For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಲಸಿಕೆ ಪಡೆದ ನಿಧಿ, ದೀಪಿಕಾ, ದಿವ್ಯಾ, ಶ್ವೇತಾ

  |

  ಕೊರೊನಾ ಭೀಕರ ಪರಿಸ್ಥಿತಿಯ ನಡುವೆಯೂ ಅನೇಕರು ಲಸಿಕೆ ಪಡೆಯುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೆ ಸಿನಿ ಸೆಲೆಬ್ರಿಟಿಗಳು ಸಹ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಎಲ್ಲರೂ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.

  ಈಗಾಗಲೇ ಅನೇಕ ಸಿನಿ ಸೆಲೆಬ್ರಿಟಿಗಳು ಕೊರೊನಾ ಲಸಿಕೆ ಪಡೆದಿದ್ದಾರೆ. ರಜನಿಕಾಂತ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಆನಂತ್ ನಾಗ್, ಸಲ್ಮಾನ್ ಖಾನ್, ಸಂಜಯ್ ದತ್ ಹೀಗೆ ಅನೇಕ ಮಂದಿ ಸ್ಟಾರ್ ಕಲಾವಿದರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

  ಕೋವಿಡ್ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆಕೋವಿಡ್ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆ

  ಕೇವಲ ನಟರು ಮಾತ್ರವಲ್ಲ ನಟಿಯರು ಸಹ ಕೊರೊನಾ ಲಸಿಕೆ ಪಡೆದಿದ್ದಾರೆ. ಸುಹಾಸಿನಿ, ರಾಧಿಕಾ, ಕೀರ್ತಿ ಸುರೇಶ್, ರಾಧಿಕಾ ಆಪ್ಟೆ ಸೇರಿದಂತೆ ಸಾಕಷ್ಟು ಮಂದಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇತ್ತೀಚಿಗೆ ನಟಿ ನಯನತಾರಾ ಬಾಯ್ ಫ್ರೆಂಡ್ ವಿಘ್ನೇಶ್ ಜೊತೆ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಂಡು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ನರ್ಸ್ ಬಳಿ ವ್ಯಾಕ್ಸಿನ್ ಇಲ್ಲ ನಯನತಾರಾ ಹಾಗೆ ಪೋಸ್ ನೀಡಿದ್ದಾರೆ ಎಂದು ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದರು.

  ಇನ್ನು ಸ್ಯಾಂಡಲ್ ವುಡ್ ನಲ್ಲೂ ಅನೇಕ ಮಂದಿ ಲಸಿಕೆ ಪಡೆದಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ನಟಿ ದೀಪಿಕಾ ದಾಸ್, ನಿಧಿ ಸುಬ್ಬಯ್ಯ, ಶ್ವೇತಾ ಚಂಗಪ್ಪ ಮತ್ತು ದಿವ್ಯಾ ಸೇರಿದಂತೆ ಅನೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡ ಫೋಟೋವನ್ನು ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ನಟಿ ದೀಪಿಕಾ ದಾಸ್ ಲಸಿಕೆ ಪಡೆಯುತ್ತಿರುವ ಫೋಟೋ ಶೋರ್ ಮಾಡಿ ಮೊದಲ ಡೋಸ್ ಪಡೆದಿರುವುದಾಗಿ ಹೇಳಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ನಟಿ ನಿಧಿ ಸುಬ್ಬಯ್ಯ ಕೂಡ ಲಸಿಕೆ ಪೆದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ನಿಧಿ ಲಸಿಕೆ ಹಾಕಿಸಿಕೊಂಡಿದ್ದಾರೆ.

  ಸಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ ನಿಧಿ, 'ನನ್ನ ಮೊದಲ ಕೆಲಸ ಮುಗಿಯಿತು. ನೀವು ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ. ಇದು ನಿಮ್ಮ ಜವಾಬ್ದಾರಿ' ಎಂದು ಬರೆದುಕೊಂಡಿದ್ದರು. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಟಿ ದಿವ್ಯಾ ಕೂಡ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

  Protima Bediಯ ಜೀವನ ಚರಿತ್ರೆ ವೆಬ್ ಸಿರೀಸ್ ನಲ್ಲಿ | Filmibeat Kannada

  ಇನ್ನು ನಟಿ ಶ್ವೇತಾ ಚಂಗಪ್ಪ ಕೂಡ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 'ವೈದ್ಯರ ಸಲಹೆಯಂತೆ ನನ್ನ ಆರೋಗ್ಯ ಸ್ಥಿತಿಗೆ ಲಸಿಕೆ ನೀಡಿದ್ದಾರೆ. ಮೊದಲ ಡೋಸ್ ಆಯ್ತು. ನೀವು ಕೂಡ ಲಸಿಕೆ ಪಡೆಯಿರಿ. ಕೊರೊನಾ ವಿರುದ್ಧ ಹೋರಾಡುವ ಏಕೈಕ ಭರವಸೆ' ಎಂದಿದ್ದಾರೆ. ಶ್ವೇತಾ ಇತ್ತೀಚಿಗಷ್ಟೆ ಕೊರೊನಾ ವೈರಸ್ ಗೆ ತುತ್ತಾಗಿದ್ದರು. ಸದ್ಯ ಗುಣಮುಖರಾಗಿರುವ ಶ್ವೇತಾ ವ್ಯಾಕ್ಸಿನ್ ಪಡೆದಿದ್ದಾರೆ.

  English summary
  Kannada Actress like Nidhi Subbaiah, Deepika Das, Swetha Chengappa and other stars get first dose of corona vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X