ಎಲ್ಲಿದ್ದೀಯಪ್ಪಾ vs ನಿಖಿಲ್ ಎಲ್ಲಿದ್ದೀಯಪ್ಪಾ: ಸಿನಿಮಾ ಆಗೋದು ಪಕ್ಕಾ.!
Recommended Video
ಮಂಡ್ಯ ಚುನಾವಣೆ ವೇಳೆ ಭಾರಿ ಸದ್ದು ಮಾಡಿದ್ದ 'ನಿಖಿಲ್ ಎಲ್ಲಿದ್ದೀಯಪ್ಪಾ' ಪದ ಸಿನಿಮಾ ಟೈಟಲ್ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಈಗಾಗಲೇ ಫಿಲಂ ಚೇಂಬರ್ ನಲ್ಲಿ ಟೈಟಲ್ ಗಾಗಿ ನಿರ್ಮಾಪಕರು ಮುಗಿಬಿದ್ದಿದ್ದು, ಶೀರ್ಷಿಕೆ ನಮಗೆ ಕೊಡಿ, ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ.
'ನಿಖಿಲ್ ಎಲ್ಲಿದ್ದೀಯಪ್ಪಾ' ಎಂಬ ಟೈಟಲ್ ಕೊಡೋದಕ್ಕೆ ವಾಣಿಜ್ಯ ಮಂಡಳಿ ನಿರಾಕರಣೆ ಮಾಡಿದೆ. ಅದಕ್ಕೆ ಕಾರಣ ಹಲವಿದೆ. ಆದ್ರೀಗ 'ನಿಖಿಲ್ ಎಲ್ಲಿದ್ದೀಯಪ್ಪಾ' ಬದಲು 'ಎಲ್ಲಿದ್ದೀಯಪ್ಪಾ' ಎಂದು ಹೆಸರಿಟ್ಟು ಸಿನಿಮಾ ಮಾಡೋಕೆ ಸಿದ್ಧವಾಗಿದ್ದಾರೆ.
ಇನ್ನು ಟ್ವಿಸ್ಟ್ ಅಂದ್ರೆ ವಾಣಿಜ್ಯ ಮಂಡಳಿಗೆ ಸೆಡ್ಡು ಹೊಡೆದು ಡಬ್ಬಿಂಗ್ ವಾಣಿಜ್ಯ ಮಂಡಳಿ ಸ್ಥಾಪನೆಯಾಗಿರುವುದು ಗೊತ್ತೆ ಇದೆ. ಇಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂಬ ಹೆಸರಿನಲ್ಲೇ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಡಲಾಗಿದೆಯಂತೆ. ಈ ಬಗ್ಗೆ ನಿರ್ಮಾಪಕ ಗಣೇಶ್ ಕೂಡ ಫಿಲಂ ಚೇಂಬರ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಏನಿದು 'ನಿಖಿಲ್ ಎಲ್ಲಿದ್ದೀಯಪ್ಪಾ' ವಿವಾದ? ಮುಂದೆ ಓದಿ.....

ನಿರ್ಮಾಪಕ ಎ.ಗಣೇಶ್ ಕೈಯಲ್ಲಿ 'ಎಲ್ಲಿದ್ದೀಯಪ್ಪಾ'
ಮಂಡ್ಯದಲ್ಲಿ ಶಾಸಕ ಪುಟ್ಟರಾಜು ಮತ್ತು ನಿಖಿಲ್ ಕುಮಾರ್ 'ನಿಖಿಲ್ ಎಲ್ಲಿದ್ದೀಯಪ್ಪಾ' ಹೆಸರಿನಲ್ಲಿ ಸಿನಿಮಾ ನಾವೇ ಮಾಡ್ತೀವಿ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ನಿರ್ಮಾಪಕ ಎ ಗಣೇಶ್ ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ, 'ಎಲ್ಲಿದ್ದೀಯಪ್ಪಾ' ಎಂಬ ಟೈಟಲ್ ಈಗಾಗಲೇ ಸಿಕ್ಕಿದೆ. ಈಗ 'ನಿಖಿಲ್ ಎಲ್ಲಿದ್ದೀಯಪ್ಪಾ' ಕೊಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಟ್ವಿಸ್ಟ್ ಕೊಡ್ತಿದೆ ಡಬ್ಬಿಂಗ್ ವಾಣಿಜ್ಯ ಮಂಡಳಿ
ಚಿನ್ನೇಗೌಡ ಅಧ್ಯಕ್ಷರಾಗಿರುವ ವಾಣಿಜ್ಯ ಮಂಡಳಿ ಈ ಟೈಟಲ್ ಕೊಡಲು ನಿರಾಕರಿಸಿದೆ. ಆದ್ರೆ, ಕೃಷ್ಣೇಗೌಡ ಅಧ್ಯಕ್ಷರಾಗಿರುವ ವಾಣಿಜ್ಯ ಮಂಡಳಿಯಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಟೈಟಲ್ ಕೊಡಲು ತೀರ್ಮಾನಿಸಿದೆ ಎನ್ನಲಾಗಿದೆ. ಅಲ್ಲಿಗೆ ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್ ಬಗ್ಗೆಯೇ ವಾಣಿಜ್ಯ ಮಂಡಳಿಗಳಲ್ಲಿಯೇ ಎರಡು ಬಗೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಿನಿಮಾ ಮಾಡೋದು ಯಾರು?
ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್ ಕೊಡಲು ಫಿಲಂ ಚೇಂಬರ್ ನಿರಾಕರಿಸಿದೆ. ಆದ್ರೆ, ಎಲ್ಲಿದ್ದೀಯಪ್ಪಾ ಟೈಟಲ್ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟಕ್ಕೂ ಈ ಸಿನಿಮಾ ಮಾಡೋದು ಯಾರು ಎಂಬುದೇ ಈಗ ಕುತೂಹಲ. ನಿರ್ಮಾಪಕ ಎ ಗಣೇಶ್ ನೋಡಿದ್ರೆ ಸಿನಿಮಾದ ಟೀಸರ್ ಶೂಟ್ ಮಾಡ್ತಿದ್ದಾರಂತೆ.

ಸಿನಿಮಾನಾ ಬರಿ ಪ್ರಚಾರನಾ
ನಿಖಿಲ್ ಎಲ್ಲಿದ್ದೀಯಪ್ಪಾ ಸಿನಿಮಾ ಆಗುತ್ತಾ ಅಥವಾ ಇದನ್ನ ಬಳಸಿಕೊಂಡು ಬರಿ ಪ್ರಚಾರ ತೆಗೆದುಕೊಳ್ಳುತ್ತಾರಾ ಗೊತ್ತಿಲ್ಲ. ಸಚಿವ ಪುಟ್ಟುರಾಜು ಈ ಸಿನಿಮಾ ನಾವೇ ಮಾಡ್ತೀವಿ ಎಂದು ಸುಮ್ಮನೇ ಹೇಳಿದ್ರಾ ಅಥವಾ ಗಂಭೀರವಾಗಿ ಈ ಬಗ್ಗೆ ಚಿಂತನೆ ನಡೆಸಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.


Click it and Unblock the Notifications











