ಖಾಸಗಿ ವಿಮಾನದಲ್ಲಿ ಉದಯಪುರಕ್ಕೆ ಹೊರಟ ನವವಧು ನಿಹಾರಿಕಾ
ಚಿರಂಜೀವಿ ಕುಟುಂಬದಲ್ಲಿ ಬಹುವರ್ಷಗಳ ನಂತರ ಶುಭ ಸಮಾರಂಭ ನಡೆಯುತ್ತಿದೆ. ಚಿರಂಜೀವಿ ಸಹೋದರನ ಮಗಳ ಮದುವೆ ಕೆಲವೇ ದಿನಗಳಲ್ಲಿ ನಡೆಯಲಿದ್ದು, ಭಾರಿ ಅದ್ಧೂರಿಯಾಗಿ ಮದುವೆಯನ್ನು ನಡೆಸಲಾಗುತ್ತಿದೆ.
ಹೌದು, ನಾಗಬಾಬು ಮಗಳು ನಿಹಾರಿಕಾ ಕೊನಿಡೇಲ ವಿವಾಹ ಡಿಸೆಂಬರ್ 9 ರಂದು ರಾಜಸ್ಥಾನದ ಉದಯ್‌ಪುರ ದಲ್ಲಿ ನಡೆಯಲಿದೆ. ವಿವಾಹ ಸ್ಥಳಕ್ಕೆ ಇಂದೇ ನಿಹಾರಿಕಾ ತೆರಳಿದ್ದಾರೆ.
ಅಪ್ಪ-ಅಮ್ಮ, ಅಣ್ಣ ಹಾಗೂ ಕೆಲವು ಬಂಧುಗಳೊಂದಿಗೆ ಐಶಾರಾಮಿ ಖಾಸಗಿ ವಿಮಾನದಲ್ಲಿ ಹೈದರಾಬಾದ್‌ನಿಂದ ಉದಯ್‌ಪುರಕ್ಕೆ ಹೋಗಿದ್ದಾರೆ ನಿಹಾರಿಕಾ. ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಚಿತ್ರವನ್ನು ನಿಹಾರಿಕಾ ಹಂಚಿಕೊಂಡಿದ್ದಾರೆ.

ನಿಹಾರಿಕಾ ವಿವಾಹವು ಚೈತನ್ಯ ಜೊತೆಗೆ ನಡೆಯಲಿದೆ. ನಿಹಾರಿಕಾ ಮನೆಯಲ್ಲಿ ಕೆಲವು ಶಾಸ್ತ್ರಗಳು ಈಗಾಗಲೇ ಮುಗಿದಿದ್ದು, ಮದುವೆ ಕಾರ್ಯಕ್ರಮ ಹಾಗೂ ಆರತಕ್ಷತೆ ಕಾರ್ಯಕ್ರಮವು ಉದಯ್‌ಪುರದಲ್ಲಿ ನಡೆಯಲಿದೆ.
ನಿಶ್ಚಿತಾರ್ಥದ ದಿನ ತಮ್ಮ ಅಮ್ಮ 32 ವರ್ಷದ ಹಿಂದೆ ಉಟ್ಟಿದ್ದ ಸೀರೆಯನ್ನೇ ಉಟ್ಟಿದ್ದರು ನಿಹಾರಿಕಾ. ಇದು ಬಹಳವಾಗಿ ಗಮನ ಸೆಳೆದಿತ್ತು. ಇಷ್ಟು ಮಾತ್ರವಲ್ಲದೆ, ಅರಿಶಿನ ಕಾರ್ಯಕ್ರಮ, ಸಂಗೀತ್ ಕಾರ್ಯಗಳು ಭಾರಿ ಜೋರಾಗಿ ನಿಹಾರಿಕಾ ಮನೆಯಲ್ಲಿ ನಡೆದಿವೆ. ಮದುವೆ ಕಾರ್ಯಕ್ರಮಗಳ ಚಿತ್ರವನ್ನು ನಿಹಾರಿಕಾ ಹಂಚಿಕೊಂಡಿದ್ದಾರೆ.


Click it and Unblock the Notifications











