12 ವರ್ಷಗಳ ಬಳಿಕ ದಿಗಂತ್‌ಗೆ ಸಿಕ್ಕ 'ನಿಧಿ'

ಜುಲೈ ತಿಂಗಳಲ್ಲಿ ಗೋವಾದಲ್ಲಿ ಆಗಿದ್ದ ಗಾಯದಿಂದ ಚೇತರಿಸಿಕೊಂಡಿರುವ ನಟ ದಿಗಂತ್ ಈಗ 'ಗಾಳಿಪಟ 2' ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಖುಷಿಯ ನಡುವೆಯೇ ದಿಗಂತ್‌ಗೆ 12 ವರ್ಷದ ಬಳಿಕ 'ನಿಧಿ' ದೊರೆತಿದೆ!

ನಟ ದಿಗಂತ್‌ಗೆ ನಿಧಿ ದೊರೆತಿರುವುದು ನಿಜ ಆದರೆ ಚಿನ್ನ, ವಜ್ರ, ಹಣದ ನಿಧಿಯಲ್ಲಿ ಬದಲಿಗೆ ನಟಿ ನಿಧಿ ಸುಬ್ಬಯ್ಯ. ದಿಗಂತ್ ಹಾಗೂ ನಿಧಿ ಸುಬ್ಬಯ್ಯ ಹನ್ನೆರಡು ವರ್ಷಗಳ ಹಿಂದೆ ಒಟ್ಟಿಗೆ 'ಪಂಚರಂಗಿ' ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಒಟ್ಟಿಗೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಈ ಇಬ್ಬರು ಮತ್ತೆ ಒಂದಾಗಿದ್ದಾರೆ.

ನಟಿ ನಿಧಿ ಸುಬ್ಬಯ್ಯ ಹಾಗೂ ದಿಗಂತ್ ಒಟ್ಟಿಗೆ 'ಎಡಗೈ ಅಪಘಾತ ಕಾರಣ' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾವನ್ನು ಸಮರ್ಥ್ ಕಡಕೋಳ್ ಬರೆದು ನಿರ್ದೇಶನ ಮಾಡುತ್ತಿದ್ದು, ಎಡಚನೊಬ್ಬನ ಜೀವನದಲ್ಲಿ ಒಂದು ದಿನ ನಡೆವ ಘಟನೆಗಳನ್ನು ಆಧರಿಸಿದ ಸಿನಿಮಾ ಇದಾಗಿದೆ.

ಚಿತ್ರೀಕರಣ ಪ್ರಾರಂಭವಾಗಿದೆ

ಚಿತ್ರೀಕರಣ ಪ್ರಾರಂಭವಾಗಿದೆ

ಸಿನಿಮಾ ಆರಂಭವಾಗುವುದೇ ದಿಗಂತ್, ನಿಧಿ ಸುಬ್ಬಯ್ಯ ಮನೆಗೆ ಹೋಗುವ ದೃಶ್ಯದಿಂದ ಅಂತೆ. ಅಂದಹಾಗೆ ಈ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ಜೊತೆಗೆ ಮತ್ತೊಬ್ಬ ನಾಯಕಿಯೂ ಇದ್ದಾರೆ ಅವರೇ, ಧನು ಹರ್ಷಾ. ಸಿನಿಮಾದ ಮುಹೂರ್ತ ಈಗಾಗಲೇ ಮುಗಿದಿದ್ದು, ದಿಗಂತ್ ಹಾಗೂ ನಿಧಿ ಸುಬ್ಬಯ್ಯ ನಡುವಿನ ದೃಶ್ಯಗಳ ಚಿತ್ರೀಕರಣ ಪ್ರಾರಂಭವಾಗಿದೆ. ಈ ಹಿಂದೆ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ನಿರ್ದೇಶಿಸಿದ್ದ ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಹನ್ನೆರಡು ವರ್ಷಗಳ ಬಳಿಕ ಒಟ್ಟಿಗೆ ನಟನೆ

