ನಿಖಿಲ್-ರೇವತಿ ಮದುವೆ: ಫಾರ್ಮ್ ಹೌಸ್ ನಲ್ಲಿ ಸಿದ್ಧತೆ, 9.30ಕ್ಕೆ ಮಾಂಗಲ್ಯ ಧಾರಣೆ
ಸ್ಯಾಂಡಲ್ ವುಡ್ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಮದುವೆಗೆ ಕಲ ಸಿದ್ಧತೆಗಳು ಪ್ರಾರಂಭವಾಗಿವೆ. ಕೊರೊನಾ ಲಾಕ್ ಡೌನ್ ನಡುವೆಯೂ ಈಗಾಗಲೆ ನಿಗದಿಯಾದ ಮುಹೂರ್ತಕ್ಕೆ ನಿಖಲ್, ರೇವತಿ ಜೊತೆ ಸಪ್ತಪದಿ ತುಳಿಯಲಿದ್ದಾರೆ.
Recommended Video
ಬಿಡದಿ ಸಮೀಪದ ಕೇತಗನಹಳ್ಳಿಯ ಕುಮಾರ ಸ್ವಾಮಿ ಫಾರ್ಮ್ ಹೌಸ್ ನಲ್ಲಿ ನಿಖಿಲ್ ರೇವತಿ ಮದುವೆ ನಡೆಯಲಿದ್ದು, ಸರಳವಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಿನ್ನೆ ರಾತ್ರಿಯೆ ನಿಖಿಲ್ ಕುಟುಂಬ ಫಾರ್ಮ್ ಹೌಸ ತಲುಪಿದ್ದು, ಈಗಾಗಲೆ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದೆ. ಮುಂದೆ ಓದಿ..

ಫಾರ್ಮಹೌಸ್ ನಲ್ಲಿ ಪ್ರಾರಂಭವಾದ ಮದುವೆ ಶಾಸ್ತ್ರಗಳು
ರಾಮನಗರದ ಕೇತಗನಹಳ್ಳಿಯಲ್ಲಿರುವ ಫರ್ಮ್ ಹೌಸ್ ನಲ್ಲಿ ಈಗಾಗಲೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ನಿಖಿಲ್ ಮತ್ತು ರೇವತಿ ಕುಟುಂಬ ಫಾರ್ಮ್ ಹೌಸ್ ತಲುಪಿದ್ದು, ಮದುವೆ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದನೆ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು, ಕುಟುಂಬದ ಕೆಲವೇ ಕೆಲವು ಸದಸ್ಯರು ಮಾತ್ರ ಭಾಗಿಯಾಗಿದ್ದಾರೆ. ಆಡಂಬರ, ಅದ್ದೂರಿತನವಿಲ್ಲದೆ ಸರಳವಾಗಿ ನಿಖಿಲ್ ಮತ್ತು ರೇವತಿ ಹಸೆಮಣೆ ಏರುತ್ತಿದ್ದಾರೆ.

ಬೆಳಗ್ಗೆ 9.30ಕ್ಕೆ ಮುಹೂರ್ತ
ಇಂದು ಬೆಳಗ್ಗೆ 9.30ಕ್ಕೆ ಸಲ್ಲುವ ಶುಭಲಗ್ನದಲ್ಲಿ ನಿಖಿಲ್ ಕುಮಾರ್, ರೇವತಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಪುತ್ರನ ಮದುವೆಗೆ ತೀರ ಆತ್ಮೀಯ ಸಂಬಂಧಿಕರು ಮಾತ್ರ ಹಾಜರಾಗಿ ನವ ಜೋಡಿಗೆ ಶುಭಹಾರೈಸಲಿದ್ದಾರೆ.

ಫಾರ್ಮ್ ಹೌಸ್ ನಲ್ಲಿ ಸಕಲ ಸಿದ್ಧತೆ
ಮದುವೆ ನಡೆಯುತ್ತಿರುವ ರಾಮನಗರದ ಎಚ್ ಡಿ ಕೆ ಫಾರ್ಮ್ ಹೌಸ್ ನಲ್ಲಿ ಎಲ್ಲಾ ತಯಾರಿಗಳನ್ನು ಮಾಡಲಾಗಿದೆ. ಮದುವೆಗೆ ಆಗಮಿಸಿದ ಅತಿಥಿಗಳಿಗೆ ಫಾರ್ಮ್ ಹೌಸ್ ನಲ್ಲಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ನಂತರ ವರನ ನಿವಾಸಕ್ಕೆ ವಾಪಸ್ ಆಗಲಿದ್ದು, ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಲಿದೆ.

ಸ್ವಗೃಹದಲ್ಲಿಯೆ ನಡೆದ ಬಹುತೇಕ ಮದುವೆ ಶಾಸ್ತ್ರಗಳು
ಮದುವೆ ಅಂದರೆ ಸಂಭ್ರಮ, ಸಡಗರ, ಸಂತೋಷದ ಜೊತೆಗೆ ಶಾಸ್ತ್ರಗಳು ಆಕರ್ಷಿಸುತ್ತವೆ. ಸರಳವಾಗಿ ಮದುವೆಯಾಗುತ್ತಿದ್ದರು ನಿಖಿಲ್ ಮದುವೆಯ ಶಾಸ್ತ್ರಗಳು ಭರ್ಜರಿಯಾಗಿ ನಡೆದಿದೆ. ನಿನ್ನೆಯೇ ಮನೆಯಲ್ಲಿ ಅರಿಶಿನ ಶಾಸ್ತ್ರ, ಚ್ಪಪ್ಪರ ಶಾಸ್ತ್ರ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


Click it and Unblock the Notifications











