ಸಿಎಂ ಕುಮಾರಸ್ವಾಮಿಯಂತೆ ರೆಬೆಲ್ ಸ್ಪಷ್ಟನೆ ನೀಡಿದ ಮಗ ನಿಖಿಲ್

Recommended Video

ಸಿಎಂ ಕುಮಾರಸ್ವಾಮಿಯಂತೆ ರೆಬೆಲ್ ಸ್ಪಷ್ಟನೆ ನೀಡಿದ ಮಗ ನಿಖಿಲ್..! | FILMIBEAT KANNADA

ರೈತ ಮಹಿಳೆಯ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ಇಡೀ ರಾಜ್ಯದ ರೈತರು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಸಿಎಂ ಅವರ ಹೇಳಿಕೆಗೆ ರೈತರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದರು.

ನಂತರ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದ ಕುಮಾರಸ್ವಾಮಿ ''ನಾನು ಆ ರೈತ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನಾನು ಮಾತನಾಡಿದ ವಿಡಿಯೋ ಮತ್ತೆ ನೋಡಿ, ನಾನು ಆಕೆಗೆ 'ತಾಯಿ' ಎಂದು ಕರೆದಿದ್ದೇನೆ'' ಎಂದು ಹೇಳಿದರು.

ರೈತ ಮಹಿಳೆಗೆ ಬೈಗುಳ, ವಿವಾದಕ್ಕೆ ಸ್ಪಷ್ಟನೆ ಕೊಟ್ಟರು ಕುಮಾರಸ್ವಾಮಿ

ಈ ಘಟನೆಯ ಬಗ್ಗೆ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮಾತನಾಡಿದ್ದು, ಅಪ್ಪನಂತೆ ಮಗ ಕೂಡ ರೆಬೆಲ್ ಆಗಿ ಉತ್ತರಿಸಿದ್ದಾರೆ. ಈ ಘಟನೆ ಹಿಂದೆ ಏನು ನಡೆದಿದೆ, ರೈತರ ಸಾಲ ಮನ್ನಾ ಕುರಿತು ಸರ್ಕಾರದ ನಿಲುವೇನು ಎಂಬುದನ್ನ ನಿಖಿಲ್ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ನಿಖಿಲ್ ಏನಂದ್ರು.? ಮುಂದೆ ಓದಿ.....

ಬೇರೆ ಅರ್ಥ ನೀಡಲಾಗುತ್ತಿದೆ

ಬೇರೆ ಅರ್ಥ ನೀಡಲಾಗುತ್ತಿದೆ

'ನಮ್ಮ ತಂದೆಯವರು, ನಮ್ಮ ಕುಟುಂಬದವರು ಮತ್ತು ನಾನು ಕೂಡ ಹೆಣ್ಣುಮಕ್ಕಳಿಗೆ ವಿಶೇಷವಾದ ಗೌರವ ನೀಡುತ್ತಾ ಬಂದಿದ್ದೀವಿ. ಇದನ್ನ ಬೇರೆ ಬೇರೆ ರೀತಿ ವಿಶ್ಲೇಷಣೆ ಮಾಡುವುದು ಸರಿಯಿಲ್ಲ. ಎಲ್ಲಿ ಮಲಗಿದ್ರಿ, ಎಲ್ಲಿದ್ರಿ ಎನ್ನುವುದು ಬಿಟ್ರೆ, ಎಲ್ಲಿ ಮಲಗಿದ್ರಿ ಎಂಬುದನ್ನ ಬೇರೆ ಬೇರೆ ರೂಪ ನೀಡುವುದು ಬೇಡ'

ದುರಹಂಕಾರಕ್ಕೆ ಮಿತಿ ಇರಬೇಕು: ಎಚ್‌ಡಿಕೆ ವಿರುದ್ಧ ಯಡಿಯೂರಪ್ಪ ಗರಂ

ಮನಸ್ಸಿಗೆ ನೋವಾಗಿದೆ

ಮನಸ್ಸಿಗೆ ನೋವಾಗಿದೆ

'ರಾಜ್ಯ ಮುಖ್ಯಮಂತ್ರಿ ಅಂದ್ಮೇಲೆ ಅವರಿಗೂ ನೂರೆಂಟು ಒತ್ತಡಗಳು ಇರುತ್ತೆ. ಈ ಘಟನೆಗೆ ಸಂಬಂಧಪಟ್ಟಂತೆ ತಂದೆಯವರ ಜೊತೆ ಮೂರ್ನಾಲ್ಕು ಗಂಟೆ ಜೊತೆಯಲ್ಲಿದ್ದೆ. ಮನಸ್ಸಿಗೆ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ರೈತರ ಪರ ಕೆಲಸ ಮಾಡೋ ಮುಖ್ಯಮಂತ್ರಿ ಅಂತ ಇದ್ರೆ ಅದು ನಮ್ಮ ತಂದೆಯವರು ಮಾತ್ರ'

ರೈತರ ಬಗ್ಗೆ ಕುಮಾರಸ್ವಾಮಿ ಹೇಳಿಕೆ : ಯಾರು, ಏನು ಹೇಳಿದರು?

ನಮ್ಮ ತಂದೆ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ

ನಮ್ಮ ತಂದೆ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ

'ನಾವು ಸರ್ಕಾರ ನಡೆಸುತ್ತಿದ್ದೇವೆ. ನಮಗೂ ಇಂಟಲಿಜೆನ್ಸ್ ಇದೆ. ಇಂದೂ ವಿಧಾನಸೌಧ ಮೆಟ್ಟಿಲು ಹತ್ತೋಕೆ ಗೇಟ್ ಹೊಡಿತೀರಾ ಅಂದ್ರೆ, ಸರ್ಕಾರ ಕೈಕಟ್ಟಿಹಾಕ್ಕೊಂಡು ಸುಮ್ಮನೆ ಇರಬೇಕಾ. ಅವರೆಲ್ಲ ನಿಜವಾಗಲೂ ರೈತರುಗಳಾ, ರೈತರು ಮುಗ್ದರು. ಈ ರೀತಿ ಗೂಂಡಾವರ್ತನೆ ಮಾಡೋದಿಲ್ಲ. ಕುಮಾರಣ್ಣನ ಇಮೇಜ್ ಗೆ ಧಕ್ಕೆ ತರಬೇಕೆಂದು ವಿರೋಧ ಪಕ್ಷಗಳು ದಿನನಿತ್ಯ ಪ್ರಯತ್ನ ಮಾಡ್ತಿದ್ದಾರೆ'

ರೈತರ ಪ್ರತಿಭಟನೆ, ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರು!

ಮುಖ್ಯಮಂತ್ರಿ ಮಗನಾಗಿ ಹೇಳುವುದೇನು.?

ಮುಖ್ಯಮಂತ್ರಿ ಮಗನಾಗಿ ಹೇಳುವುದೇನು.?

'ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗನಾಗಿ ನಾನು ಹೇಳುವುದೇನಂದರೇ, ಮುಖ್ಯಮಂಗತ್ರಿ ಆಗೋಕೆ ರಾಜ್ಯದ ಜನ ಸಂಪೂರ್ಣ ಬೆಂಬಲ ಕೊಟ್ಟಿಲ್ಲ. ಆ ದೇವರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದಾರೆ. ಲೋಕಸಭೆ ಚುನಾವಣೆಯೊಳಗೆ ರೈತರ ಸಾಲಮನ್ನಾ ಅಂತ ಪತ್ರ ಕೊಡ್ತೀವಿ' ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

ಸರ್ಕಾರಕ್ಕೆ 15 ದಿನಗಳ ಗಡುವು ನೀಡಿ ಪ್ರತಿಭಟನೆ ಹಿಂಪಡೆದ ರೈತರು

More from Filmibeat

English summary
Chief minister hd kumaraswamy son nikhil kumar has clarified about his father controversial statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X