ಹನ್ನೆರಡು ವರ್ಷಗಳ ಬಳಿಕ ಒಟ್ಟಿಗೆ ನಟನೆ

ದಿಗಂತ್ ಹಾಗೂ ನಿಧಿ ಸುಬ್ಬಯ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಪಂಚರಂಗಿ' ಸಿನಿಮಾ 2010 ರಲ್ಲಿ ಬಿಡುಗಡೆ ಆಗಿತ್ತು. ಯೋಗರಾಜ್ ಭಟ್ ನಿರ್ದೇಶಿಸಿದ್ದ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತಕ್ಕ ಮಟ್ಟಿಗಿನ ಗೆಲುವು ಕಂಡಿತ್ತು. ದಿಗಂತ್ ಹಾಗೂ ನಿಧಿ ಜೋಡಿ ಪ್ರೇಕ್ಷಕರಿಗೆ ಆಪ್ತವಾಗಿತ್ತು. ಆದರೆ ಆ ಸಿನಿಮಾದ ಬಳಿಕ ಇಷ್ಟು ವರ್ಷ ದಿಗಂತ್ ಹಾಗೂ ನಿಧಿ ಒಟ್ಟಿಗೆ ನಟಿಸಿರಲೇ ಇಲ್ಲ. ಆದರೆ ಈಗ ಹನ್ನೆರಡು ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ.

ಮತ್ತೆ ಮಿಂಚುತ್ತಾರಾ ನಿಧಿ ಸುಬ್ಬಯ್ಯ

ಮತ್ತೆ ಮಿಂಚುತ್ತಾರಾ ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ ಅಂತೂ 2012 ರ ಬಳಿಕ ಚಿತ್ರರಂಗದಿಂದಲೇ ದೂರಾದರು. 2016 ರಲ್ಲಿ ನಟನೆಗೆ ಮರಳಿ ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ಮತ್ತೆ ಆಗೊಮ್ಮೆ-ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. 2017 ರ ಬಳಿಕ ಈವರೆಗೆ ನಿಧಿ ನಟಿಸಿರುವ ಎರಡು ಸಿನಿಮಾಗಳಷ್ಟೆ ಬಿಡುಗಡೆ ಆಗಿದೆ. ಈ ನಡುವೆ ಬಿಗ್‌ಬಾಸ್ 8 ರಲ್ಲಿ ಸಹ ನಿಧಿ ಭಾಗವಹಿಸಿದ್ದರು. ಚಿತ್ರರಂಗಕ್ಕೆ ರೀ ಪ್ರಬಲ ಎಂಟ್ರಿ ಪಡೆಯಲು ನಿಧಿ ಯತ್ನಿಸುತ್ತಿದ್ದು, ಲಕ್ಕಿ ಜೋಡಿ ದಿಗಂತ್ ಜೊತೆಗಿನ ಪಾತ್ರದಿಂದ ಮತ್ತೆ ನಿಧಿ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಾರಾ ನೋಡಬೇಕಿದೆ.

ದಿಗಂತ್ ಕೈಯಲ್ಲಿವೆ ಹಲವು ಸಿನಿಮಾಗಳು

ದಿಗಂತ್ ಕೈಯಲ್ಲಿವೆ ಹಲವು ಸಿನಿಮಾಗಳು

ಇನ್ನು ದಿಗಂತ್ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಗಾಳಿಪಟ 2' ಹಿಟ್ ಆದ ಬಳಿಕ ಇದೀಗ 'ಮಾರಿಗೋಲ್ಡ್' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. 'ಹೀರೋ' ಸಿನಿಮಾದ ಚಿತ್ರೀಕರಣ ಆಗಬೇಕಿದೆ. ರಕ್ಷಿತ್ ಶೆಟ್ಟಿ ನಿರ್ಮಾಣದ 'ಪಾರ್ಟಿ' ಸಿನಿಮಾದಲ್ಲಿ ದಿಗಂತ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಜೊತೆಗೆ ರಿಷಬ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್ ಸಹ ಇದ್ದಾರೆ. ಪ್ರಸ್ತುತ 'ಎಡಗೈ ಅಪಘಾತಕ್ಕೆ ಕಾರಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Nidhi Subbaiah acting along with Diganth after 12 years in Edagai Apagatakke Karana. Both seen in Pancharangi movie as lead which is released in 2010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X