ಮಂಡ್ಯದಲ್ಲಿ ಅಂಬಿ ಪುತ್ರನ ಏಟು, ಸಿಎಂ ಪುತ್ರನ ತಿರುಗೇಟು

Recommended Video

ಐಟಿ ದಾಳಿ ವಿಷಯದಲ್ಲಿ ಅಭಿಷೇಕ್ ಅಂಬರೀಶ್ ಪ್ರತಿಕ್ರಿಯಿಸಿದ್ದು ಹೀಗೆ | FILMIBEAT KANNADA

ಇಷ್ಟು ದಿನ ಮಂಡ್ಯ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಮತ್ತು ಸಿಎಂ ಕುಮಾರಸ್ವಾಮಿ ನಡುವೆ ವಾಗ್ವಾದ ನಡೆಯುತ್ತಿತ್ತು. ಆದ್ರೀಗ, ಮಂಡ್ಯದ ನಾಡಲ್ಲಿ ಅಂಬಿ ಪುತ್ರ ಮತ್ತು ಸಿಎಂ ಪುತ್ರನ ಏಟು ಎದಿರೇಟು ಆರಂಭವಾಗಿದೆ.

ಒಂದು ಕಡೆ ಮದ್ದೂರಿನಲ್ಲಿ ಪ್ರಚಾರ ಮಾಡ್ತಿದ್ದ ನಟ ಅಭಿಷೇಕ್ ಪರೋಕ್ಷವಾಗಿ ಮುಖ್ಯಮಂತ್ರಿ ಮತ್ತು ಅವರ ಮಗ ನಿಖಿಲ್ ಗೆ ಟಾಂಗ್ ನೀಡಿದ್ದಾರೆ. ನಂತರ ಇನ್ನೊಂದು ಕಡೆ ಪ್ರಚಾರದಲ್ಲಿ ನಿಖಿಲ್, ಅಭಿಷೇಕ್ ಮತ್ತು ಸುಮಲತಾಗೆ ತಿರುಗೇಟು ನೀಡಿದ್ದಾರೆ.

ಮಂಡ್ಯ ರಾಜಕೀಯ ನಮ್ಮ ಸ್ನೇಹಕ್ಕೆ ಯಾವುದೇ ಅಡ್ಡಿಯಾಗಲ್ಲ ಎನ್ನುತ್ತಿದ್ದ ಗೆಳೆಯರು ಈಗ ಹಾವು-ಮುಂಗುಸಿಯಂತೆ ಕಿತ್ತಾಡುವ ಸನ್ನಿವೇಶಕ್ಕೆ ಹೆಜ್ಜೆ ಇಡ್ತಿದ್ದಾರೆ ಎಂಬ ಅನುಮಾನ ಕಾಡ್ತಿದೆ. ಅಷ್ಟಕ್ಕೂ, ಅಭಿಷೇಕ್ ಏನಂದ್ರು? ಅದಕ್ಕೆ ನಿಖಿಲ್ ಕುಮಾರ್ ಏನಂದ್ರು? ಮುಂದೆ ಓದಿ.....

ಟವಲ್ ಹಾಕ್ಕೊಂಡು ನಾವು ಅಳಲ್ಲ

ಟವಲ್ ಹಾಕ್ಕೊಂಡು ನಾವು ಅಳಲ್ಲ

''ಮೈಕ್ ಮುಂದೆ ನಿಂತು ಟವಲ್ ಹಾಕ್ಕೊಂಡು ಅಳಬೇಕಾ, ನಾವ ಅಳಲ್ಲ, ನೀವು ಇಷ್ಟು ಜನ ನಮಗೆ ಧೈರ್ಯ ಕೊಡೋಕೆ ಇದ್ದೀರಾ, ನಾವ್ಯಾಕೆ ಅಳಬೇಕು'' ಎಂದು ಪರೋಕ್ಷವಾಗಿ ಸಿಎಂ ಕುಟುಂಬಕ್ಕೆ ಮಾತಿನ ಮೂಲಕ ಚಾಟಿ ಬೀಸಿದರು ನಟ ಅಭಿಷೇಕ್.

ಮಂಡ್ಯದ ಅಳಿಯ ನಾನಲ್ಲ

ಮಂಡ್ಯದ ಅಳಿಯ ನಾನಲ್ಲ

'ಒಬ್ಬರನ್ನ ಮದುವೆ ಆಗಿ ನಾನು ಮಂಡ್ಯದ ಅಳಿಯ ಆಗಲ್ಲ. ನಾನು ಮಂಡ್ಯದ ಮಗ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ನಿಖಿಲ್ ಏನು ಹೇಳಿದ್ದರು?

ನಿಖಿಲ್ ಏನು ಹೇಳಿದ್ದರು?

ಮಂಡ್ಯದ ಹುಡುಗಿಯನ್ನ ಮದುವೆ ಆಗ್ತೀರಂತೆ ಹೌದಾ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ 'ನಮ್ಮ ಮನೆಯಲ್ಲಿ ಹುಡುಗಿ ನೋಡುತ್ತಿದ್ದಾರೆ. ಮಂಡ್ಯದಲ್ಲೇ ಹುಡುಗಿ ಸಿಕ್ಕರೇ ಮಂಡ್ಯ ಅಳಿಯ ಆಗಬಹುದು' ಎಂದಿದ್ದರು. ಈ ಮಾತಿಗೆ ಅಭಿಷೇಕ್ ಪರೋಕ್ಷವಾಗಿ ಕಾಲೆಳೆದಿದ್ದಾರೆ.

ಯಾರು ನಾಟಕ ಮಾಡ್ತಿದ್ದಾರೆ ಅಂತ ಗೊತ್ತಿದೆ

ಯಾರು ನಾಟಕ ಮಾಡ್ತಿದ್ದಾರೆ ಅಂತ ಗೊತ್ತಿದೆ

ಇನ್ನು ಅಭಿಷೇಕ್ ಅವರ ಈ ಹೇಳಿಕೆಗೆ ನಿಖಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. 'ಯಾರು ನಾಟಕ ಮಾಡ್ತಿದ್ದಾರೆ ಅಂತ ಮಂಡ್ಯ ಜಿಲ್ಲೆಯ ಜನ ನೋಡ್ತಿದ್ದಾರೆ. ಫಲಿತಾಂಶದ ದಿನ ಉತ್ತರ ಕೊಡ್ತಾರೆ' ಬಿಡಿ ಎಂದು ಎಲ್ಲದಕ್ಕೂ ಅಂದೇ ಉತ್ತರ ಎಂದರು.

More from Filmibeat

English summary
Talk fight between jds candidate nikhil kumar and ambarish son abhishek in Mandya election campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X