ಅರಮನೆಯಲ್ಲಿ ಫೋಟೋಶೂಟ್ ವಿವಾದ: ನಿಧಿ ಸುಬ್ಬಯ್ಯ ಆಪ್ತರು ಹೇಳಿದ್ದೇನು.?

By ಯಶಸ್ವಿನಿ.ಎಂ.ಕೆ

ವಿಶ್ವವಿಖ್ಯಾತ ಮೈಸೂರು ಅರಮನೆ ಮಗದೊಂದು ಬಾರಿಗೆ ಫೋಟೋಶೂಟ್ ವಿವಾದದ ಕೇಂದ್ರಬಿಂದು ಆಗಿದೆ. ಮೈಸೂರು ಅರಮನೆಯ ಒಳಾಂಗಣ ಹಾಗೂ ಜಯಮಾರ್ತಾಂಡ ದ್ವಾರದ ಬಳಿ ಫೋಟೋ ತೆಗೆದುಕೊಳ್ಳುವ ಅವಕಾಶ ಯಾರಿಗೂ ಇಲ್ಲ.

ಹೀಗಿದ್ದರೂ, ನಟಿ ನಿಧಿ ಸುಬ್ಬಯ್ಯ ಅರಮನೆಯ ದರ್ಬಾರ್ ಹಾಲ್ ನಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಸಾಲದಕ್ಕೆ, ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

ಅರಮನೆಯಲ್ಲಿ ಫೋಟೋಶೂಟ್ ಗೆ ನಿರ್ಬಂಧ ಇದ್ದರೂ, ನಿಧಿ ಸುಬ್ಬಯ್ಯ ಫೋಟೋ ಕ್ಲಿಕ್ ಮಾಡಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ವಿವಾದ ಸೃಷ್ಟಿ ಆಗಿತ್ತು. ಇದೀಗ ಇದೇ ವಿವಾದಕ್ಕೆ ಸಂಬಂಧಿಸಿದಂತೆ, ನಿಧಿ ಸುಬ್ಬಯ್ಯ ಆಪ್ತರು ಹಾಗೂ ಅರಮನೆಯ ಆಡಳಿತ ಮಂಡಳಿ ವಿವರಣೆ ನೀಡಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಅರಮನೆ ಆಡಳಿತ ಮಂಡಳಿ ಹೇಳುವುದೇನು.?

ಅರಮನೆ ಆಡಳಿತ ಮಂಡಳಿ ಹೇಳುವುದೇನು.?

''ನಟಿ ನಿಧಿ ಸುಬ್ಬಯ್ಯ ಕ್ಲಿಕ್ ಮಾಡಿಕೊಂಡ ಫೋಟೋದ ಸ್ಥಳದಲ್ಲಿ ಯಾವುದೇ ನಿರ್ಬಂಧವಿಲ್ಲ. ಇದೊಂದು ಸಾರ್ವಜನಿಕ ಪ್ರದೇಶವಾಗಿದ್ದು, ಫೋಟೋ ತೆಗೆದುಕೊಳ್ಳುವುದು ಸಾಮಾನ್ಯ'' ಎಂದು ಅರಮನೆ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ

ನಿಧಿ ಸುಬ್ಬಯ್ಯ ಆಪ್ತರು ಏನಂತಾರೆ.?

ನಿಧಿ ಸುಬ್ಬಯ್ಯ ಆಪ್ತರು ಏನಂತಾರೆ.?

''ಇದು ಇತ್ತೀಚಿನ ಫೋಟೋ ಅಲ್ಲ. ಅದರಲ್ಲೂ ವಿಶೇಷವಾಗಿ ನಡೆದ ಫೋಟೋ ಶೂಟ್ ಕೂಡ ಅಲ್ಲ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಅರಮನೆ ನೋಡಲು ಬಂದಿದ್ದ ಸಂದರ್ಭದಲ್ಲಿ ಎಲ್ಲರಂತೆ ಸಹಜವಾಗಿ ಮೊಬೈಲ್ ನಲ್ಲಿ ತೆಗೆಸಿಕೊಂಡ ಫೋಟೋ'' ಎಂದು ನಿಧಿ ಸುಬ್ಬಯ್ಯ ಫ್ಯಾಮಿಲಿ ಫ್ರೆಂಡ್ ಭರತ್ ಸ್ಪಷ್ಟ ಪಡಿಸಿದ್ದಾರೆ.

ಮೊಬೈಲ್ ನಲ್ಲಿ ಕ್ಲಿಕ್ ಮಾಡಿದ ಫೋಟೋ

ಮೊಬೈಲ್ ನಲ್ಲಿ ಕ್ಲಿಕ್ ಮಾಡಿದ ಫೋಟೋ

''ಅಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರು. ಎಲ್ಲರೂ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಇದು ದರ್ಬಾರ್ ಹಾಲ್ ಅಲ್ಲ. ಅದರ ಮೇಲಿನ ಗ್ಯಾಲರಿಯಾಗಿದ್ದು, ಇಲ್ಲಿ ಫೋಟೋ ತೆಗೆಯಬಾರದು ಎಂದು ಯಾರೂ ಹೇಳಲಿಲ್ಲ. ಹಿಂದೆ ನಡೆದ ಫೋಟೋ ಶೂಟ್ ಗೂ ಇದಕ್ಕೂ ಹೋಲಿಕೆಯೇ ಇಲ್ಲ'' ಎಂದಿದ್ದಾರೆ ಭರತ್.

ಗಮನಕ್ಕೆ ಬಂದಿಲ್ಲ

ಗಮನಕ್ಕೆ ಬಂದಿಲ್ಲ

''ಅರಮನೆಯಲ್ಲಿ ಯಾವುದೇ ಫೋಟೋ ಶೂಟ್ ನಡೆದಿರುವ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ. ನಾವು ಯಾರಿಗೂ ಅನುಮತಿ ನೀಡಿಲ್ಲ. ಇಷ್ಟಕ್ಕೂ ಅರಮನೆಗೆ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದು, ಎಲ್ಲರ ಬಳಿಯೂ ಮೊಬೈಲ್ ಇರುತ್ತದೆ. ಅವರು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡರೆ ಅದು ನಮ್ಮ ಗಮನಕ್ಕೂ ಬರುವುದಿಲ್ಲ'' ಅಂತಾರೆ ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಮಣ್ಯ.

ದರ್ಬಾರ್ ಹಾಲ್ ನಲ್ಲಿ ನಿರ್ಬಂಧ ಇಲ್ಲ

ದರ್ಬಾರ್ ಹಾಲ್ ನಲ್ಲಿ ನಿರ್ಬಂಧ ಇಲ್ಲ

''ದರ್ಬಾರ್ ಹಾಲ್ ನಲ್ಲಿ ನಿಧಿ ಸುಬ್ಬಯ್ಯ ತೆಗೆಸಿಕೊಂಡಿರುವ ಫೋಟೋಗೂ, ನನಗೂ ಸಂಬಂಧವಿಲ್ಲ. ಫೋಟೋಶೂಟ್ ಗೆ ನಾನು ಅನುಮತಿ ನೀಡಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ದರ್ಬಾರ್ ಹಾಲ್ ನಲ್ಲಿ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡಲಾಗಿದೆ'' ಎಂದು ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಮಣ್ಯ ಹೇಳಿದರು.

More from Filmibeat

English summary
Mysuru Palace council authoriy has given explanation on Kannada Actress Nidhi Subbaiah's photo in Darbar Hall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X