ನೆರೆ ಸಂತ್ರಸ್ತರಿಗೆ 'ಕುರುಕ್ಷೇತ್ರ'ದ ಸಂಭಾವನೆ ನೀಡಿದ ನಿಖಿಲ್ ಕುಮಾರ್

Recommended Video

ಅಪ್ಪನ ಹಾದಿಯಲ್ಲಿ ಸಾಗುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ..? | FILMIBEAT KANNADA

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಮಾತ್ರ ಮಾಡಿದ್ದ ನಿಖಿಲ್ ಕುಮಾರ್ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಬಿಡುಗಡೆಗೆ ಮುಂಚೆ ಭಾರಿ ಸುದ್ದಿಯಲ್ಲಿದ್ದ ನಿಖಿಲ್, ಅಭಿಮನ್ಯು ಪಾತ್ರವನ್ನ ಹೇಗೆ ನಿಭಾಯಿಸಿರುತ್ತಾರೋ ಎಂಬ ಕುತೂಹಲವಿತ್ತು.

ಆದರೆ, ಪ್ರೇಕ್ಷಕರಿಗೆ ನಿರಾಸೆಯಾಗಿಲ್ಲ. ನಿಖಿಲ್ ಪಾತ್ರ ಅದ್ಭುತವಾಗಿ ಬಂದಿದೆ. ಇದೀಗ, ಈ ಚಿತ್ರದಿಂದ ಬಂದ ಸಂಭಾವನೆಯನ್ನ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ಥರಿಗೆ ನೀಡಲು ನಿಖಿಲ್ ಮುಂದಾಗಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ದೇವೇಗೌಡ

ಈ ವಿಷ್ಯವನ್ನ ಖುದ್ದು ನಿಖಿಲ್ ಕುಮಾರ್ ಅವರೇ ಘೋಷಿಸಿದ್ದಾರೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

Nikhil kumar Help To Karnataka Floods

ಕುರುಕ್ಷೇತ್ರ ಚಿತ್ರದಲ್ಲಿ ನಟಿಸಲು ನಿಖಿಲ್ ಕುಮಾರ್ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಅದೆಷ್ಟೇ ಹಣ ಪಡೆದಿದ್ದರು ಮಾನವೀಯತೆ ದೃಷ್ಠಿಯಿಂದ ಆ ಮೊತ್ತವನ್ನ ನೆರೆ ಸಂತ್ರಸ್ಥರಿಗೆ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್ ಕುಮಾರ್, ತಮ್ ಪಕ್ಷದ ಪರವಾಗಿ ಉತ್ತರ ಕರ್ನಾಟಕ, ಕರಾವಳಿ ಭಾಗದ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನ ಕೂಡ ಪೂರೈಸಿದ್ದಾರೆ.

More from Filmibeat

English summary
Kannada actor Nikhil kumar decided to give kurukshetra movie remuneration for flood people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X