ಹೊಸಬರ 'ಜುಗಲ್ ಬಂದಿ'ಗೆ ಸಾಥ್ ಕೊಟ್ಟ 'ಕಾಂತಾರ' ಕಮಲಾ: ಟ್ರೈಲರ್ ಸಖತ್ ಇಂಟ್ರೆಸ್ಟಿಂಗ್

By ಫಿಲ್ಮಿಬೀಟ್ ಡೆಸ್ಕ್

ಪ್ಯಾನ್ ಇಂಡಿಯಾದ ಅಬ್ಬರದಲ್ಲೂ ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಸಿನಿಮಾಗಳು ಸದ್ದು ಮಾಡುತ್ತಿವೆ. ವಿನೂತನ ಕಂಟೆಂಟ್‌ನಿಂದ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಸದ್ಯ ಇಂತಹದ್ದೇ ಒಂದು ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅದುವೇ 'ಜುಗಲ್ ಬಂದಿ'.

ಹೊಸಬರ 'ಜುಗಲ್ ಬಂದಿ'ಯನ್ನು ದಿವಾಕರ ಡಿಂಡಿಮ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನಿರ್ದೇಶಕರಿಗೆ ಚೊಚ್ಚಲ ಪ್ರಯತ್ನ. ಈ ಚಿತ್ರದ ಪೋಸ್ಟರ್ ಪ್ರೇಕ್ಷಕರನ್ನು ಕುತೂಹಲವನ್ನು ಹೆಚ್ಚಿಸುತ್ತಿದೆ. ಇದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕತೆಯನ್ನು ಒಳಗೊಂಡಿರುವುದರಿಂದ ಸಿನಿಪ್ರೇಮಿಗಳಿಗೆ ಇಷ್ಟ ಆಗುತ್ತೆ ಅನ್ನೋ ಭರವಸೆಯಲ್ಲಿ ಚಿತ್ರತಂಡವಿದೆ.

Newcomers Movie Jugal Bandi trailer Released And Getting Good Response

ಈಗಾಗಲೇ ಸಿನಿಮಾ ಫಸ್ಟ್ ಲುಕ್ ಹಾಗೂ ಹಾಡುಗಳು ಪ್ರೇಕ್ಷಕರಿಗೆ ಇಷ್ಟ ಆಗಿವೆ. ಹೀಗಾಗಿ ಹೊಸಬರ 'ಜುಗಲ್ ಬಂದಿ' ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆಯೂ ಗಮನ ಸೆಳೆಯುತ್ತಿದೆ. ಈಗ ಟ್ರೈಲರ್ ಎಲ್ಲರ ಮೂಲಕ ಸೆಳೆಯುತ್ತಿದೆ.

ಅಂದ್ಹಾಗೆ 'ಜುಗಲ್ ಬಂದಿ' ಒಂದೇ ಕತೆಯ ಸಿನಿಮಾ ಅಲ್ಲ. ಇದು ಹಲವು ಕಥೆಗಳ ಸಂಗಮ. ಹೀಗಾಗಿ ಕುತೂಹಲ ದುಪ್ಪಟ್ಟು ಮಾಡಿದೆ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆಯನ್ನು ಈ ಟ್ರೈಲರ್ ಒಳಗೊಂಡಿದೆ. ಅಲ್ಲದೆ ಕಾಮಿಡಿ ಸನ್ನಿವೇಶಗಳು ಸಾಕಷ್ಟಿವೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಎಲ್ಲಾ ಎಲಿಮೆಂಟ್ಸ್‌ ಕೂಡ ಇರುವುದರಿಂದ ಪ್ರೇಕ್ಷಕರಿಗೆ ಇಷ್ಟ ಆಗುವ ಸಾಧ್ಯತೆಯಿದೆ.

'ಕಾಂತಾರ' ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ತಾಯಿ ಪಾತ್ರದಲ್ಲಿ ನಟಿಸಿದ್ದ ಮಾನಸಿ ಸುಧೀರ್ ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳು. ಹಾಗೇ ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ 'ಜುಗಲ್ ಬಂದಿ' ಸಿನಿಮಾದಲ್ಲಿ ನಟಿಸಿದ್ದಾರೆ.

ದಿವಾಕರ ಡಿಂಡಿಮ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಇವರದ್ದೇ. ಪ್ರದ್ಯೋತ್ತನ್ ಸಂಗೀತ ನೀಡಿದ್ರೆ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಅವರೇ ಸಾಹಿತ್ಯ ರಚಿಸಿದ್ದಾರೆ.

More from Filmibeat

English summary
Newcomers Movie Jugal Bandi trailer Released And Getting Good Response. Diwakar Dimdima directing this movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X