ಮಂಡ್ಯ ಎಲೆಕ್ಷನ್ ಮುಗಿತು..ಮದುವೆಗಳ ಸಂಭ್ರಮವೂ ಮುಗಿತು..ಮುಂದೇನು?

Recommended Video

ಚುನಾವಣೆ ಮುಗೀತು..ಮದುವೆಗಳು ಮುಗಿತು | ಸ್ಯಾಂಡಲ್ ವುಡ್ ನಲ್ಲಿ ಮುಂದೇನು? | FILMIBEAT KANNADA

ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಂಡ್ಯ ರಾಜಕಾರಣದ ಬಗ್ಗೆಯೇ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ನಡೆಯುತ್ತಿತ್ತು. ಸುಮಲತಾ ಮತ್ತು ನಿಖಿಲ್ ಕುಮಾರ್ ಸ್ಪರ್ಧೆ ಒಂದು ಕಡೆಯಾಗಿದ್ದರೆ, ದರ್ಶನ್ ಮತ್ತು ಯಶ್ ಜೋಡೆತ್ತು ಪ್ರಚಾರ ಮತ್ತಷ್ಟು ಸದ್ದು ಮಾಡಿತ್ತು. ಈಗ ಎಲೆಕ್ಷನ್ ಮುಗಿದಿದೆ. ಚರ್ಚೆ, ಟೀಕೆ, ಟಿಪ್ಪಣಿ ಎಲ್ಲವೂ ನಿಂತಿದೆ.

ಮಂಡ್ಯ ಚುನಾವಣೆ ಮುಗಿಯುತ್ತಿದ್ದಂತೆ ಮದ್ವೆ ಸಂಭ್ರಮಕ್ಕೆ ಚಂದನವನ ಸಾಕ್ಷಿಯಾಗಿತ್ತು. ಡಾ ರಾಜ್ ಮೊಮ್ಮಗ ಯುವರಾಜ್ ಕುಮಾರ್ ಮದುವೆ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ಬ್ಯಾಕ್ ಟು ಬ್ಯಾಕ್ ನಿಗದಿಯಾಗಿತ್ತು.

ಈ ಮದುವೆ ಸಂಭ್ರಮದಲ್ಲಿ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿತ್ತು. ಎಲೆಕ್ಷನ್ ಮುಗಿತು, ಮದ್ವೆನೂ ಮುಗಿತು, ಕನ್ನಡ ಚಿತ್ರರಂಗದಲ್ಲಿ ಮುಂದೇನು ಎಂಬುದು ಈಗ ಕುತೂಹಲ. ಮುಂದೆ ಸ್ಯಾಂಡಲ್ ವುಡ್ ನಲ್ಲಿ ಏನೆಲ್ಲಾ ನಡೆಯಲಿದೆ ಎಂಬುದರ ಪಟ್ಟಿ ಇಲ್ಲಿದೆ.! ಮುಂದೆ ಓದಿ.....

ಕುರುಕ್ಷೇತ್ರ, ಪೈಲ್ವಾನ್ ಸಿನಿಮಾ

ಕುರುಕ್ಷೇತ್ರ, ಪೈಲ್ವಾನ್ ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಆಗಸ್ಟ್ 8 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಚಾರವೇ ಮುಂದಿನ ದಿನದಲ್ಲಿ ಸದ್ದು ಮಾಡಲಿದೆ. ಅದೆ ದಿನ ತೆರೆಗೆ ಬರುವ ತಯಾರಿಯಲ್ಲಿರುವ ಪೈಲ್ವಾನ್ ಚಿತ್ರವೂ ಕೂಡ ಟ್ರೈಲರ್, ಆಡಿಯೋ ಅಂತ ಸದ್ದು ಮಾಡಲಿದೆ.

ಕುರುಕ್ಷೇತ್ರ ಗೊಂದಲವೂ ಆಗಬಹುದು.!

ಕುರುಕ್ಷೇತ್ರ ಗೊಂದಲವೂ ಆಗಬಹುದು.!

ಕುರುಕ್ಷೇತ್ರ ಚಿತ್ರದ ಆಡಿಯೋ, ಟ್ರೈಲರ್ ಸಂಭ್ರಮ ಮಾತ್ರವಲ್ಲ ಗೊಂದಲವೂ ಆಗಬಹುದು. ಮಂಡ್ಯ ಚುನಾವಣೆಯಲ್ಲಿ ಎದುರಾಳಿಗಳಾಗಿ ಪ್ರಚಾರ ಮಾಡಿದ್ದ ದರ್ಶನ್ ಮತ್ತು ಯಶ್ ಈ ಚಿತ್ರದ ಪ್ರಚಾರಕ್ಕಾಗಿ ಒಂದೇ ವೇದಿಕೆ ಹಂಚಿಕೊಂಡರು ಸುದ್ದಿ ಆಗುತ್ತೆ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ ಅಂದ್ರೂ ಸುದ್ದಿಯಾಗುತ್ತೆ. ಮುಂದಿನ ದಿನದಲ್ಲಿ ಇದರ ಬಗ್ಗೆ ಎಲ್ಲರ ಗಮನವಿದೆ.

