twitter
    For Quick Alerts
    ALLOW NOTIFICATIONS  
    For Daily Alerts

    ಬ್ರೇಕಿಂಗ್: 'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ಸುಧಾರಾಣಿ ಪುತ್ರಿ ಬೆಳ್ಳಿತೆರೆಗೆ.!

    |

    'ಜೋಗಿ' ಖ್ಯಾತಿಯ ಪ್ರೇಮ್ ನಿರ್ದೇಶನದಲ್ಲಿ 'ದಿ ವಿಲನ್' ಚಿತ್ರ ತೆರೆಗೆ ಬಂದಿದ್ದಾಯ್ತು. ಯದ್ವಾತದ್ವಾ ಹೈಪ್ ಕ್ರಿಯೇಟ್ ಮಾಡಿದ್ದ 'ದಿ ವಿಲನ್' ಬಳಿಕ ಪ್ರೇಮ್ ಆಕ್ಷನ್ ಕಟ್ ಹೇಳುವ ಸಿನಿಮಾ ಯಾವುದು ಎಂಬ ಕುತೂಹಲ ಸಹಜವಾಗಿ ಅಭಿಮಾನಿಗಳಲ್ಲಿ ಇದ್ದೇ ಇದೆ.

    ತಮ್ಮ ಮುಂದಿನ ಚಿತ್ರದ ಬಗ್ಗೆ ಪ್ರೇಮ್ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯಕ್ಕೆ 'ಗಾಂಧಿಗಿರಿ' ಚಿತ್ರದ ಅಭಿನಯದಲ್ಲಿ ಪ್ರೇಮ್ ಬಿಜಿಯಾಗಿದ್ದಾರೆ. ಆದರೆ, ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇನ್ನೆರಡು ತಿಂಗಳಲ್ಲಿ ಪ್ರೇಮ್ ನಿರ್ದೇಶನದ ಹೊಸ ಚಿತ್ರ ಸೆಟ್ಟೇರಲಿದೆ.

    ವಿಶೇಷ ಅಂದ್ರೆ, ಈ ಚಿತ್ರದ ಮೂಲಕ ಕನ್ನಡ ಇಬ್ಬರು ಪ್ರತಿಭಾವಂತರನ್ನ ಪ್ರೇಮ್ ಬೆಳ್ಳಿತೆರೆಗೆ ಪರಿಚಯ ಮಾಡಲಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

    ಸ್ಯಾಂಡಲ್ ವುಡ್ ಗೆ ಸುಧಾರಾಣಿ ಪುತ್ರಿ

    ಸ್ಯಾಂಡಲ್ ವುಡ್ ಗೆ ಸುಧಾರಾಣಿ ಪುತ್ರಿ

    ಪ್ರೇಮ್ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೆ ನಾಯಕಿ ಆಗಿ ಸುಧಾರಾಣಿ ಪುತ್ರಿ ನಿಧಿ ಆಯ್ಕೆ ಆಗಿದ್ದಾರೆ. ಪ್ರೇಮ್ ನಿರ್ದೇಶನದ ಚಿತ್ರದ ಮೂಲಕ ನಿಧಿ ಸ್ಯಾಂಡಲ್ ವುಡ್ ಗೆ ಪರಿಚಿತವಾಗಲಿದ್ದಾರೆ.

    ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾದ ಸುಧಾರಾಣಿ ಮಗಳುಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾದ ಸುಧಾರಾಣಿ ಮಗಳು

    ಅದಾಗಲೇ ಬಣ್ಣ ಹಚ್ಚಿದ್ದ ನಿಧಿ

    ಅದಾಗಲೇ ಬಣ್ಣ ಹಚ್ಚಿದ್ದ ನಿಧಿ

    ಹಾಗ್ನೋಡಿದ್ರೆ, ನಿಧಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಏಳನೇ ವಯಸ್ಸಿನಲ್ಲಿ ಇರುವಾಗಲೇ. ಅಂದು ಸುಧಾರಾಣಿ ಜೊತೆಗೆ ಚಿತ್ರವೊಂದರಲ್ಲಿ ನಿಧಿ ನಟಿಸಿದ್ದರು. ಆದ್ರೆ, ಆ ಚಿತ್ರ ಬಿಡುಗಡೆ ಆಗಿಲ್ಲ. ಇನ್ನೂ ಮೈಸೂರು ಟಾರ್ಪಲಿನ್ಸ್ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ನಿಧಿ ಮಿಂಚಿದ್ದಾರೆ.

    ಬಣ್ಣ ಹಚ್ಚಿದ 'ಮನ ಮೆಚ್ಚಿದ ಹುಡುಗಿ' ಸುಧಾರಾಣಿ ಪುತ್ರಿ ನಿಧಿಬಣ್ಣ ಹಚ್ಚಿದ 'ಮನ ಮೆಚ್ಚಿದ ಹುಡುಗಿ' ಸುಧಾರಾಣಿ ಪುತ್ರಿ ನಿಧಿ

    ನಿಧಿಗೆ ಹೀರೋ ಯಾರು ಗೊತ್ತೇ.?

    ನಿಧಿಗೆ ಹೀರೋ ಯಾರು ಗೊತ್ತೇ.?

    ಅಂದ್ಹಾಗೆ, ಇದೇ ಚಿತ್ರದಲ್ಲಿ ರಕ್ಷಿತಾ ಪ್ರೇಮ್ ಸಹೋದರ ಅಭಿಶೇಕ್ ರಾವ್ ಕೂಡ ಬಣ್ಣ ಹಚ್ಚಲಿದ್ದಾರೆ. ಪ್ರತಿಷ್ಟಿತ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಮತ್ತು ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ಕಲಿತಿರುವ ಅಭಿಶೇಕ್ ರಾವ್, ಪ್ರೇಮ್ ನಿರ್ದೇಶನದ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮಿನುಗಲಿದ್ದಾರೆ.

    ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ!ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ!

    ಪ್ರೇಮಿಗಳ ದಿನದಂದು ಸೆಟ್ಟೇರುವ ಚಿತ್ರ

    ಪ್ರೇಮಿಗಳ ದಿನದಂದು ಸೆಟ್ಟೇರುವ ಚಿತ್ರ

    'ದಿ ವಿಲನ್' ಚಿತ್ರಕ್ಕೆ ಪ್ರೇಮ್ ಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅಭಿಶೇಕ್ ರಾವ್ ಇದೀಗ ಹೀರೋ ಆಗಲು ಹೊರಟಿದ್ದಾರೆ. ಅಭಿಶೇಕ್ ರಾವ್ ಮತ್ತು ನಿಧಿ ಅಭಿನಯದ ಪ್ರೇಮ್ ನಿರ್ದೇಶನದ ಚಿತ್ರ ಫೆಬ್ರವರಿ 2019 ರ ಪ್ರೇಮಿಗಳ ದಿನದಂದು ಸೆಟ್ಟೇರಲಿದೆ.

    English summary
    Nidhi and Abhishek Rao to make debut with the movie directed by Prem.
    Wednesday, December 19, 2018, 17:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X