ಬ್ರೇಕಿಂಗ್: 'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ಸುಧಾರಾಣಿ ಪುತ್ರಿ ಬೆಳ್ಳಿತೆರೆಗೆ.!

'ಜೋಗಿ' ಖ್ಯಾತಿಯ ಪ್ರೇಮ್ ನಿರ್ದೇಶನದಲ್ಲಿ 'ದಿ ವಿಲನ್' ಚಿತ್ರ ತೆರೆಗೆ ಬಂದಿದ್ದಾಯ್ತು. ಯದ್ವಾತದ್ವಾ ಹೈಪ್ ಕ್ರಿಯೇಟ್ ಮಾಡಿದ್ದ 'ದಿ ವಿಲನ್' ಬಳಿಕ ಪ್ರೇಮ್ ಆಕ್ಷನ್ ಕಟ್ ಹೇಳುವ ಸಿನಿಮಾ ಯಾವುದು ಎಂಬ ಕುತೂಹಲ ಸಹಜವಾಗಿ ಅಭಿಮಾನಿಗಳಲ್ಲಿ ಇದ್ದೇ ಇದೆ.

ತಮ್ಮ ಮುಂದಿನ ಚಿತ್ರದ ಬಗ್ಗೆ ಪ್ರೇಮ್ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯಕ್ಕೆ 'ಗಾಂಧಿಗಿರಿ' ಚಿತ್ರದ ಅಭಿನಯದಲ್ಲಿ ಪ್ರೇಮ್ ಬಿಜಿಯಾಗಿದ್ದಾರೆ. ಆದರೆ, ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇನ್ನೆರಡು ತಿಂಗಳಲ್ಲಿ ಪ್ರೇಮ್ ನಿರ್ದೇಶನದ ಹೊಸ ಚಿತ್ರ ಸೆಟ್ಟೇರಲಿದೆ.

ವಿಶೇಷ ಅಂದ್ರೆ, ಈ ಚಿತ್ರದ ಮೂಲಕ ಕನ್ನಡ ಇಬ್ಬರು ಪ್ರತಿಭಾವಂತರನ್ನ ಪ್ರೇಮ್ ಬೆಳ್ಳಿತೆರೆಗೆ ಪರಿಚಯ ಮಾಡಲಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸ್ಯಾಂಡಲ್ ವುಡ್ ಗೆ ಸುಧಾರಾಣಿ ಪುತ್ರಿ

ಸ್ಯಾಂಡಲ್ ವುಡ್ ಗೆ ಸುಧಾರಾಣಿ ಪುತ್ರಿ

ಪ್ರೇಮ್ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೆ ನಾಯಕಿ ಆಗಿ ಸುಧಾರಾಣಿ ಪುತ್ರಿ ನಿಧಿ ಆಯ್ಕೆ ಆಗಿದ್ದಾರೆ. ಪ್ರೇಮ್ ನಿರ್ದೇಶನದ ಚಿತ್ರದ ಮೂಲಕ ನಿಧಿ ಸ್ಯಾಂಡಲ್ ವುಡ್ ಗೆ ಪರಿಚಿತವಾಗಲಿದ್ದಾರೆ.

ಅದಾಗಲೇ ಬಣ್ಣ ಹಚ್ಚಿದ್ದ ನಿಧಿ

ಅದಾಗಲೇ ಬಣ್ಣ ಹಚ್ಚಿದ್ದ ನಿಧಿ

ಹಾಗ್ನೋಡಿದ್ರೆ, ನಿಧಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಏಳನೇ ವಯಸ್ಸಿನಲ್ಲಿ ಇರುವಾಗಲೇ. ಅಂದು ಸುಧಾರಾಣಿ ಜೊತೆಗೆ ಚಿತ್ರವೊಂದರಲ್ಲಿ ನಿಧಿ ನಟಿಸಿದ್ದರು. ಆದ್ರೆ, ಆ ಚಿತ್ರ ಬಿಡುಗಡೆ ಆಗಿಲ್ಲ. ಇನ್ನೂ ಮೈಸೂರು ಟಾರ್ಪಲಿನ್ಸ್ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ನಿಧಿ ಮಿಂಚಿದ್ದಾರೆ.

ನಿಧಿಗೆ ಹೀರೋ ಯಾರು ಗೊತ್ತೇ.?

ನಿಧಿಗೆ ಹೀರೋ ಯಾರು ಗೊತ್ತೇ.?

ಅಂದ್ಹಾಗೆ, ಇದೇ ಚಿತ್ರದಲ್ಲಿ ರಕ್ಷಿತಾ ಪ್ರೇಮ್ ಸಹೋದರ ಅಭಿಶೇಕ್ ರಾವ್ ಕೂಡ ಬಣ್ಣ ಹಚ್ಚಲಿದ್ದಾರೆ. ಪ್ರತಿಷ್ಟಿತ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಮತ್ತು ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ಕಲಿತಿರುವ ಅಭಿಶೇಕ್ ರಾವ್, ಪ್ರೇಮ್ ನಿರ್ದೇಶನದ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮಿನುಗಲಿದ್ದಾರೆ.

ಪ್ರೇಮಿಗಳ ದಿನದಂದು ಸೆಟ್ಟೇರುವ ಚಿತ್ರ

ಪ್ರೇಮಿಗಳ ದಿನದಂದು ಸೆಟ್ಟೇರುವ ಚಿತ್ರ

'ದಿ ವಿಲನ್' ಚಿತ್ರಕ್ಕೆ ಪ್ರೇಮ್ ಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅಭಿಶೇಕ್ ರಾವ್ ಇದೀಗ ಹೀರೋ ಆಗಲು ಹೊರಟಿದ್ದಾರೆ. ಅಭಿಶೇಕ್ ರಾವ್ ಮತ್ತು ನಿಧಿ ಅಭಿನಯದ ಪ್ರೇಮ್ ನಿರ್ದೇಶನದ ಚಿತ್ರ ಫೆಬ್ರವರಿ 2019 ರ ಪ್ರೇಮಿಗಳ ದಿನದಂದು ಸೆಟ್ಟೇರಲಿದೆ.

More from Filmibeat

English summary
Nidhi and Abhishek Rao to make debut with the movie directed by Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X