ನಾನೇನು ಓಡಿಹೋಗಿ ಮದುವೆಯಾಗಲ್ಲ; ಎರಡನೇ ಮದುವೆ ವಿಚಾರದ ಬಗ್ಗೆ ತುಟಿ ಬಿಚ್ಚಿದ ನಟಿ ಪ್ರೇಮ

ಕಳೆದ ವಾರ ನಟಿ ಪ್ರೇಮ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಉಡುಪಿಯ ಕಾಪುವಿನಲ್ಲಿರುವ ಕೊರಗಜ್ಜ ದೇವಸ್ಥಾನಕ್ಕೆ ನಟಿ ಪ್ರೇಮ ಭೇಟಿ ನೀಡಿದ್ದರು. ಎರಡನೇ ಮದುವೆಯ ಕುರಿತಾಗಿ ದೇವರ ಬಳಿ ಕೇಳಲು ಪ್ರೇಮ ಅಲ್ಲಿಗೆ ತೆರಳಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇನ್ನು ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೂ ಪ್ರತಿಕ್ರಿಯಿಸದೇ ಇದ್ದ ನಟಿ ಪ್ರೇಮ ಈಗ ಮಾಧ್ಯಮಗಳ ಜತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಅಂದು ತಾನು ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಗೆಳತಿಯ ಮದುವೆ ಇದ್ದ ಕಾರಣದಿಂದ ಎಂದು ತಿಳಿಸಿದ ಪ್ರೇಮ ತನ್ನ ಮದುವೆ ಎಂದು ಸುದ್ದಿ ಹಬ್ಬಿದ್ದರ ವಿರುದ್ಧ ಕಿಡಿಕಾರಿದರು. ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸುವುದು ಬೇಡ, ನಾನು ಎಲ್ಲಿಯೂ ಮದುವೆ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ ಎಂದು ಎರಡನೇ ಮದುವೆ ಸುದ್ದಿಯನ್ನು ತಳ್ಳಿ ಹಾಕಿದ ಪ್ರೇಮ ನಾನು ಈಗಲೇ ಮದುವೆಯಾಗುವುದಿಲ್ಲ, ಜೀವನದಲ್ಲಿ ದೊಡ್ಡ ಸಾಧನೆ ಮಾಡುವುದು ಸಾಕಷ್ಟಿದೆ, ಮದುವೆಯಾಗಲು ಕಂಕಣ ಭಾಗ್ಯ ಕೂಡಿ ಬರಬೇಕು, ಆ ಸಮಯ ಬಂದಾಗ ನಾನೇ ತಿಳಿಸುತ್ತೇನೆ, ನಾನು ಓಡಿಹೋಗಿ ಮದುವೆಯಾಗಲ್ಲ ಎಂದು ಹೇಳಿಕೆ ನೀಡಿದರು.

 News spreading about my second marriage are baseless says actress Prema

ಅಷ್ಟೇ ಅಲ್ಲದೇ ಇಲ್ಲಿಯವರೆಗೂ ತನ್ನನ್ನು ಬೆಂಬಲಿಸುತ್ತಾ, ಬೆಳೆಸುತ್ತಾ ಬಂದಿರುವ ಪ್ರೇಕ್ಷಕರಿಗೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಯೋಜನೆ ಇದೆ ಎಂದ ಪ್ರೇಮ ನಾನು ಮದುವೆ ಕುರಿತಾಗಿ ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ, ಅದು ಮಹಿಳೆಯ ವೈಯಕ್ತಿಕ ವಿಚಾರ, ಇಂಡಸ್ಟ್ರಿಯಲ್ಲಿ ನಾನು ಗಟ್ಟಿಯಾಗಿ ನಿಲ್ಲಬೇಕೆಂದರೆ ಹಲವಾರು ಅಡೆತಡೆಗಳು ಬಂದವು, ಆದರೆ ಅದ್ಯಾವುದಕ್ಕೂ ನಾನು ಜಗ್ಗಲಿಲ್ಲ ಎಂದೂ ಸಹ ಹೇಳಿಕೆ ನೀಡಿದರು.

More from Filmibeat

English summary
News spreading about my second marriage are baseless says actress Prema. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X