'ಕುರುಕ್ಷೇತ್ರ' ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ನಿಖಿಲ್ ಹೇಳಿದ್ದೇನು?

Recommended Video

Kurukshetra Movie: ದರ್ಶನ್ ಮತ್ತು ನಿಖಿಲ್ ನಡುವೆ ನಿಜಕ್ಕೂ ಮನಸ್ತಾಪ ಇದೆಯಾ?

ಕುರುಕ್ಷೇತ್ರ, ಸ್ಯಾಂಡಲ್ ವುಡ್ ನಲ್ಲಿ ತೆರೆಗೆ ಬರುತ್ತಿರುವ ಪೌರಾಣಿಕ, ಬಿಗ್ ಬಜೆಟ್ ನ, ದೊಡ್ಡ ತಾರಾಬಳಗ ಹೊಂದಿರುವ ಸಿನಿಮಾ ಎಂದು ಸದ್ದು ಮಾಡುತ್ತಿರುವ ಜೊತೆಗೆ, ಚಿತ್ರತಂಡದಲ್ಲಿ ಎದ್ದಿರುವ ಒಂದಿಷ್ಟು ಗೊಂದಲದ ಬಗ್ಗೆಯು ಅಷ್ಟೆ ಚರ್ಚೆಯಾಗುತ್ತಿದೆ. ಅದರಲ್ಲು ಕುರುಕ್ಷೇತ್ರದ ಅಭಿಮನ್ಯು ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಿದ್ದವು.

ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡಲು ಅಭಿಮನ್ಯು ಪಾತ್ರಧಾರಿ ನಿಖಿಲ್ ಎಲ್ಲಿಯೂ ಕಾಣಿಸಿಕೊಂಡಿರಲ್ಲಿಲ್ಲ. ನಿಖಿಲ್ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿಯೂ ಇರಲಿಲ್ಲ. ಮಂಡ್ಯ ಲೋಕಸಭಾ ಚುನಾವಣೆಯ ನಂತರ ನಿಖಿಲ್ ಮಾಧ್ಯಮದ ಮುಂದೆ ಹಾಜರಾಗಿರಲಿಲ್ಲ. ಆದ್ರೆ ಇತ್ತ ಕುರುಕ್ಷೇತ್ರ ಚಿತ್ರದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಆದ್ರೆ ನಿಖಿಲ್ ಮಾತ್ರ ಪ್ರಮೋಷನ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.

ಇತ್ತೀಚಿಗಷ್ಟೆ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವಾಗಿತ್ತು. ಹಾಡುಗಳ ಬಿಡುಗೆಯ ವೇದಿಕೆಯಲ್ಲೂ ನಿಖಿಲ್ ಗೈರು ಎದ್ದುಕಾಣುತ್ತಿತ್ತು. ಚಿತ್ರತಂಡದ ಮೇಲೆ ನಿಖಿಲ್ ಮುನಿಸಿಕೊಂಡಿದ್ದಾರಾ? ಮಂಡ್ಯ ಲೋಕಸಭಾ ಚುನಾವಣೆಯ ದ್ವೇಷವನ್ನು ಇನ್ನು ಮರೆತಿಲ್ಲವಾ? ಎನ್ನುವ ಮಾತುಗಳು ಹರಿದಾಡುತ್ತಿತ್ತು. ಆದ್ರೀಗ ಈ ಬಗ್ಗೆ ಸ್ವತಃ ನಿಖಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಆಡಿಯೋ ರಿಲೀಸ್ ಗೈರಾದ ಬಗ್ಗೆ ನಿಖಿಲ್ ಸ್ಪಷ್ಟನೆ

ಆಡಿಯೋ ರಿಲೀಸ್ ಗೈರಾದ ಬಗ್ಗೆ ನಿಖಿಲ್ ಸ್ಪಷ್ಟನೆ

"ಕುರುಕ್ಷೇತ್ರ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಬರಬೇಕಿತ್ತು. ಮುನಿರತ್ನ ಅವರೆ ಬಂದು ಏನೆ ನಡೀತಿದ್ರು, ರಾಜಕೀಯ ಬೆಳವಣಿಗೆಯ ಮಧ್ಯೆಯು ಅಪ್ ಡೇಟ್ ಮಾಡುತ್ತಿದ್ರು. ಅವತ್ತು 12 ಗಂಟೆ ವರೆಗೂ ಕಲಾಪ ನಡೀತು. ಇವತ್ತು ಪಕ್ಷದ ಒಬ್ಬ ಯುವ ಘಟಕದ ಅಧ್ಯಕ್ಷನಾಗಿ ನಾನು ನನ್ನ ಕಾರ್ಯಕರ್ತ ಬಂಧುಗಳಿಗೆ ಉತ್ತರಕೊಡಬೇಕಾಗುತ್ತೆ. ಇವತ್ತು ನಿನಗೆ ಈ ಚಿತ್ರನೇ ಮುಖ್ಯನಾ, ನಮ್ಮ ಭಾವನೆಗಳ ಜೊತೆ ಆಟವಾಡುತ್ತಿದ್ದೀರಾ ಎಂದು ಹೇಳುತ್ತಾರೆ"

