'2.0' ಚಿತ್ರದ ನಿರ್ಮಾಪಕನ ಜೊತೆ ನಿಖಿಲ್ ಮುಂದಿನ ಸಿನಿಮಾ
ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾ ಜನವರಿ 25 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.
'ಜಾಗ್ವಾರ್' ನಂತರ ನಿಖಿಲ್ ಅಭಿನಯದ ಎರಡನೇ ಸಿನಿಮಾ ಇದಾಗಿದ್ದು, ಇದಾದ ಬಳಿಕ ಈಗ ಮುಂದಿನ ಪ್ರಾಜೆಕ್ಟ್ ಗೆ ಓಕೆ ಎಂದಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ '2.0' ಚಿತ್ರದ ನಿರ್ಮಾಪಕರ ಜೊತೆ ನಿಖಿಲ್ ಮುಂದಿನ ಸಿನಿಮಾ ಮಾಡ್ತಿದ್ದಾರೆ. ಲೈಕ ಪ್ರೊಡಕ್ಷನ್ ಅಡಿಯಲ್ಲಿ ನಿಖಿಲ್ ಚಿತ್ರ ಮಾಡುತ್ತಿದ್ದು, ಈಗಾಗಲೇ ಮಾತುಕತೆ ಆಗಿದೆ.

ಬಹುಭಾಷೆಯಲ್ಲಿ ತಯಾರಾಗಲಿರುವ ಈ ಸಿನಿಮಾಗೆ ನಿರ್ದೇಶಕರು ಅಂತಿಮವಾಗಿಲ್ಲ. ಅದಾದ ಬಳಿಕ ಅಧಿಕೃತವಾಗಿ ಈ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡಲು ನಿರ್ಧರಿಸಿದ್ದಾರಂತೆ.
ಇದರ ಜೊತೆಯಲ್ಲಿ ಜಯಣ್ಣ ಕಂಬೈನ್ಸ್ ಜೊತೆಯಲ್ಲೂ ಒಂದು ಸಿನಿಮಾ ಮಾಡಲು ನಿಖಿಲ್ ಒಪ್ಪಿಕೊಂಡಿದ್ದಾರಂತೆ. ಸದ್ಯ, 'ಸೀತಾರಾಮ ಕಲ್ಯಾಣ' ಚಿತ್ರದ ವಿತರಣೆಯಲ್ಲೂ ಜಯಣ್ಣ ತೊಡಗಿಕೊಂಡಿದ್ದು, ಸಿಎಂ ಪುತ್ರನ ಜೊತೆ ಸಿನಿಮಾ ಮಾಡಲಿದ್ದಾರಂತೆ.
ಇನ್ನು ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರದಲ್ಲೂ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರದಲ್ಲಿ ಮಿಂಚಿದ್ದಾರೆ. ಬಟ್, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











