twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯ ಅಭ್ಯರ್ಥಿ ನಿಖಿಲ್ ಮತ್ತು ಸುಮಲತಾ ಮತ ಹಾಕಿದ್ದು ಎಲ್ಲಿ?

    |

    Recommended Video

    ಸುಮಲತಾ ಅಂಬರೀಶ್ ಹಾಗು ನಿಖಿಲ್ ಕುಮಾರಸ್ವಾಮಿ ಮತ ಚಲಾಯಿಸಿದ್ದು ಎಲ್ಲಿ?

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಟ ನಿಖಿಲ್ ಕುಮಾರ್ ಮತ್ತು ಸುಮಲತಾ ತಮ್ಮ ಮತ ಚಲಾಯಿಸಿದ್ದಾರೆ. ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್, ತಮ್ಮ ಮತವನ್ನ ಮಂಡ್ಯದಲ್ಲಿ ಹಾಕಿಲ್ಲ. ಯಾಕಂದ್ರೆ, ಅವರ ಮತ ಇರೋದು ರಾಮನಗರದಲ್ಲಿ.

    ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ರಾಮನಗರದ ಕೇತಗಾನಹಳ್ಳಿಯಲ್ಲಿ ನಿಖಿಲ್ ಕುಮಾರ್ ಇಂದು ಬೆಳಿಗ್ಗೆ ಮತ ಚಲಾವಣೆ ಮಾಡಿದ್ದಾರೆ. ಈ ವೇಳೆ ನಿಖಿಲ್ ತಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ತಾಯಿ ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ತಮ್ಮ ಮತ ಚಲಾಯಿಸಿದರು.

    ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸ್ಟಾರ್ಸ್ ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸ್ಟಾರ್ಸ್

    ಮತ್ತೊಂದೆಡೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ, ಅವರು ಮಂಡ್ಯದಲ್ಲಿ ತಮ್ಮ ಮತದಾನದ ಹಕ್ಕು ಹೊಂದಿದ್ದಾರೆ. ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಟಿ ಪೂಜೆ ಸಲ್ಲಿಸಿದ ಸುಮಲತಾ, ನಂತರ ಮಂಡ್ಯದ ದೊಡ್ಡಅರಸಿನಕೆರೆಯಲ್ಲಿ ಮತ ಹಾಕಿದರು.

    Nikhil Kumar cast their vote in Ramanagara

    ಮತಚಲಾಯಿಸಿದ ನಟ ಕಿಚ್ಚ ಸುದೀಪ್ ಮತ್ತು ಜಗ್ಗೇಶ್ ಮತಚಲಾಯಿಸಿದ ನಟ ಕಿಚ್ಚ ಸುದೀಪ್ ಮತ್ತು ಜಗ್ಗೇಶ್

    ಮಂಡ್ಯದಿಂದ ಪಕ್ಷೇತರವಾಗಿ ಸ್ಪರ್ಧಿಸಿರುವ ಸುಮಲತಾ ಅವರಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಮತದಾನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

    English summary
    CM HD Kumaraswamy son, JD(S) candidate from Mandya, Nikhil kumar, cast their votes at a polling station in Ramanagara. and sumalatha cast their vote in mandya.
    Thursday, April 18, 2019, 12:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X