For Quick Alerts
  ALLOW NOTIFICATIONS  
  For Daily Alerts

  ನಾಡಿನ ಅಗ್ರಮಾನ್ಯ ನೇತಾರ, ಪ್ರೀತಿಯ ತಾತ; ದೇವೇಗೌಡರಿಗೆ ನಿಖಿಲ್ ಬರ್ತಡೇ ವಿಶ್

  |

  ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ ಏಕೈಕ ಕನ್ನಡಿಗ ಹೆಚ್.ಡಿ ದೇವೇಗೌಡ ಅವರ ಜನ್ಮದಿನ ಇಂದು (ಮೇ 18). ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  ರಾಜಕಾರಣಿಗಳು, ಕುಟುಂಬದವರು ಹಿರಿಯ ಮುತ್ಸದ್ಧಿಗೆ ಪ್ರೀತಿಯ ಶುಭಾಶಯ ಕೋರುತ್ತಿದ್ದಾರೆ. 'ಹಿರಿಯರು ಮತ್ತು ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ' ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

  ಫೋಟೋ ವೈರಲ್; ಲಡಾಖ್‌ನಲ್ಲಿ 'ರೈಡರ್' ನಿಖಿಲ್ ಕುಮಾರ್ಫೋಟೋ ವೈರಲ್; ಲಡಾಖ್‌ನಲ್ಲಿ 'ರೈಡರ್' ನಿಖಿಲ್ ಕುಮಾರ್

  ಇನ್ನು ನಟ, ರಾಜಕಾರಣಿ ನಿಖಿಲ್ ಕುಮಾರ್ ಕೂಡ ತಮ್ಮ ತಾತನ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಕನ್ನಡ ನಾಡಿನ ಅಗ್ರಮಾನ್ಯ ನೇತಾರ ಎಂದು ದೇವೇಗೌಡರನ್ನು ಹೊಗಳಿರುವ ನಿಖಿಲ್, ಅವರಿಗೆ ದೀರ್ಘಾಯುಷ್ಯವನ್ನು ದೇವರು ದಯಪಾಲಿಸಲಿ ಎಂದಿದ್ದಾರೆ.

  ಟ್ವೀಟ್ ಮಾಡಿರುವ ನಿಖಿಲ್ 'ಈ ದೇಶ ಕಂಡ ಅಪರೂಪದ ಜನನಾಯಕ, ರೈತನಾಯಕ, ಕನ್ನಡ ನಾಡಿನ ಅಗ್ರಮಾನ್ಯ ನೇತಾರ, ನೀರಾವರಿ ಹರಿಕಾರ, ಮಾಜಿ ಪ್ರಧಾನಮಂತ್ರಿಗಳು, ನನ್ನ ಆದರ್ಶ ಮತ್ತು ನನ್ನ ಪ್ರೀತಿಯ ತಾತ, ಸನ್ಮಾನ್ಯ ಶ್ರೀ ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಉತ್ತಮ ಆರೋಗ್ಯವನ್ನು, ಧೀರ್ಘಾಯುಷ್ಯವನ್ನು, ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.

  ಕೋವಿಡ್ ನಿಂದ ಚೇತರಿಸಿಕೊಂಡಿರುವ ನಿಖಿಲ್ ಸದ್ಯ ಮನೆಯಲ್ಲೇ ಕಾಲಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ತಮ್ಮ ತೋಟದ ಮನೆಯಲ್ಲಿ ಪತ್ನಿ ರೇವತಿ ಮತ್ತು ತಂದೆ-ತಾಯಿ ಜೊತೆ ಬಸವಜಯಂತಿ ಆಚರಣೆ ಮಾಡಿದ್ದರು. ಪೂಜೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  Nikhil Kumar birthday wishes to his grandfather H.D Deve Gowda

  Recommended Video

  Kirik Party ಅನುಭವವನ್ನು‌ ಮತ್ತೆ ಫೀಲ್‌ ಮಾಡೋಕೆ ಇಷ್ಟ ಇಲ್ಲ | Filmibeat Kannada

  ಇನ್ನು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಬೇಡಿ ಎಂದು ಹೆಚ್.ಡಿ ದೇವೇಗೌಡ ಎರಡು ದಿನದಳ ಮುಂಚೆಯೇ ಮನವಿ ಮಾಡಿಕೊಂಡಿದ್ದರು. ತಮ್ಮ ಹತ್ತಿರದ ಕೋವಿಡ್ ಕೇಂದ್ರಗಳಿಗೆ ಮತ್ತು ಸೋಂಕಿತರಿಗೆ ನೆರವು ನೀಡಿ ಎಂದು ಅಭಿಮಾನಿಗಳಿಗೆ ಮತ್ತು ಜೆಡಿಎಸ್ ಕಾರ್ಯಕರ್ತದಲ್ಲಿ ಕೋರಿಕೊಂಡಿದ್ದರು. ಕೋವಿಡ್ ನಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಸಂಭ್ರಮವನ್ನು ವಿವಿಧ ರೀತಿಯಲ್ಲಿ ಆಚರಿಸುವ ಬದಲು ಅದೇ ಹಣವನ್ನು ಕೊರೊನಾ ಸಂಕಷ್ಟದಲ್ಲಿರೋರಿಗೆ ನೆರವು ನೀಡುವಂತೆ ಕೇಳಿಕೊಂಡಿದ್ದರು.

  English summary
  Actor, Politician Nikhil Kumar birthday wishes to his grandfather H.D Devegowda.
  Tuesday, May 18, 2021, 14:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X