Mr And Mrsಆಗಿ 3 ತಿಂಗಳು: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ನಿಖಿಲ್ ಕುಮಾರ್

ಸ್ಯಾಂಡಲ್ ವುಡ್ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಸದ್ಯ ಪತ್ನಿ ರೇವತಿ ಜೊತೆ ಲಾಕ್ ಡೌನ್ ಸಮಯವನ್ನು ಕಳೆಯುತ್ತಿದ್ದಾರೆ. ಕೃಷಿ ಮಾಡುವುದಾಗಿ ಹೇಳಿ ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಿರುವ ನಿಖಿಲ್ ಜಮೀನಿನಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದರು. ಪತ್ನಿ ರೇವತಿ ಜೊತೆ ನಿಖಿಲ್ ತೋಟದ ಮನೆಯಲ್ಲಿದ್ದಾರೆ.

Recommended Video

KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

ಆಗಾಗ ಪತ್ನಿ ಜೊತೆ ಇರುವ ಫೋಟೋವನ್ನು ಶೇರ್ ಮಾಡುತ್ತಿರುವ ನಿಖಿಲ್, ಸಮಯ ಉರುಳಿಹೋಗುತ್ತಿರುವುದೇ ಗೊತ್ತಾಗುತ್ತಿಲ್ಲ ಎಂದು ಪತ್ನಿ ಜೊತೆ ಇರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದ್ಹಾಗೆ ನಿಖಿಲ್ ಲಾಕ್ ಡೌನ್ ನಡುವೆಯೂ ಏಪ್ರಿಲ್ 17ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಮನಗರದಲ್ಲಿ ನಿಖಿಲ್ ಮತ್ತು ರೇವತಿ ಮದುವೆ ಸರಳವಾಗಿ ನೆರವೇರಿತ್ತು. ಕೊರೊನಾ ವೈರಸ್ ಹಾವಳಿಯ ಪರಿಣಾಮ ಅದ್ದೂರಿ ಮದುವೆ ಬ್ರೇಕ್ ಹಾಕಿ ಸರಳವಾಗಿ ಹಸೆಮಣೆ ಏರಿದ್ದರು. ಮುಂದೆ ಓದಿ..

ನಿಖಿಲ್-ರೇವತಿ ದಾಂಪತ್ಯಕ್ಕೆ 3 ತಿಂಗಳು

ನಿಖಿಲ್-ರೇವತಿ ದಾಂಪತ್ಯಕ್ಕೆ 3 ತಿಂಗಳು

ವಿಶೇಷ ಅಂದರೆ ನಿಖಿಲ್ ಮತ್ತು ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೂರು ತಿಂಗಳಾಗಿದೆ. ಈ ಮೂರು ತಿಂಗಳು ಒಟ್ಟಿಗೆ ಕಳೆದ ಬಗ್ಗೆ ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಬರೆದುಕೊಂಡಿದ್ದಾರೆ. ಎಷ್ಟು ಬೇಗ ದಿನಗಳು ಉರುಳಿಹೋಗುತ್ತಿವೆಯಲ್ಲ ಎಂದು ಪತ್ನಿ ಜೊತೆ ಇರುವ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರೆ.

ಎಷ್ಟು ಬೇಗ ದಿನಗಳು ಕಳೆಯುತ್ತಿವೆ

ಎಷ್ಟು ಬೇಗ ದಿನಗಳು ಕಳೆಯುತ್ತಿವೆ

"ನಾವು ಒಬ್ಬರಿಗೊಬ್ಬರು ಪರಿಚಯವಾಗಿ 6 ತಿಂಗಳು ಕಳೆದಿವೆ. ನಾವು ಅಧಿಕೃವಾಗಿ ಮಿಸ್ಟರ್ ಅಂಡ್ ಮಿಸಸ್ ಎನಿಸಿಕೊಂಡು ಇಂದಿಗೆ ಸರಿಯಾಗಿ ಮೂರು ತಿಂಗಳು ಆಗಿದೆ. ಎಷ್ಟು ಬೇಗ ದಿನಗಳು ಕಳೆಯುತ್ತಿವೆ. ನಾವಿಬ್ಬರು ಎಷ್ಟೋ ಕಾಲದ ಪರಿಚಿತರು ಎಂದು ಭಾಸವಾಗುತ್ತಿದೆ" ಎಂದು ಬರೆದುಕೊಂಡು ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಿಖಿಲ್ ದಂಪತಿ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ

ನಿಖಿಲ್ ದಂಪತಿ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ

ನಿಖಿಲ್ ಮತ್ತು ರೇವತಿ ಮುದ್ದಾದ ಜೋಡಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬರುತ್ತಿದೆ. ನಿಖಿಲ್ ಪತ್ನಿ ರೇವತಿ ಜೊತೆ ಸಮಯ ಕಳೆಯುತ್ತಿರುವ ಸಾಕಷ್ಟು ಫೋಟೋ ಹಂಚಿಕೊಂಡಿದ್ದಾರೆ. ಎಲ್ಲಾ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ವರ್ಕೌಟ್ ವಿಡಿಯೋ ಶೇರ್ ಮಾಡಿದ್ದ ನಿಖಿಲ್

ವರ್ಕೌಟ್ ವಿಡಿಯೋ ಶೇರ್ ಮಾಡಿದ್ದ ನಿಖಿಲ್

ಇತ್ತೀಚಿಗೆ ಇಬ್ಬರು ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. 'ವ್ಯಾಯಾಮ ಮಾಡಲು ಯಾವಾಗಲೂ ಜಿಮ್ ಬೇಕು ಎಂದೇನೂ ಇಲ್ಲ, ವ್ಯಾಯಾಮ ಮಾಡಲು ಪ್ರೇರಣೆ ಬೇಕು, ನನ್ನ ಪಾರ್ಟನ್ ಜೊತೆ ಸೇರಿ ನಿಸರ್ಗದ ಮಧ್ಯೆ ವ್ಯಾಯಾಮ ಮಾಡಿದೆ' ಎಂದು ನಿಖಿಲ್ ಬರೆದುಕೊಂಡಿದ್ದಾರೆ.

More from Filmibeat

English summary
Actoe Nikhil Kumar and Revathi have been married for 3 months. Nikhil Kumar Shares romantic photo with his wife.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X