»   » ಅಂತೆ-ಕಂತೆಯೆಲ್ಲ ಸುಳ್ಳಿನ ಬೊಂತೆ ಎಂದ ನಟಿ ರಮ್ಯಾ

ಅಂತೆ-ಕಂತೆಯೆಲ್ಲ ಸುಳ್ಳಿನ ಬೊಂತೆ ಎಂದ ನಟಿ ರಮ್ಯಾ

Posted By:
Subscribe to Filmibeat Kannada
Ramya, Kannada Actress

ಒಂದ್ಕಾಲದಲ್ಲಿ ಇಡೀ ಗಾಂಧಿನಗರಕ್ಕೆ ರಾಣಿ ಆಗಿ ಮೆರೆದ ನಟಿ ರಮ್ಯಾ ಈಗ ರಾಜಕೀಯದಲ್ಲಿಯೇ ಬಿಜಿ. ರಾಜಕೀಯಕ್ಕೆ ಧುಮುಕಿದ ಮೇಲೆ ಗಾಂಧಿನಗರದ ಕಡೆ ತಿರುಗಿ ನೋಡದ ಪದ್ಮಾವತಿ ಬಗ್ಗೆ ನಿನ್ನೆ ಒಂದು ಸುದ್ದಿ ಹರಿದಾಡಿತ್ತು.

ನಟಿ ರಮ್ಯಾ ಬಗ್ಗೆ ಹೀಗೊಂದು ಗುಸುಗುಸು.. ಪಿಸುಪಿಸು.. ಸುದ್ದಿ!

'ಮಹೇಂದರ್ ಮನಸಲ್ಲಿ ಮುಮ್ತಾಜ್' ಎಂಬ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿ ರಮ್ಯಾ ಬಣ್ಣ ಹಚ್ಚಲಿದ್ದಾರಂತೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಇದೀಗ ಇದೇ ವಿಚಾರದ ಬಗ್ಗೆ ನಟಿ ರಮ್ಯಾ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿರಿ...

'ಮಹೇಂದರ್ ಮನಸಲ್ಲಿ ಮುಮ್ತಾಜ್' ಚಿತ್ರದಲ್ಲಿ ಕಾಣಿಸಿಕೊಳ್ತಾರಾ ರಮ್ಯಾ.?

ಮಾಜಿ ಸಂಸದೆ ರಮ್ಯಾ ಮರಳಿ ಚಿತ್ರರಂಗಕ್ಕೆ ಬರಬೇಕು, ಬೆಳ್ಳಿಪರದೆ ಮೇಲೆ ಮಿಂಚಬೇಕು ಎಂಬ ಆಸೆ ಅವರ ಅಭಿಮಾನಿಗಳಿಗೆ ಇದ್ದೇ ಇದೆ. ಈ ಆಸೆ 'ಮಹೇಂದರ್ ಮನಸಲ್ಲಿ ಮುಮ್ತಾಜ್' ಚಿತ್ರದ ಮೂಲಕ ಈಡೇರಬಹುದಾ.? ಎಂಬ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರ ಕೊಟ್ಟಿದ್ದಾರೆ.

ಸುಳ್ಳಿನ ಬೊಂತೆ ಎಂದ ನಟಿ ರಮ್ಯಾ

''ಮಹೇಂದರ್ ಮನಸಲ್ಲಿ ಮುಮ್ತಾಜ್' ಚಿತ್ರದಲ್ಲಿ ನಾನು ನಟಿಸಲಿದ್ದೇನೆ ಎನ್ನುವುದು ಸುಳ್ಳು ಸುದ್ದಿ'' ಎಂದಿದ್ದಾರೆ ನಟಿ ರಮ್ಯಾ.

ಸಿನಿಮಾ ಮಾಡಲ್ಲ ಎಂದಿದ್ದ ರಮ್ಯಾ

ರಾಜಕಾರಣದಲ್ಲಿ ಸಕ್ರಿಯರಾಗಿರುವ ರಮ್ಯಾ 'ಇನ್ಮುಂದೆ ಸಿನಿಮಾ ಮಾಡಲ್ಲ' ಎಂದು ವರ್ಷದ ಹಿಂದೆಯೇ ಹೇಳಿದ್ದರು. ''ಸಿನಿಮಾಗಳಲ್ಲಿ ಅಭಿನಯಿಸಲು ಇದು ಸೂಕ್ತ ಕಾಲವಲ್ಲ. ಹಾಗಾಗಿ ಇನ್ನು ಮೇಲೆ ನಾನು ಯಾವುದೇ ಸಿನಿಮಾಗಳಿಗೆ ಬಣ್ಣ ಹಚ್ಚೋದಿಲ್ಲ. ರಾಜಕೀಯದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ'' ಎಂದಿದ್ದರು ರಮ್ಯಾ.

ಸ್ಯಾಂಡಲ್ ವುಡ್ ಗೆ ಬಾಯ್ ಬಾಯ್ ಹೇಳಿದ ಲಕ್ಕಿ ಸ್ಟಾರ್ ರಮ್ಯಾ

'ಮಹೇಂದರ್ ಮನಸಲ್ಲಿ ಮುಮ್ತಾಜ್' ಕುರಿತು

'ಮಹೇಂದರ್ ಮನಸಲ್ಲಿ ಮುಮ್ತಾಜ್' ಚಿತ್ರಕ್ಕೆ ಎಸ್.ಮಹೇಂದರ್ ಆಕ್ಷನ್ ಕಟ್ ಹೇಳಿದ್ರೆ, ನಾಗಶೇಖರ್ ಬಂಡವಾಳ ಹಾಕಲಿದ್ದಾರೆ. ಚಿತ್ರಕ್ಕೆ ಗಣೇಶ್ ನಾಯಕ ಎನ್ನಲಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಕಥೆ ಇದಾಗಿದ್ದು, ಪಾಕಿಸ್ತಾನಿ ಹುಡುಗಿಯನ್ನ ನಾಯಕಿಯಾಗಿ ಕರೆತರುವ ಸಾಧ್ಯತೆ ಇದೆ.

English summary
News Regarding being part of Kannada Movie 'Mahendar Manassalli Mumtaz' is not true says Kannada Actress, EX MP Ramya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada