twitter
    For Quick Alerts
    ALLOW NOTIFICATIONS  
    For Daily Alerts

    ನಿಖಿಲ್ ಮದುವೆಗೂ ಮುನ್ನ ರಾಮನಗರ, ಚನ್ನಪಟ್ಟಣ ಜನರಿಗೆ ಭರ್ಜರಿ ಉಡುಗೊರೆ

    |

    ಏಪ್ರಿಲ್‌ನಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಟ ನಿಖಿಲ್ ಕುಮಾರ್ ಮದುವೆಗೆ ಭರದ ಸಿದ್ಧತೆ ನಡೆದಿದೆ. ದೇವೇಗೌಡರ ಕುಟುಂಬದ ಮದುವೆಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

    Recommended Video

    ಮಗನ ಮದುವೆಗೆ ರಾಮನಗರ ಜನರಿಗೆ ಕುಮಾರಣ್ಣ ಕೊಡಲಿದ್ದಾರೆ ದುಬಾರಿ ಉಡುಗೊರೆ | Kumarswamy | Nikhil weds Revathi

    ಈ ಸಂಭ್ರಮವನ್ನು ಕುಮಾರಸ್ವಾಮಿ ತಮ್ಮ ಕುಟುಂಬಕ್ಕೆ ಸೀಮಿತವಾಗಿರಿಸಿಲ್ಲ. ಅದನ್ನು ತಮ್ಮ ಪಕ್ಷದ ಬೆಂಬಲ ಹಾಗೂ ಅಭಿಮಾನಿಗಳಿರುವ ಎಲ್ಲ ಊರುಗಳಿಗೂ ಹರಡಿದ್ದಾರೆ. ಮುಖ್ಯವಾಗಿ ರಾಮನಗರ ಹಾಗೂ ಚನ್ನಪಟ್ಟಣದ ಕ್ಷೇತ್ರಗಳ ಜನರನ್ನು ಮದುವೆಗೆ ಆಹ್ವಾನಿಸಲು ಸಿದ್ಧತೆ ನಡೆಸಿದ್ದಾರೆ.

    ಮಗನ ಮದುವೆ ಕರೆಯೋಲೆಯಲ್ಲಿದೆ ಜನತೆಗೆ ಕುಮಾರಸ್ವಾಮಿ ಬರೆದಿರುವ ಸುದೀರ್ಘ ಪತ್ರ.!ಮಗನ ಮದುವೆ ಕರೆಯೋಲೆಯಲ್ಲಿದೆ ಜನತೆಗೆ ಕುಮಾರಸ್ವಾಮಿ ಬರೆದಿರುವ ಸುದೀರ್ಘ ಪತ್ರ.!

    ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕದ ಸಮೀಪ ನಿರ್ಮಿಸಲಾಗುತ್ತಿರುವ ಅದ್ಧೂರಿ ಸಪ್ತಪದಿ ಮಂಟಪದಲ್ಲಿ ನಿಖಿಲ್ ಕುಮಾರ್ ಮತ್ತು ರೇವತಿ ಅವರ ಮದುವೆ ನಡೆಯಲಿದೆ. ರಾಮನಗರ ಮತ್ತು ಚನ್ನಪಟ್ಟಣದ ಜನರೊಂದಿಗೆ ರಾಜಕೀಯವಾಗಿ ಮಾತ್ರವಲ್ಲದೆ, ಭಾವನಾತ್ಮಕ ನಂಟನ್ನೂ ಹೊಂದಿರುವ ಕುಮಾರಸ್ವಾಮಿ, ತಮ್ಮ ಮಗನ ಮದುವೆ ನೆಪದಲ್ಲಿ ಅವರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾಗಿದ್ದಾರೆ.

    ಮನೆಮನೆಗೂ ಉಡುಗೊರೆ

    ಮನೆಮನೆಗೂ ಉಡುಗೊರೆ

    ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಪ್ರತಿ ಮನೆಗೆ ವಿವಾಹ ಆಮಂತ್ರಣ ಪತ್ರಿಕೆಯ ಜೊತೆಗೆ ಸೀರೆ, ಪಂಚೆ, ಷರ್ಟ್ ಮತ್ತು ಷಲ್ಯವನ್ನು ಉಡುಗೊರೆಯಾಗಿ ನೀಡಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅದಕ್ಕಾಗಿ ಈಗಾಗಲೇ ಮುಖಂಡರೊಂದಿಗೆ ಚರ್ಚಿಸಿ ಪ್ರತಿ ಹಳ್ಳಿಯಲ್ಲಿ ಎಷ್ಟೆಷ್ಟು ಮನೆಗಳಿವೆ ಎಂಬ ಮಾಹಿತಿಯನ್ನು ಮುಖಂಡರಿಂದ ಪಡೆದುಕೊಂಡಿದ್ದಾರೆ.

    ಎಲ್ಲ ಜಾತಿ ಧರ್ಮದವರಿಗೂ ಉಡುಗೊರೆ

    ಎಲ್ಲ ಜಾತಿ ಧರ್ಮದವರಿಗೂ ಉಡುಗೊರೆ

    ರಾಮನಗರದಲ್ಲಿ 68 ಸಾವಿರ ಮನೆಗಳಿವೆ, ಚನ್ನಪಟ್ಡಣದಲ್ಲಿ 70 ಸಾವಿರ ಮನೆಗಳಿವೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಕ್ಷೇತ್ರಗಳಲ್ಲಿನ ಮುಸ್ಲಿಮರು ಸೇರಿದಂತೆ ಎಲ್ಲಾ ಜಾತಿ, ಧರ್ಮದವರಿಗೂ ಭೇದ ಭಾವವಿಲ್ಲದೆ ಸೀರೆ, ಪ್ಯಾಂಟ್, ಷರ್ಟ್ ನೀಡಲು ಈಗಾಗಲೇ ಕುಮಾರಸ್ವಾಮಿ ಸೂಚಿಸಿದ್ದಾರೆ ಎನ್ನಲಾಗಿದೆ.

    ರೇವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮೇಲೆ 'ಪ್ರೇಮ ಕವಿ'ಯಾದ ನಿಖಿಲ್.!ರೇವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮೇಲೆ 'ಪ್ರೇಮ ಕವಿ'ಯಾದ ನಿಖಿಲ್.!

    ಎಂಟು ಲಕ್ಷ ಲಗ್ನಪತ್ರಿಕೆ

    ಎಂಟು ಲಕ್ಷ ಲಗ್ನಪತ್ರಿಕೆ

    ಮಹಿಳೆಯರಿಗೆ ಸೀರೆಯ ಜೊತೆಗೆ ಅರಿಶಿನ, ಕುಂಕುಮದ ಭರಣಿಗಳನ್ನ ನೀಡಲು ಉದ್ದೇಶಿಸಲಾಗಿದೆ. ಮಗನ ಮದುವೆಗಾಗಿ ಎಂಟು ಲಕ್ಷ ಲಗ್ನಪತ್ರಿಕೆಗಳನ್ನು ಮುದ್ರಿಸಲಾಗಿದೆ. ಜನರಿಗೆ ನೀಡುವ ಉಡುಗೊರೆಯ ವೆಚ್ಚವೇ ಒಂದು ಮನೆಗೆ 3 ಸಾವಿರ ರೂಪಾಯಿಯಷ್ಟು ತಗುಲುತ್ತದೆ ಎಂದು ಅಂದಾಜಿಸಲಾಗಿದೆ.

    1 ಸಾವಿರ ಅಡುಗೆ ಸಹಾಯಕರು

    1 ಸಾವಿರ ಅಡುಗೆ ಸಹಾಯಕರು

    ನಿಖಿಲ್ ಕುಮಾರ್ ಮದುವೆಗೆ ಬಳೇಪೇಟೆಯ ಬಾಣಸಿಗ ವೆಂಕಟೇಶ್ ಅಡುಗೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ. ಊಟಕ್ಕೆ ಬಫೆ ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗಿದೆ. ಮದುವೆಯ ದಿನ 4 ಬಗೆಯ ಸಿಹಿ ಸೇರಿದಂತೆ ವೈವಿಧ್ಯಮಯ ಭಕ್ಷ್ಯ ಭೋಜನ ತಯಾರಿಸಿ ಪೂರೈಸುವ ಗುತ್ತಿಗೆಯನ್ನು ಬಳೇಪೇಟೆ ವೆಂಕಟೇಶ್ ಅವರಿಗೆ ನೀಡಲಾಗಿದೆ. ಮದುವೆಯ ದಿನ ಲಕ್ಷಾಂತರ ಮಂದಿ ಸೇರಲಿದ್ದು, ಊಟ ಬಡಿಸಲೆಂದೇ ಒಂದು ಸಾವಿರ ಮಂದಿಯ ಅಡುಗೆ ಸಹಾಯಕರನ್ನ ನೇಮಿಸಲಾಗುತ್ತಿದೆ.

    ರಾಮನಗರದಿಂದ ಸ್ಪರ್ಧೆ?

    ರಾಮನಗರದಿಂದ ಸ್ಪರ್ಧೆ?

    ರಾಮನಗರದ ಜಾನಪದಲೋಕದ ಬಳಿ ಮದುವೆಗೆ ಸ್ಥಳವನ್ನು ಸಿದ್ಧಗೊಳಿಸಲಾಗುತ್ತಿದೆ. ಮದುವೆ ನಡೆಯುವ ಸ್ಥಳಕ್ಕೆ "ಸಪ್ತಪದಿ ಮಂಟಪ" ಎಂದು ಹೆಸರಿಡಲಾಗಿದೆ. ಮುಂದಿನ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಅವರನ್ನು ರಾಮನಗರದ ಅಭ್ಯರ್ಥಿಯನ್ನಾಗಿ ನಿಲ್ಲಿಸಲು ಕುಮಾರಸ್ವಾಮಿ ಬಯಸಿದ್ದಾರೆ. ಅದಕ್ಕೆ ಪೂರ್ವ ಸಿದ್ಧತೆಯಾಗಿ ಇಲ್ಲಿ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    'ನಿನ್ನ ತ್ಯಾಗ ಅಪಾರ': ತಾಯಿಯ ಬಗ್ಗೆ ನಿಖಿಲ್ ಕುಮಾರ್ ಮಾತು'ನಿನ್ನ ತ್ಯಾಗ ಅಪಾರ': ತಾಯಿಯ ಬಗ್ಗೆ ನಿಖಿಲ್ ಕುಮಾರ್ ಮಾತು

    English summary
    HD Kumaraswamy decided to give gifts to Ramnagar and Channapatna people with his son Nikhil Kumar's wedding invitation cards
    Monday, March 2, 2020, 18:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X