ದ್ವೇಷ ಮಾಡಿಕೊಂಡು ಬೆಳಿತೀವಿ ಎನ್ನುವುದು ಸುಳ್ಳು

ದ್ವೇಷ ಮಾಡಿಕೊಂಡು ಬೆಳಿತೀವಿ ಎನ್ನುವುದು ಸುಳ್ಳು

"ಕಾರ್ಯಕರ್ತರ ಪ್ರಶ್ನೆಗೆ ನಾನೆ ಹೊಣೆಯಾಗುತ್ತೀನಿ. ಬರೀ ನಾನೊಬ್ಬ ಕಲಾವಿದನಾಗಿದ್ದರೆ ಬೇರೆ. ನನ್ನ ಪರಿಸ್ಥಿತಿ ಹಾಗಿತ್ತು. ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು. ಇದುಬಿಟ್ಟು ಬೇರೆ ಏನು ಇಲ್ಲ ದಯವಿಟ್ಟು" ಎಂದು ಹೇಳಿದ್ದಾರೆ. "ಜೀವನದಲ್ಲಿ ದ್ವೇಷಮಾಡಿಕೊಂಡು ಬೆಳಿತೀವಿ ಎನ್ನುವುದು ಸುಳ್ಳು. ಆ ರೀತಿಯ ಮನೋಬಾವ ಇಟ್ಟುಕೊಳ್ಳಬಾರದು. ನಮ್ಮ ಮನೆಯಲ್ಲಿ ಅಪ್ಪ ಆಗಲಿ ಅಮ್ಮ ಆಗಲಿ ಆ ರೀತಿಯ ಸಂಸ್ಕೃತಿಯಲ್ಲಿ ಬೆಳೆದಿಲ್ಲ" ಎಂದು ಹೇಳುವ ಮೂಲಕ ದರ್ಶನ್ ಜೊತೆ ದ್ವೇಷ ಸಾಧಿಸುತ್ತಿದ್ದೀರಾ ಎನ್ನುವ ಮಾತುಗಳಿಗೆ ನಿಖಿಲ್ ಸ್ಪಷ್ಟೀಕರಣ ನೀಡಿದ್ದಾರೆ.

ಕುರುಕ್ಷೇತ್ರ ಡಬ್ಬಿಂಗ್ ನಲ್ಲಿ ನಿಖಿಲ್

ಕುರುಕ್ಷೇತ್ರ ಡಬ್ಬಿಂಗ್ ನಲ್ಲಿ ನಿಖಿಲ್

ಕುರುಕ್ಷೇತ್ರ ಸಿನಿಮಾ ರಿಲೀಸ್ ಡೇಟ್ ಇನ್ನೇನು ಹತ್ತಿರವಾಗುತ್ತಿದೆ. ಆದ್ರೆ ನಿಖಿಲ್ ಕುಮಾರ್ ಮಾತ್ರ ಈಗ ಡಬ್ಬಿಂಗ್ ಮಾಡಿದ್ದಾರೆ. ಕೊನೆಕ್ಷಣದಲ್ಲಿ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಚಿತ್ರದ ಟ್ರೈಲರ್ ನಲ್ಲಿ ನಿಖಿಲ್ ಪಾತ್ರಕ್ಕೆ ಬೇರೆಯವರ ಬಳಿ ಡಬ್ ಮಾಡಿಸಿಲಾಗಿತ್ತು. ಆದ್ರೆ ಅದು ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ. ಆದ್ರೀಗ ಕೊನೆಯ ಕ್ಷಣಕ್ಕೆ ಬಂದು ನಿಖಿಲ್ ಅವರೆ ತಮ್ಮ ಪಾತ್ರಕ್ಕೆ ಡಬ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಚುನಾವಣೆಯ ನಂತರ ಮೊದಲ ದರ್ಶನ

ಚುನಾವಣೆಯ ನಂತರ ಮೊದಲ ದರ್ಶನ

ಚುನಾವಣೆಯ ನಂತರ ನಿಖಿಲ್ ಮೊದಲ ಬಾರಿಗೆ ದರ್ಶನ ನೀಡಿದ್ದಾರೆ. ಮಂಡ್ಯ ಚುನಾವಣೆಯ ನಂತರ ನಿಖಿಲ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನಿಖಿಲ್ ಬಗ್ಗೆ ಸಾಕಷ್ಟು ಗಾಳಿಸುದ್ದಿ ಓಡಾಡುತ್ತಿದ್ದರು ಯಾವುದಕ್ಕು ಉತ್ತರಿಸದೆ ಸೈಲೆಂಟ್ ಆಗಿದ್ದರು. ಆದ್ರೀಗ ಡಬ್ಬಿಂಗ್ ಮಾಡುವ ಹಿನ್ನಲೆಯಲ್ಲಿ ಮಾಧ್ಯಮದ ಮುಂದೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಪ್ರಶ್ನೆಗೆ ಉತ್ತರಿಸುವ ಮೂಲಕ ಕುರುಕ್ಷೇತ್ರದ ಬಗ್ಗೆ ನಿಖಿಲ್ ದ್ವೇಷ ಸಾಧಿಸುತ್ತಿದ್ದಾರೆ ಎಂದು ಕೇಳಿ ಬರುತ್ತಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ.

More from Filmibeat

English summary
Kannada actor Nikhil Kumar clarified about the absence of Kurukshetra audio release event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X