ಯಶ್ ಮಗಳ ನಾಮಕರಣ

ಯಶ್ ಮಗಳ ನಾಮಕರಣ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದು ಮಗಳಿಗೆ ನಾಮಕರಣವಾಗಬೇಕಿದೆ. ಏನು ಹೆಸರಿಡುತ್ತಿದ್ದಾರೆ ಎಂಬುದರ ಬಗ್ಗೆ ಭಾರಿ ಕುತೂಹಲವಿದೆ. ಬಹುಶಃ ಅಧಿಕೃತವಾಗಿ ಕಾರ್ಯಕ್ರಮ ಮಾಡಿ ನಾಮಕರಣ ಮಾಡಬಹುದು ಅಥವಾ ಖಾಸಗಿಯಾಗಿ ಮನೆಯವರೇ ಸೇರಿ ಸಣ್ಣ ಕಾರ್ಯಕ್ರಮ ಮಾಡಬಹುದು. ಬಟ್, ಹೆಸರೇನು ಎಂಬುದು ಮುಂದಿನ ದಿನದಲ್ಲಿ ಚರ್ಚೆಯಾಗಬಹುದು.

ಕೆಜಿಎಫ್-2 ಅಪ್ಡೇಟ್

ಕೆಜಿಎಫ್-2 ಅಪ್ಡೇಟ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಗ್ಗೆ ಸದ್ಯಕ್ಕೆ ಯಾವುದೇ ಅಪ್ಡೇಟ್ ಇಲ್ಲ. ಮುಂದಿನ ದಿನದಲ್ಲಿ ಯಶ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹಾಗಾಗಿ, ಇನ್ನು ಮುಂದೆ ಕೆಜಿಎಫ್ 2 ಚಿತ್ರದ ಕುರಿತು ಒಂದಲ್ಲ ಒಂದು ಸುದ್ದಿ ಬರುತ್ತಲೇ ಇರುತ್ತೆ.

ಗಂಡುಗಲಿ ಮದಕರಿ ನಾಯಕ

ಗಂಡುಗಲಿ ಮದಕರಿ ನಾಯಕ

ಕುರುಕ್ಷೇತ್ರ ನಂತರ ಭಾರಿ ಸದ್ದು ಮಾಡಿದ್ದ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಇಷ್ಟೊತ್ತಿಗಾಗಲೇ ಆರಂಭವಾಗಬೇಕಿತ್ತು. ಆದರೆ, ಅಂಬರೀಶ್ ನಿಧನ, ಮಂಡ್ಯ ಎಲೆಕ್ಷನ್ ನಲ್ಲಿ ನಿರ್ಮಾಪಕ ರಾಕ್ ಲೈನ್ ಹಾಗೂ ನಟ ದರ್ಶನ್ ಬ್ಯುಸಿ ಇದ್ದರಿಂದ ಈ ಸಿನಿಮಾ ಆರಂಭವಾಗಿರಲಿಲ್ಲ. ಈಗ ಎಲ್ಲವೂ ಮುಗಿದಿದೆ. ಬಹುಶಃ ಗಂಡುಗಲಿ ಮದಕರಿ ನಾಯಕ ಚಿತ್ರದ ಮುಹೂರ್ತ ಮಾಡಬಹುದು.

ನಿರೀಕ್ಷೆಯ ಚಿತ್ರಗಳು ಇದ್ದೇ ಇದೆ

ನಿರೀಕ್ಷೆಯ ಚಿತ್ರಗಳು ಇದ್ದೇ ಇದೆ

ಮೇಲಿನ ವಿಷ್ಯಗಳು ಕೆಲವು ನಿರ್ದಿಷ್ಟ ಕಾರಣದಿಂದ ಸುದ್ದಿಯಾಗಲಿದೆ. ಅದನ್ನ ಬಿಟ್ಟು ಕೂಡ ಕೆಲವು ಸಿನಿಮಾಗಳು ಸದ್ದು ಮಾಡಲಿವೆ. ರಕ್ಷಿತ್ ಶೆಟ್ಟಿ ಅಭಿನಯದ ಶ್ರೀಮನ್ನಾರಾಯಣ, ಶಿವಣ್ಣನ ರುಸ್ತುಂ, ಪುನೀತ್ ಅಭಿನಯದ ಯುವರತ್ನ, ದುನಿಯಾ ವಿಜಯ್ ಸಲಗ, ಉಪ್ಪಿಯ ಐ ಲವ್ ಯೂ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿದೆ.

More from Filmibeat

English summary
Mandya lok sabha election finished. ravichandran daughter marriage and Raghavendra rajkumar son's marriage also finished. what is the Next Developments in sandalwood? here is the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X