»   » ಧೂಳೆಬ್ಬಿಸುತ್ತಿದೆ 'ಜಾಗ್ವರ್' ನಿಖಿಲ್ ಕುಮಾರ್ ಹೊಸ ಲುಕ್

ಧೂಳೆಬ್ಬಿಸುತ್ತಿದೆ 'ಜಾಗ್ವರ್' ನಿಖಿಲ್ ಕುಮಾರ್ ಹೊಸ ಲುಕ್

Posted By:
Subscribe to Filmibeat Kannada

ನಟ ನಿಖಿಲ್ ಕುಮಾರ್ 'ಜಾಗ್ವರ್' ಚಿತ್ರದ ನಂತರ 'ಕುರುಕ್ಷೇತ್ರ' ಸಿನಿಮಾವನ್ನು ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ನಿಖಿಲ್ ಅವರು 'ಅಭಿಮನ್ಯು' ಪಾತ್ರವನ್ನು ನಿರ್ವಹಿಸಲಿದ್ದಾರೆ. ಆದರೆ ಈ ಚಿತ್ರದೊಂದಿಗೆ ನಿಖಿಲ್ ಮತ್ತೊಂದು ಸಿನಿಮಾ ಕೂಡ ಸದ್ಯದಲ್ಲಿಯೇ ಶುರುವಾಗಲಿದೆ.

'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ ಲುಕ್ ಬಹಿರಂಗ

ನಿಖಿಲ್ ಅವರ ಹೊಸ ಸಿನಿಮಾಗೆ 'ಸಂತು ಸ್ಟ್ರೇಟ್ ಫಾರ್ವರ್ಡ್' ನಿರ್ದೇಶಕ ಮಹೇಶ್ ರಾವ್ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಈ ಚಿತ್ರದ ಫೋಟೋಶೂಟ್ ನೆಡೆದಿದ್ದು, ನಿಖಿಲ್ ಕುಮಾರ್ ಅವರ ಒಂದು ಲುