For Quick Alerts
  ALLOW NOTIFICATIONS  
  For Daily Alerts

  'ಮೈಲಾಪುರ'ದ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಬಂದ್ರು ನಿಧಿ ಸುಬ್ಬಯ್ಯ

  By Harshitha
  |

  ಕೊಡಗಿನ ಕುವರಿ, ಕನ್ನಡದ ನಟಿ ನಿಧಿ ಸುಬ್ಬಯ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿ ಹತ್ತತ್ರ ವರ್ಷದ ಮೇಲಾಗಿದೆ. 'ನನ್ನ ನಿನ್ನ ಪ್ರೇಮಕಥೆ' ಹಾಗೂ '5G' ಚಿತ್ರಗಳ ಬಳಿಕ ಬೇರೆ ಯಾವ ಸಿನಿಮಾದಲ್ಲೂ ನಿಧಿ ಸುಬ್ಬಯ್ಯ ಕಾಣಿಸಿಕೊಂಡಿಲ್ಲ.

  ಇದೇ ಗ್ಯಾಪ್ ನಲ್ಲಿ ಲವೇಶ್ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ನಿಧಿ ಸುಬ್ಬಯ್ಯ ಕಾಲಿರಿಸಿದರು. ಮದುವೆ ಆದ ಒಂದುವರೆ ವರ್ಷದ ಬಳಿಕ ನಿಧಿ ಸುಬ್ಬಯ್ಯ ಮತ್ತೆ ಬಣ್ಣ ಹಚ್ಚಲು ಮನಸ್ಸು ಮಾಡಿದ್ದಾರೆ.

  ನೂತನ ಬಾಳಿಗೆ ಕಾಲಿಟ್ಟ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯನೂತನ ಬಾಳಿಗೆ ಕಾಲಿಟ್ಟ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ

  ಕನ್ನಡದ 'ಮೈಲಾಪುರ' ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಳ್ಳಲು ನಿಧಿ ಸುಬ್ಬಯ್ಯ ಹಸಿರು ನಿಶಾನೆ ತೋರಿಸಿದ್ದಾರೆ. ಇದು ಲವ್ ಫೇಲ್ಯೂರ್ ಕುರಿತಾದ ಹಾಡಾಗಿದ್ದು, ಬ್ರೇಕಪ್ ಬಳಿಕ ದಾರಿ ತಪ್ಪುವ ಹೆಣ್ಮಕ್ಕಳಿಗೆ ಉತ್ತಮ ಸಂದೇಶ ನೀಡುತ್ತದೆ. ಇದೇ ಕಾರಣಕ್ಕೆ, ಈ ಹಾಡಲ್ಲಿ ಹೆಜ್ಜೆ ಹಾಕಲು ನಿಧಿ ಸುಬ್ಬಯ್ಯ ಒಪ್ಪಿಕೊಂಡರಂತೆ.

  ''ಹಾಡಿನ ಸಾಹಿತ್ಯ ಹಾಗೂ ಸಂಗೀತ ಇಷ್ಟವಾದ ಕಾರಣ ಒಪ್ಪಿಕೊಂಡೆ'' ಎನ್ನುತ್ತಾರೆ ನಟಿ ನಿಧಿ ಸುಬ್ಬಯ್ಯ. ಮಂಗಳೂರಿನ ಬೀಚ್ ಗಳಲ್ಲಿ 'ಮೈಲಾಪುರ' ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಜಾಲಿ ಮೂಡ್ ನಲ್ಲಿದ್ದಾರೆ ನಟಿ ನಿಧಿ ಸುಬ್ಬಯ್ಯ.

  ಅರಮನೆಯ 'ದರ್ಬಾರ್' ಹಾಲ್ ನಲ್ಲಿ ಫೋಟೋ: ವಿವಾದಕ್ಕೆ ಸಿಲುಕಿದ ನಿಧಿ ಸುಬ್ಬಯ್ಯಅರಮನೆಯ 'ದರ್ಬಾರ್' ಹಾಲ್ ನಲ್ಲಿ ಫೋಟೋ: ವಿವಾದಕ್ಕೆ ಸಿಲುಕಿದ ನಿಧಿ ಸುಬ್ಬಯ್ಯ

  ಮದುವೆ ಆದ್ಮೇಲೂ ನಟಿ ನಿಧಿ ಸುಬ್ಬಯ್ಯಗೆ ಆಫರ್ ಗಳ ಕೊರತೆ ಕಾಡಿಲ್ಲ. ಬಾಲಿವುಡ್ ನಿಂದಲೂ ಅವರಿಗೆ ಬುಲಾವ್ ಬಂದಿದ್ಯಂತೆ. ಆದ್ರೆ, ಅಳೆದು ತೂಗಿ ಅವಕಾಶಗಳನ್ನ ನಿಧಿ ಸುಬ್ಬಯ್ಯ ಒಪ್ಪಿಕೊಳ್ತಿದ್ದಾರಂತೆ.

  English summary
  Kannada Actress Nidhi Subbaiah to do a special song for Kannada Movie 'Mylapura'.
  Thursday, August 30, 2018, 13:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X