ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಚಿತಾ ಮತ್ತು ಅಭಿಗೆ ನಿಖಿಲ್ ಕುಮಾರ್ ಹೇಳಿದ್ದೇನು?

ಸ್ಯಾಂಡಲ್ ವುಡ್ ನ ಇಬ್ಬರು ಕಲಾವಿದರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಇಬ್ಬರು ಹುಟ್ಟುಹಬ್ಬದ ಸಂತಸದಲ್ಲಿದ್ದಾರೆ. ನಟ ಅಭಿಷೇಕ್ ಈಗಾಗೆಲೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದ್ರೆ ರಚಿತಾ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಮನೆಯಲ್ಲಿಯೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಅಭಿಷೇಕ್ "ಅಪ್ಪ ಇಲ್ಲದ ಕಾರಣ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಆದ್ರೆ ಅಪ್ಪನ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟು ಅಪ್ಪನಿಗೆ ಗೌರವ ಸಲ್ಲಿಸಿ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಅಭಿಷೇಕ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದ್ರೆ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿವೆ.

ಸ್ನೇಹಿತನಿಗೆ ಶುಭಕೋರಿದ ನಿಖಿಲ್

ಸ್ನೇಹಿತನಿಗೆ ಶುಭಕೋರಿದ ನಿಖಿಲ್

ಅಭಿಗೆ ವಿಶ್ ಮಾಡಿದವರಲ್ಲಿ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಒಬ್ಬರು. ನಿಖಿಲ್ ಮತ್ತು ಅಭಿ ಇಬ್ಬರು ಉತ್ತಮ ಸ್ನೇಹಿತರು. ಆದ್ರೆ ಚುನಾವಣೆಯ ನಂತರ ಇಬ್ಬರ ಸ್ನೇಹ ಬಗ್ಗೆ ಸಾಕಷ್ಟು ಅನುಮಾನ ಮೂಡಿತ್ತು. ಆದ್ರೂ ಸಹ ಚುನಾವಣೆ ನಂತರ ನಿಖಿಲ್, ಅಭಿಷೇಕ್ ಸಿನಿಮಾಗೆ ಶುಭಾಶಯ ತಿಳಿಸುವ ಮೂಲಕ ಇಬ್ಬರು ಸ್ನೇಹ ಗಟ್ಟಿಯಾಗಿದೆ ಎನ್ನುವುದನ್ನು ನಿರೂಪಿಸಿದ್ದರು.

ಇಬ್ಬರ ಸ್ನೇಹಕ್ಕೆ ಯಾರ ಕಣ್ಣು ಬೀಳದಿರಲಿ

ಇಬ್ಬರ ಸ್ನೇಹಕ್ಕೆ ಯಾರ ಕಣ್ಣು ಬೀಳದಿರಲಿ

ಸದ್ಯ ಸ್ನೇಹಿತನ ಹುಟ್ಟುಹಬ್ಬಕ್ಕೆ ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಸಹೋದರ. ಒಳ್ಳೆಯದಾಗಲಿ" ಎಂದು ಹೇಳಿದ್ದಾರೆ. ಇಬ್ಬರ ಸ್ನೇಹ ನೋಡಿ ಅಭಿಮಾನಿಗಳು "ಇಬ್ಬರು ಸೇರಿ ಒಂದು ಸಿನಿಮಾ ಮಾಡಿ", "ನಿಮ್ಮಿಬ್ಬರ ಸ್ನೇಹಕ್ಕೆ ಯಾರ ಕಣ್ಣು ಬೀಳದಿರಲಿ" ಎಂದು ಹೇಳುತ್ತಿದ್ದಾರೆ.

ಗೆಳತಿಯ ಹುಟ್ಟುಹಬ್ಬಕ್ಕೆ ನಿಖಿಲ್ ವಿಶ್

ಗೆಳತಿಯ ಹುಟ್ಟುಹಬ್ಬಕ್ಕೆ ನಿಖಿಲ್ ವಿಶ್

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ರಚಿತಾ ರಾಮ್ ಗೂ ಶುಭಾಶಯ ತಿಳಿಸಿದ್ದಾರೆ. ರಚಿತಾ ಮತ್ತು ನಿಖಿಲ್ ಇಬ್ಬರು ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಇಬ್ಬರು ಉತ್ತಮ ಸ್ನೇಹಿತರು. ಗೆಳತಿಯ ಹುಟ್ಟುಹಬಕ್ಕೆ ನಿಖಿಲ್ "ಹುಟ್ಟುಹಬ್ಬದ ಶುಭಾಶಯಗಳು ಗೆಳತಿ. ಒಳ್ಳೆಯದಾಗಲಿ" ಎಂದು ಹೇಳಿದ್ದಾರೆ.

ರಚಿತಾ ಬಳಿ ಇರುವ ಸಿನಿಮಾಗಳು

ರಚಿತಾ ಬಳಿ ಇರುವ ಸಿನಿಮಾಗಳು

ರಚಿತಾ ರಾಮ್ ಇಂದು ಮನೆಯಲ್ಲಿಯೆ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಪ್ರಯುಕ್ತ ಡಿಂಪಲ್ ಕ್ವೀನ್ ಚಿತ್ರೀಕರಣಕ್ಕೆ ರಜೆ ಹಾಕಿದ್ದಾರೆ. ಇಂದು ದಿನ ಪೂರ್ತಿ ಮನೆಯಲ್ಲೆ ಇರುತ್ತಾರೆ. ರಚಿತಾ ಸದ್ಯ ರಮೇಶ್ ಅರವಿಂದ್ ನಿರ್ದೇಶನದ 100, ಏಪ್ರಿಲ್, ಧನಂಜಯ್ ಜೊತೆ ಡಾಲಿ, ಸಂಜು ಅಲಿಯಾಸ್ ಸಂಜು ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶಿವರಾಜ್ ಕುಮಾರ್ ಜೊತೆ ಅಭಿನಯಿಸುವ ಆಯುಷ್ಮಾನ್ ಭವ ಚಿತ್ರ ರಿಲೀಸ್ ಗೆ ರೆಡಿಯಾಗಿದೆ.

More from Filmibeat

English summary
Nikhil Kumar birthday Wishes to Kannada actress Rachita Ram and Abhishek Ambareesh. Kannada actress Rachita Ram and Abhishek Ambareesh are celebrating birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X