For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರ್ ದಂಪತಿಯ ಮೊದಲ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

  |

  ಸ್ಯಾಂಡಲ್ ವುಡ್ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾಗಿ ಆಚರಣೆ ಮಾಡಿದ್ದಾರೆ. ನಿಖಿಲ್ ದಂಪತಿಗೆ ಇದು ಮೊದಲ ವರಮಹಾಲಕ್ಷ್ಮಿ ಹಬ್ಬ. ಹಾಗಾಗಿ ನಿಖಿಲ್ ಮನೆಯಲ್ಲಿ ಈ ಬಾರಿಯ ವರಮಹಾಲಕ್ಷ್ಮಿಯನ್ನು ಮತ್ತಷ್ಟು ವಿಶೇಷವಾಗಿಯೆ ಆಚರಿಸಿದ್ದಾರೆ.

  ಮನೆಯಲ್ಲಿ ಲಕ್ಷ್ಮಿ ಪ್ರತಿಷ್ಠಾಪಿಸಿ ಲಕ್ಷ್ಮಿಯನ್ನು ಪೂಜಿಸಿ ಆರಾಧನೆ ಮಾಡಿದ್ದಾರೆ. ಹಬ್ಬ ಆಚರಣೆ ಮಾಡಿದ ಪತ್ನಿ ರೇವತಿ ಮತ್ತ ಅಮ್ಮ ಅನಿತಾ ಕುಮಾರಸ್ವಾಮಿ ಜೊತೆ ನಿಖಿಲ್ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪತ್ನಿ ರೇವತಿ ಹಳದಿ ಮತ್ತು ಕೆಂಪು ಬಣ್ಣದ ಬಾರ್ಡರ್ ಸೀರಿಯಲ್ಲಿ ಕಂಗೊಳಿಸುತ್ತಿದ್ದಾರೆ.

  Mr And Mrsಆಗಿ 3 ತಿಂಗಳು: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ನಿಖಿಲ್ ಕುಮಾರ್Mr And Mrsಆಗಿ 3 ತಿಂಗಳು: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ನಿಖಿಲ್ ಕುಮಾರ್

  ಫೋಟೋ ಜೊತೆಗೆ ನಿಖಿಲ್ ನಾಡಿನ ಜನತೆಗೆ ಹಬ್ಬದ ಶುಭಾಶಯಕೋರಿದ್ದಾರೆ. "ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ದೇವರು ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ದಯಪಾಲಿಸಲಿ ಮತ್ತು ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲಿ" ಎಂದು ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

  ಇನ್ನೂ ಇಡೀ ಕುಟುಂಬ ಜೊತೆಯಲ್ಲಿಯೆ ಕುಳಿತು ಊಟ ಮಾಡಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಈ ಫೋಟೋ ಸಹ ವೈರಲ್ ಆಗಿದೆ. ಅಂದ್ಹಾಗೆ ನಿಖಿಲ್ ಮತ್ತು ರೇವತಿ ಏಪ್ರಿಲ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಸರಳವಾಗಿ ಸಪ್ತಪದಿ ತುಳಿದಿದ್ದಾರೆ.

  ಮದುವೆ ನಂತರ ನಿಖಿಲ್ ಪತ್ನಿಯ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಮದುವೆಯಾಗಿ 3 ತಿಂಗಳಾದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  "ನಾವು ಒಬ್ಬರಿಗೊಬ್ಬರು ಪರಿಚಯವಾಗಿ 6 ತಿಂಗಳು ಕಳೆದಿವೆ. ನಾವು ಅಧಿಕೃವಾಗಿ ಮಿಸ್ಟರ್ ಅಂಡ್ ಮಿಸಸ್ ಎನಿಸಿಕೊಂಡು ಇಂದಿಗೆ ಸರಿಯಾಗಿ ಮೂರು ತಿಂಗಳು ಆಗಿದೆ. ಎಷ್ಟು ಬೇಗ ದಿನಗಳು ಕಳೆಯುತ್ತಿವೆ. ನಾವಿಬ್ಬರು ಎಷ್ಟೋ ಕಾಲದ ಪರಿಚಿತರು ಎಂದು ಭಾಸವಾಗುತ್ತಿದೆ" ಎಂದು ಬರೆದುಕೊಂಡು ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದರು.

  English summary
  Actor Nikhil Kumar and his wife Revathi celebrate first Varamahalakshmi after their marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X