ನಿಖಿಲ್ ರಾಜಕೀಯಕ್ಕೆ ಬರ್ತಾರಾ.? ಎಲ್ಲದಕ್ಕೂ ಉತ್ತರ ಕೊಟ್ಟ ಯುವರಾಜ

Recommended Video

ರಾಜಕೀಯಕ್ಕೆ ಬರುವುದರ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ | Filmibeat Kannada

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರು ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತು ಹಲವು ದಿನಗಳಿಂದ ಚರ್ಚೆಯಾಗ್ತಿದೆ. ಈ ಬಗ್ಗೆ ಈಗ ಸ್ವತಃ ನಿಖಿಲ್ ಅವರೇ ಸ್ಪಷ್ಟಪಡಿಸಿದ್ದಾರೆ.

''ರಾಜಕೀಯಕ್ಕೆ ಬರುವ ಬಗ್ಗೆ ಈಗಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದ್ರೆ, ಪಕ್ಷದವರು, ಹಿರಿಯರು ಹೇಳಿದ್ರೆ ಅವರ ಮಾತಿಗೆ ಗೌರವ ಕೊಡುತ್ತೇನೆ'' ಎಂದು ಹೇಳುವ ಮೂಲಕ ಮುಂದಿನ ದಿನದಲ್ಲಿ ರಾಜಕೀಯಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ.

ಗಣೇಶ ಹಬ್ಬದ ಪ್ರಯುಕ್ತ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ ನಿಖಿಲ್ ಈ ಬಗ್ಗೆ ಮುಕ್ತವಾಗಿ ಮಾತನಾಡಿದರು. ''ನನ್ನ ಮೇಲೆ ಭಾರಿ ಒತ್ತಡ ಇದೆ. ನಮ್ಮ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ನೀವು ನಿಲ್ಲಲೇಬೇಕು ಅಂತಿದ್ದಾರೆ. ಅವರ ಮಾತನ್ನ ಗೌರವಿಸುತ್ತೇನೆ. ಲೋಕಸಭೆ ಚುನಾವಣೆಗೆ ಇನ್ನು ಸಮಯ ಇದೆ. ಕಾದುನೋಡೋಣ'' ಎಂದರು.

Nikhil Kumar gives clarification about political

ಇನ್ನು ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡ ಅವರು ಏನಂತಾರೆ ಎನ್ನುವುದಕ್ಕೆ ಉತ್ತರಿಸಿದ ನಿಖಿಲ್ ''ನಮ್ಮ ತಂದೆ, ನಮ್ಮ ತಾತ ಅಥವಾ ನಮ್ಮ ಪಕ್ಷದವರು ಯಾರೇ ಹೇಳಿದ್ರು ಅವರ ಮಾತಿಗೆ ಗೌರವ ಕೊಡ್ತೀನಿ. ಆಗ ಯೋಚನೆ ಮಾಡ್ತೀನಿ'' ಎಂದು ಖಚಿತಪಡಿಸಿದ್ದಾರೆ.

ಇನ್ನು ಸಿನಿಮಾನಾ ಅಥವಾ ರಾಜಕೀಯನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಖಿಲ್ ''ನನ್ನ ವ್ಯಕ್ತಿತ್ವವನ್ನ ರೂಪಿಸಿಕೊಳ್ಳುವುದಕ್ಕೆ ನಾನು ಸಿನಿಮಾ ಮಾಡ್ತಿದ್ದೀನಿ. ನನಗೆ ಅದೊಂದು ಫ್ಯಾಶನ್. ಸಮಯ, ಸಂದರ್ಭ ನಾನು ಸ್ಪರ್ಧೆ ಮಾಡಬೇಕು ಎಂದು ಸನ್ನಿವೇಶ ಬಂದಾಗ ಯೋಚನೆ ಮಾಡ್ತೀನಿ'' ಎಂದು ಎಲ್ಲ ಅಂತೆ ಕಂತೆಗಳಿಗೂ ತೆರೆ ಎಳೆದಿದ್ದಾರೆ.

More from Filmibeat

English summary
Kannada actor nikhil kumaraswamy gives clarification about lok sabha Election 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X