಯಿಸಿತ್ತು. ಎರಡು ದಿನಗಳ ಹಿಂದೆಯಷ್ಟೆ ನಯನತಾರ ಪಾತ್ರ ಪರಿಚಯ ಮಾಡಿಕೊಡಲಾಗಿತ್ತು. ಗಂಗಾ ಎಂಬ ಪವರ್‌ಫುಲ್ ಪಾತ್ರದಲ್ಲಿ ಆಕೆ ನಟಿಸುತ್ತಿದ್ದಾರೆ.
ಇನ್ನುಳಿದಂತೆ 'ಸೀತಾ ಪಯಣಂ', 'ಪಬ್ಬಾರ್' ಸೇರಿದಂತೆ ಸಾಕಷ್ಟು ಚಿತ್ರತಂಡಗಳು ಹೊಸ ಪೋಸ್ಟರ್ ಸಮೇತ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.


Click it and Unblock the Notifications











