ನಿಖಿಲ್-ರೇವತಿ ಮದುವೆ ಆಮಂತ್ರಣ ಪತ್ರಿಕೆಯ ವಿಶೇಷತೆ ಇಲ್ಲಿದೆ

ಸ್ಯಾಂಡಲ್ ವುಡ್ ಯುವರಾಜ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರ ಮದುವೆ ಏಪ್ರಿಲ್ ತಿಂಗಳಲ್ಲಿ ನೆರವೇರಲಿದೆ ಎಂಬ ಮಾಹಿತಿ ಇತ್ತು. ಇದೀಗ ಅಧಿಕೃತವಾಗಿ ನಿಖಿಲ್ ಕಲ್ಯಾಣದ ಆಮಂತ್ರಣ ಪತ್ರಿಕೆ ಹೊರಬಿದ್ದಿದೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗನ ಮದುವೆ ಎನ್ನುವ ಕಾರಣಕ್ಕೆ ಭಾರಿ ಅದ್ಧೂರಿಯಿಂದ ವಿವಾಹ ನಡೆಯಬಹುದು, ಅದಕ್ಕೆ ತಕ್ಕಂತೆ ಮದುವೆ ಆಮಂತ್ರಣ ಪತ್ರಿಕೆಯೂ ಸಿದ್ಧವಾಗಿರಬಹುದು ಎಂಬ ನಿರೀಕ್ಷೆ ಇತ್ತು. ಆ ಎಲ್ಲ ನಿರೀಕ್ಷೆಗೂ ಈ ಮಮತೆಯ ಕರೆಯೋಲೆ ಉತ್ತರ ಸಿಕ್ಕಿದೆ. ನಿಖಿಲ್-ರೇವತಿ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ? ಅದರಲ್ಲಿರುವ ವಿಶೇಷತೆ ಏನು? ಮುಂದೆ ಓದಿ...

ಆಮಂತ್ರಣ ಪತ್ರಿಕೆಯ ಮುಖಪುಟ

ಆಮಂತ್ರಣ ಪತ್ರಿಕೆಯ ಮುಖಪುಟ

ನಿಖಿಲ್ ಕುಮಾರ್ ಮತ್ತು ರೇವತಿ ಮದುವೆ ಆಮಂತ್ರಣ ಪತ್ರಿಕೆ ಮುಖಪುಟ ಫೋಟೋ ಇದಾಗಿದೆ. ''ಶ್ರೀಮತಿ ಚೆನ್ನಮ್ಮ ಮತ್ತು ಎಚ್ ಡಿ ದೇವೇಗೌಡರ ಕುಟುಂಬದಿಂದ ಶುಭ ವಿವಾಹ. ತಾರೀಖು ಮತ್ತು ವಾರದ ವಿವರವಿದ್ದು, ನಿಖಿಲ್ ಮತ್ತು ರೇವತಿ ಹೆಸರಿದೆ''. ಕೊನೆಯಲ್ಲಿ 'ಶ್ರೀಮತಿ ಅನಿತಾ ಕುಮಾರಸ್ವಾಮಿ ಶಾಸಕರು ರಾಮನಗರ ಹಾಗೂ ಎಚ್ ಡಿ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ- ಇವರಿಂದ' ಎಂದು ಮುದ್ರಿಸಲಾಗಿದೆ.

17ನೇ ತಾರೀಖು ಮುಹೂರ್ತ

17ನೇ ತಾರೀಖು ಮುಹೂರ್ತ

ನಿಖಿಲ್ ಮತ್ತು ರೇವತಿ ಅವರ ಮದುವೆ ಏಪ್ರಿಲ್ 17ನೇ ತಾರೀಖು ಶುಕ್ರವಾರದಂದು ಜರುಗಲಿದೆ. ಶಾರ್ವರಿ ಸಂವತ್ಸರದ ಚೈತ್ರ ಮಾಸ ಕೃಷ್ಣಪಕ್ಷ ದಶಮಿಯ 17-04-2020ನೇ ಶುಕ್ರವಾರದ ಬೆಳಿಗ್ಗೆ 9-15 ರಿಂದ 9-40ರ ಶುಭ ಲಗ್ನದಲ್ಲಿ ಮಾಂಗಲ್ಯಧಾರಣೆ ಆಗಲಿದೆ.

ಸಪ್ತಪದಿ ಮಂಟಪ

ಸಪ್ತಪದಿ ಮಂಟಪ

ನಿಖಿಲ್ ಕುಮಾರ್ ಮತ್ತು ರೇವತಿ ಅವರ ಮದುವೆ ರಾಮನಗರದ (ಬೆಂಗಳೂರು ಮತ್ತು ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕದ ಹತ್ತಿರ) ಸಪ್ತಪದಿ ಮಂಟಪದಲ್ಲಿ ನಡೆಸಲು ಗುರು ಹಿರಿಯರು ಮತ್ತು ಕುಟುಂಬದವರು ನಿಶ್ಚಿಯಿಸಿದ್ದಾರೆ.

ಆರತಕ್ಷತೆ ಬಗ್ಗೆ ಮಾಹಿತಿ ಇಲ್ಲ

ಆರತಕ್ಷತೆ ಬಗ್ಗೆ ಮಾಹಿತಿ ಇಲ್ಲ

ನಿಖಿಲ್ ಕುಮಾರ್ ಮತ್ತು ರೇವತಿ ಮದುವೆಯ ಆಮಂತ್ರಣ ಪತ್ರಿಕೆ ನೋಡಲು ಸರಳವಾಗಿದ್ದು, ಶುಕ್ರವಾರ ಒಂದೇ ದಿನ ವಿವಾಹ ನಡೆಯಲಿದೆ. ಸದ್ಯಕ್ಕೆ ಆರತಕ್ಷತೆ ಬಗ್ಗೆ ಆಮಂತ್ರಣ ಪತ್ರಿಕೆಯಲ್ಲಿ ಮಾಹಿತಿ ನೀಡಿಲ್ಲ. ಬಹುಶಃ, ಇನ್ನೊಂದು ದಿನ ಆರತಕ್ಷತೆ ನಡೆಸಲು ಎಚ್ ಡಿ ಡಿ ಕುಟುಂಬ ನಿರ್ಧರಿಸಿರಬಹುದು.

ಫೆಬ್ರವರಿ 10 ರಂದು ನಿಶ್ಚಿತಾರ್ಥ

ಫೆಬ್ರವರಿ 10 ರಂದು ನಿಶ್ಚಿತಾರ್ಥ

ವಿಜಯನಗರ ಶಾಸಕ ಎಂ ಕೃಷ್ಣಪ್ಪ ಅವರ ಸಂಬಂಧಿ ಮಂಜುನಾಥ್ ಅವರ ಮಗಳು ರೇವತಿ ಜೊತೆ ನಿಖಿಲ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಫೆಬ್ರವರಿ 10 ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಇವರಿಬ್ಬರ ಎಂಗೇಜ್ ಮೆಂಟ್ ಕಾರ್ಯಕ್ರಮ ನಡೆದಿತ್ತು.

More from Filmibeat

English summary
Karnataka Ex Chief minister HD Kumaraswamy son nikhil kumar marriage invitation specialties.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X