»   » ಪ್ರೇಮಿ ನಂ1, ಜಿಪುಣಗಂಡ, ಅಪರಂಜಿ ಮಕ್ಕಳು

ಪ್ರೇಮಿ ನಂ1, ಜಿಪುಣಗಂಡ, ಅಪರಂಜಿ ಮಕ್ಕಳು

Posted By: Staff
Subscribe to Filmibeat Kannada

ಜಿತೇಂದ್ರನಾಗಿ ಮುಗ್ಗರಿಸಿದ ಜಗ್ಗೇಶ್‌ ಈಗ 'ಜಿಪುಣ ಗಂಡ"ನಾಗಿ ತೆರೆಗೆ ಬಂದಿದ್ದಾರೆ. ಈ ಶುಕ್ರವಾರ ತೆರೆಕಂಡ 3 ಕನ್ನಡ ಚಿತ್ರಗಳ ಪೈಕಿ ಇದೂ ಒಂದು. ಹೇಳಿ ಕೇಳಿ ಇದು ರೆಡೀಮೇಡ್‌ ಚಿತ್ರ (ರಿಮೇಕ್‌ -- ಫಾಸ್ಟ್‌ಫುಡ್‌) ಆದ ಕಾರಣ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮುಗಿದದ್ದೂ ಎಲ್ಲಾ ಸಕತ್‌ ಫಾಸ್ಟ್‌.

ತಮಿಳಿನಲ್ಲಿ ಯಶಸ್ಸು ಕಂಡ 'ಬಜೆಟ್‌ ಪದ್ಮನಾಭನ್‌" ಚಿತ್ರದ ಕನ್ನಡ ರೂಪಾಂತರ ಈ 'ಜಿಪುಣ ನನ್ನ ಗಂಡ". ಶುಕ್ರದೆಸೆ ಕೈಕೊಟ್ಟ ಮೇಲೆ, ಜಿತೇಂದ್ರನಾಗಿ ಲೋಕಕ್ಕೇ ಬುದ್ಧಿ ಹೇಳಲು ಹೋದ ಜಗ್ಗೇಶ್‌ಗೆ ಇನ್ನು ಮುಂದೆ ದಯವಿಟ್ಟು ನೀವು ನಟಿಸಬೇಡಿ ಎಂದು ಜನರೇ ಬುದ್ಧಿ ಹೇಳಿದರು.

ಆದರೂ ಛಲಬಿಡದ ವಿಕ್ರಮನಂತೆ ಮರಳಿ ಪ್ರಯತ್ನಿಸುತ್ತಿರುವ ಜಗ್ಗೇಶ್‌ ಈಗ ಜಿಪುಣ ಗಂಡನಾಗಿ ಕಳೆದುಕೊಂಡ ಇಮೇಜ್‌ ಮತ್ತೆ ಪಡೆಯುವ ಪ್ರಯತ್ನ ಮಾಡ್ತಾ ಇದ್ದಾರೆ. ಅಳಿಯನ ಕುರುಡು ಬೆಳಗಾದ ಮೇಲೆ ಅನ್ನೋ ಹಾಗೆ.. ಒಂದೆರಡು ದಿನದಲ್ಲೇ ರಿಸಲ್ಟ್‌ ಸಿಕ್ಕೇ ಸಿಗತ್ತೆ ಬಿಡಿ.

ಅಂದಹಾಗೆ ಶ್ರೀನಿವಾಸ್‌ ಸುಷ್ಮಾ ಫಿಲಂಸ್‌ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ಜಗ್ಗೇಶ್‌, ರವಳಿ, ಮುಖ್ಯಮಂತ್ರಿ ಚಂದ್ರು, ಕೋಮಲ್‌, ಬ್ಯಾಂಕ್‌ ಜನಾರ್ದನ್‌, ಉಮಾಶ್ರೀ, ಸಾಧುಕೋಕಿಲಾ, ಲೋಕೇಶ್‌, ಗಿರಿಜಾ ಲೋಕೇಶ್‌ ನಟಿಸಿದ್ದಾರೆ. ಜೆ.ಜಿ. ಕೃಷ್ಣ ಚಿತ್ರದ ನಿರ್ದೇಶಕರು.

ಪ್ರೇಮಿ ನಂ 1 : ಕನ್ನಡದ ಭರವಸೆಯ ನಟ - ನಟಿ ರಮೇಶ್‌ ಹಾಗೂ ಪ್ರೇಮಾ ನಟಿಸಿರುವ ಈ ಚಿತ್ರವೂ ರಿಮೇಕೇ.. ಕೋಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರ ಭಾಗ್ಯರಾಜ್‌ ಅವರ ಡಾರ್ಲಿಂಗ್‌ ಡಾರ್ಲಿಂಗ್‌ನ ನಕಲು.

ಚಿತ್ರದಲ್ಲಿ ರಮೇಶ್‌, ಪ್ರೇಮಾ, ಶ್ರೀನಾಥ್‌, ಶ್ರೀನಿವಾಸಮೂರ್ತಿ, ಕರಿಬಸಯ್ಯ, ಮನ್‌ದೀಪ್‌ ರಾಯ್‌, ಮಾ. ದುಶ್ಯಂತ್‌, ಬೇಬಿ ಅರ್ಪಿತಾ ಇದ್ದಾರೆ.

ಅಪರಂಜಿ ಮಕ್ಕಳು : ಈ ವಾರ ತೆರೆಕಾಣುತ್ತಿರುವ ಮತ್ತೊಂದ ಚಿತ್ರ ಅಪರಂಜಿ ಮಕ್ಕಳು. ಬೇಸಿಗೆ ರಜೆಯಲ್ಲಿ ಸಾಮಾನ್ಯವಾಗಿ ಮಕ್ಕಳ ಚಿತ್ರವೊಂದು ತೆರೆಕಾಣದಿದ್ದರೆ ಹೇಗೆ ಎಂಬ ಕೊರಗನ್ನು ಈ ಚಿತ್ರ ನಿವಾರಿಸಿದೆ. ನೃಪತುಂಗರ ಚಿತ್ರಸಾಹಿತ್ಯ, ನಿರ್ದೇಶನದ ಈ ಚಿತ್ರ ಮಕ್ಕಳಿಗೂ - ಶಿಕ್ಷಕರಿಗೂ ರಾಷ್ಟ್ರ ಕಟ್ಟುವುದು ಹೇಗೆ ಎಂಬ ನೀತಿ ಪಾಠ ಹೇಳಿದೆ.

ನಾಳಿನ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಹೊಣೆಗಾರಿಕೆಯನ್ನು ತಿಳಿಸಿದೆ. ತುಳಸಿ ಗಣೇಶ್‌ ಛಾಯಾಗ್ರಹಣ, ರಾಜಹಂಸ ಸಂಗೀತ ಅಪರಂಜಿ ಮಕ್ಕಳಿಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ಮಾ. ವಿಶ್ವಾಸ್‌ ಜತೆಗೆ ಪುಟಾಣಿಗಳಾದ ರಹೀಂ, ರಾಜೀವ್‌ ಇದ್ದಾರೆ. ರಂಗಶ್ರೀರಂಗಸ್ವಾಮಿ, ಶಾರದಮ್ಮ, ಚಂದ್ರ ಕಿರಣ್‌ ಇತರ ಕಲಾವಿದರು.

English summary
premi no.1, jipuna nanna ganda, aparangi makkalu on the screen
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada