ಕುರುಕ್ಷೇತ್ರ ಆಡಿಯೋ ವೇದಿಕೆಗೆ ಎಲ್ಲರೂ ಬಂದ್ರು, ಅವರೊಬ್ಬರು ಬರಲಿಲ್ಲ.!
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಕನ್ನಡ ಚಿತ್ರರಂಗದ ಪಾಲಿಗೆ ಅತ್ಯಂತ ವಿಶೇಷ. 70ರ ದಶಕದಿಂದ 2019ರ ಕಾಲಘಟ್ಟದವರೆಗೂ ಚಿತ್ರರಂಗದಲ್ಲಿದ್ದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಶಿ ಕುಮಾರ್, ಭಾರತಿ ವಿಷ್ಣುವರ್ಧನ್, ದರ್ಶನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್, ರವಿಚಂದ್ರನ್ ಹೀಗೆ ಬಹುದೊಡ್ಡ ತಾರಬಳಗವೇ ಇದೆ.
ಇವರೆಲ್ಲನ್ನ ಒಂದೇ ಸಿನಿಮಾದಲ್ಲಿ ನೋಡುವುದು ಅಪರೂಪದ ಕ್ಷಣವಾಗಬಹುದು. ಅದೇ ರೀತಿ ಒಂದೇ ವೇದಿಕೆಯಲ್ಲಿ ಇಷ್ಟು ದೊಡ್ಡ ಕಲಾವಿದರ ತಂಡ ನೋಡುವುದು ಸರ್ಪ್ರೈಸ್. ಆದ್ರೆ, ದರ್ಶನ್ ಮತ್ತು ನಿಖಿಲ್ ಕುಮಾರ್ ಅವರನ್ನ ಒಂದೇ ವೇದಿಕೆಯಲ್ಲಿ ನೋಡಬೇಕು ಎಂಬ ಆಸೆಯೊಂದಿತ್ತು. ಇದು ಬಹುಶಃ ಕುರುಕ್ಷೇತ್ರ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಆಗಬಹುದು ಎನ್ನಲಾಗಿತ್ತು. ಆದರೆ, ಅಲ್ಲಿಯೂ ನಿರಾಸೆಯಾಯಿತು.

ಹೌದು, ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಎಲ್ಲ ಕಲಾವಿದರು ಬಂದರು. ಆದರೆ, ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರ್ ಮಾತ್ರ ಬರಲಿಲ್ಲ. ಜುಲೈ 7 ರಂದು ಬೆಂಗಳೂರಿನ ಕೋರಮಂಗಲದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಜುಲೈ 6 ರಂದು ಸ್ವತಃ ನಿಖಿಲ್ ಕುಮಾರ್ ಫೇಸ್ ಬುಕ್ ನಲ್ಲಿ ನಾನು ಬರುವುದಾಗಿ ತಿಳಿಸಿದ್ದರು. ಆದ್ರೆ, ಕಾರ್ಯಕ್ರಮದ ದಿನ ಭಾಗವಹಿಸಲಿಲ್ಲ.
ಅಂದ್ಹಾಗೆ, ಕುರುಕ್ಷೇತ್ರ ಆರಂಭವಾದ ಸ್ವಲ್ಪ ದಿನದ ಬಳಿಕ ಇದು ದರ್ಶನ್ ಅವರ 50ನೇ ಸಿನಿಮಾ. ಆದರೆ, ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್ ಕುಮಾರ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂಬ ಆರೋಪ ನಿರ್ಮಾಪಕ ಮುನಿರತ್ನ ಅವರ ಮೇಲೆ ಬಂತು.

ಈ ಸುದ್ದಿ ದೊಡ್ಡದಾಗಿ ಚರ್ಚೆಯಾಗುತ್ತಿದ್ದಂತೆ ದರ್ಶನ್ ಮತ್ತು ನಿಖಿಲ್ ಕುಮಾರ್ ನಡುವೆ ಸಂಬಂಧ ಚೆನ್ನಾಗಿಲ್ಲ ಎಂಬ ವಿಷ್ಯ ಹೊರಬಿತ್ತು. ಅಷ್ಟರಲ್ಲೆ ಮಂಡ್ಯದಲ್ಲಿ ನಿಖಿಲ್ ಕುಮಾರ್ ಮತ್ತು ಸುಮಲತಾ ಸ್ಪರ್ಧೆ ಮಾಡಿದ್ರು. ಸುಮಲತಾ ಪತ ದರ್ಶನ್ ಪ್ರಚಾರ ಮಾಡಿದ್ರು. ಅಲ್ಲಿಯೂ ನಿಖಿಲ್ ಮತ್ತು ದರ್ಶನ್ ಎದುರಾಳಿಗಳಂತೆ ಬಿಂಬಿತವಾದರು.

ಹೀಗೆ, ಕುರುಕ್ಷೇತ್ರ ಆರಂಭವಾದಾಗನಿಂದಲೂ ದರ್ಶನ್ ಮತ್ತು ನಿಖಿಲ್ ನಡುವೆ ಭಿನ್ನಾಭಿಪ್ರಾಯ ಇದೆ ಎಂದೇ ಗುರುತಿಸಿಕೊಂಡು ಬಂತು. ಬಹುಶಃ ಅದೇ ಕಾರಣದಿಂದ ಕುರುಕ್ಷೇತ್ರ ಆಡಿಯೋ ಬಿಡುಗಡೆ ಸಮಾರಂಭಕ್ಕೂ ನಿಖಿಲ್ ಬರಲಿಲ್ಲ ಎಂಬ ಅಭಿಪ್ರಾಯ ಇದೆ. ಇನ್ನುಳಿದಂತೆ ಜುಲೈ 28ರಂದು ಜೀ ಕನ್ನಡದಲ್ಲಿ ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮ ಪ್ರಸಾರವಾಗಲಿದೆ.


Click it and Unblock the Notifications











