ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿದ ನಿಖಿಲ್-ರೇವತಿ
Recommended Video

ಪ್ರೇಮಿಗಳ ದಿನಾಚರಣೆಯನ್ನು ನಿಖಿಲ್ ಕುಮಾರ್ ಮತ್ತು ರೇವತಿ ಬಹಳ ವಿಶೇಷವಾಗಿ ಆಚರಿಸಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ದೇವಸ್ಥಾನಕ್ಕೆ ಭಾವಿ ಪತ್ನಿ ರೇವತಿ ಜೊತೆ ಭೇಟಿ ನೀಡಿದ ನಿಖಿಲ್ ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದರು.
ನಿಖಿಲ್ ಕುಮಾರ್ ಮತ್ತು ರೇವತಿ ಅವರನ್ನು ಒಟ್ಟಿಗೆ ದೇವಸ್ಥಾನದಲ್ಲಿ ನೋಡಿದ ಜನರು, ಅವರನ್ನು ಮಾತನಾಡಿಸಲು ಮುಗಿಬಿದ್ದರು. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. 'ಇಬ್ಬರ ಜೋಡಿ ಚೆನ್ನಾಗಿದೆ' ಎಂದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಜನರ ಜೊತೆ ಕುಳಿತು ದೇವಸ್ಥಾನದಲ್ಲಿ ಊಟ ಮಾಡಿದರು. ನಂತರ ಇದೇ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ''ವಿಶ್ವ ಪ್ರೇಮಿ ದಿನಾಚರಣೆಯ ಈ ದಿನದಂದು ಆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಾನು ಹಾಗು ರೇವತಿಯವರು ಅಮ್ಮನ ಆಶೀರ್ವಾದ ಪಡೆದ ಸುಂದರ ಕ್ಷಣಗಳು'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರ ನಿಶ್ಚಿತಾರ್ಥ ಫೆಬ್ರವರಿ 10 ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಜರುಗಿತ್ತು.
ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಸಂಬಂಧಿ ರೇವತಿ ಜೊತೆ ನಿಖಿಲ್ ಕಲ್ಯಾಣ ನಿಗದಿಯಾಗಿದ್ದು, ಏಪ್ರಿಲ್ ತಿಂಗಳಲ್ಲಿ ವಿವಾಹ ನಡೆಯಲಿದೆ. ರಾಮನಗರದಲ್ಲಿ ನಿಖಿಲ್-ರೇವತಿ ಮದುವೆ ಮಾಡಲು ಹಿರಿಯರು ನಿಶ್ಚಿಯಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.


Click it and Unblock the Notifications











