'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು'

By Pavithra

Recommended Video

ಕುರುಕ್ಷೇತ್ರ ಸಿನಿಮಾದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದು ನಿಜಾನಾ..? | Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅಭಿಮಾನಿಗಳು ಕಾತುರದಿಂದ ಕುರುಕ್ಷೇತ್ರ ಚಿತ್ರವನ್ನು ಬೆಳ್ಳಿತೆರೆ ಮೇಲೆ ನೋಡಲು ಕಾದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕುರುಕ್ಷೇತ್ರ ಚಿತ್ರದ ಬಗ್ಗೆ ಇಲ್ಲ ಸಲ್ಲದ ಗಾಸಿಪ್ ಗಳು ಸುದ್ದಿ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೃಶ್ಯಗಳನ್ನು ಕಡಿಮೆ ಮಾಡಿ ನಿಖಿಲ್ ಕುಮಾರ್ ಅವರ ದೃಶ್ಯವನ್ನು ಹೆಚ್ಚು ಮಾಡಲಾಗಿದೆ. ಸಿ ಎಂ ಮಗ ಎನ್ನುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ಗಾಸಿಪ್ ಹರಡಿತ್ತು. ಈ ಎಲ್ಲಾ ವಿಚಾರಕ್ಕೂ ನಿಖಿಲ್ ನೇರವಾಗಿ ಉತ್ತರ ಕೊಟ್ಟಿದ್ದಾರೆ.

ನಿನ್ನೆ ನಡೆದ ಸೀತಾ ರಾಮ ಕಲ್ಯಾಣ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಹಾಗಾದರೆ ನಿಖಿಲ್ ಕುರುಕ್ಷೇತ್ರ ಚಿತ್ರದ ಬಗ್ಗೆ ಹೇಳಿದ ಮಾತುಗಳೇನು? ಸದ್ಯ 'ಕುರುಕ್ಷೇತ್ರ' ಸಿನಿಮಾ ಯಾವ ಹಂತದಲ್ಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಗಾಸಿಪ್ ಗೂ ನನಗೂ ಸಂಬಂಧವಿಲ್ಲ

ಗಾಸಿಪ್ ಗೂ ನನಗೂ ಸಂಬಂಧವಿಲ್ಲ

'ಕುರುಕ್ಷೇತ್ರ'ದ ಸಿನಿಮಾ ಬಗ್ಗೆ ಹಬ್ಬಿರುವ ಸುದ್ದಿ ಈಗ ಗೊತ್ತಾಯಿತು. ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆಯನ್ನೂ ನೀಡಲಾಗಿದೆ. ಅದನ್ನು ಬಿಟ್ಟರೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎನ್ನುವ ಮಾತನ್ನು ನಿಖಿಲ್ ಕುಮಾರ್ ತಿಳಿಸಿದ್ದಾರೆ.

ಡಬ್ಬಿಂಗ್ ನಲ್ಲಿ ನಿಖಿಲ್ ಭಾಗಿ ಆಗಿಲ್ಲ

ಡಬ್ಬಿಂಗ್ ನಲ್ಲಿ ನಿಖಿಲ್ ಭಾಗಿ ಆಗಿಲ್ಲ

'ಕುರುಕ್ಷೇತ್ರ' ಸಿನಿಮಾದಲ್ಲಿ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ನಿಖಿಲ್ ಕುಮಾರ್ ಇನ್ನು ಕೂಡ ಡಬ್ಬಿಂಗ್ ಮಾಡಿಲ್ಲ.

ಡಬ್ಬಿಂಗ್ ನಾನೇ ಮಾಡುತ್ತೇನೆ

ಡಬ್ಬಿಂಗ್ ನಾನೇ ಮಾಡುತ್ತೇನೆ

ನಿಖಿಲ್ 'ಸೀತಾ ರಾಮ ಕಲ್ಯಾಣ' ಸಿನಿಮಾದಲ್ಲಿ ಬ್ಯುಸಿ ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ಡಬ್ಬಿಂಗ್ ಮಾಡಲು ಹೋಗುವುದಾಗಿ ತಿಳಿಸಿದ್ದಾರೆ. ಇತ್ತೀಚಿಗಷ್ಟೆ ವಿ ನಾಗೇಂದ್ರ ಪ್ರಸಾದ್ ನಿಖಿಲ್ ಅವರನ್ನು ಭೇಟಿ ಮಾಡಿ ಡಬ್ಬಿಂಗ್ ಮಾಡಲು ಬನ್ನಿ ಎಂದು ತಿಳಿಸಿದ್ದಾರಂತೆ.

ಕುರುಕ್ಷೇತ್ರಕ್ಕೆ ಎರಡು ಭಾರಿ ಸಿ ಜಿ

ಕುರುಕ್ಷೇತ್ರಕ್ಕೆ ಎರಡು ಭಾರಿ ಸಿ ಜಿ

ಸದ್ಯ 'ಕುರುಕ್ಷೇತ್ರ' ಸಿನಿಮಾದ ಸಿ ಜಿ ಕೆಲಸಗಳು ಶುರುವಾಗಿದ್ದು ಈ ಹಿಂದೆಯೇ ಸಿಜಿ ಕೆಲಸವನ್ನು ಮುಗಿಸಲಾಗಿತ್ತು. ಆದರೆ ಚಿತ್ರತಂಡಕ್ಕೆ ಅದು ಇಷ್ಟವಾಗಿಲ್ಲ ಎನ್ನುವ ಕಾರಣದಿಂದ ಮತ್ತೆ ಸಿಜಿ ಮಾಡಿಸಲಾಗುತ್ತಿದೆಯಂತೆ. ನಿಖಿಲ್ ಪ್ರಕಾರ ಸಿನಿಮಾ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.

More from Filmibeat

English summary
Nikhil Kumar has given a clarification on the issue of Kannada film Kurukshetra. Nikhil Kumar said that all the characters have its own importance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X