»   » ಅಮೇರಿಕಾದಲ್ಲಿ ರಿಲೀಸ್ ಆಗಲಿದೆ ನಿಖಿಲ್ ಕುಮಾರ್ 'ಜಾಗ್ವಾರ್'

ಅಮೇರಿಕಾದಲ್ಲಿ ರಿಲೀಸ್ ಆಗಲಿದೆ ನಿಖಿಲ್ ಕುಮಾರ್ 'ಜಾಗ್ವಾರ್'

Posted By: Bharath Kumar
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರ ರಾಜ್ಯಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಸದ್ಯ, ಮೂರನೇ ವಾರ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ 'ಜಾಗ್ವಾರ್' ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ.

ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿರುವ 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್ ಜೊತೆ ದೀಪ್ತಿ ಸತಿ, ಜಗಪತಿ ಬಾಬು, ರಮ್ಯಾಕೃಷ್ಣ, ಸಂಪತ್ ಕುಮಾರ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.['ಜಾಗ್ವಾರ್' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ ಗಳಿವು..]


Nikhil Kumar 'Jaguar' is all set to release in America

ದಸರಾ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಬಂದಿದ್ದ 'ಜಾಗ್ವಾರ್' ಸದ್ಯ, ಎರಡು ರಾಜ್ಯಗಳಲ್ಲೂ ಅಬ್ಬರಿಸುತ್ತಲೇ ಇದೆ. ಈಗ ಜಾಗ್ವಾರ್ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದ್ದು, ಅಮೇರಿಕನ್ನಡಿಗರಿಗೆ ಇದು ದೀಪಾವಳಿ ಹಬ್ಬದ ಬಂಪರ್ ಉಡುಗೊರೆ.


Nikhil Kumar 'Jaguar' is all set to release in America

ಹೌದು, ದೀಪಾವಳಿ ಹಬ್ಬದ ವಿಶೇಷವಾಗಿ ಈ ವಾರಾಂತ್ಯಕ್ಕೆ 'ಜಾಗ್ವಾರ್' ಸಿನಿಮಾ ಅಮೇರಿಕಾ ಹಾಗೂ ಯೂರೋಪ್ ನಲ್ಲಿ...ಸುಮಾರು 45 ಸೆಂಟರ್ ಗಳಲ್ಲಿ ತೆರೆಕಾಣಲಿದೆ.


Nikhil Kumar 'Jaguar' is all set to release in America

ಅಮೇರಿಕಾದಲ್ಲಿ 'ಜಾಗ್ವಾರ್' ಸಿನಿಮಾ ರಿಲೀಸ್ ಆಗುತ್ತಿರುವ ಹಿನ್ನೆಲೆ, ನಟ ನಿಖಿಲ್ ಕುಮಾರ್ ಯು.ಎಸ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ ಪ್ರೇಕ್ಷಕರು ಹಾಗೂ ಮೇಯರ್ ಒಬ್ಬರು ನಿಖಿಲ್ ಕುಮಾರ್ ಅವರಿಗೆ ಆಹ್ವಾನ ನೀಡಿದ್ದು, ಅಭಿಮಾನಿಗಳ ಜೊತೆ ನಿಖಿಲ್ ಸಂವಾದ ನಡೆಸಲಿದ್ದಾರಂತೆ.[ಎಕ್ಸ್ ಕ್ಲೂಸಿವ್: 'ಜಾಗ್ವಾರ್' ನಾಯಕ ನಿಖಿಲ್ ಕುಮಾರ್ ಸಂದರ್ಶನ ]


Nikhil Kumar 'Jaguar' is all set to release in America

ಸ್ವತಃ ಈ ವಿಷಯವನ್ನ ಚಿತ್ರದ ನಿರ್ಮಾಪಕ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 'ಜಾಗ್ವಾರ್' ಚಿತ್ರವನ್ನ ಮಹದೇವ್ ನಿರ್ದೇಶನ ಮಾಡಿದ್ದು, ಅಕ್ಟೋಬರ್ 6 ರಂದು ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿತ್ತು.

English summary
Nikhil Kumar's debut film 'Jaguar' produced by former Chief Minister H D Kumaraswamy is all set to release in America. H D Kumaraswamy himself confirmed this news.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada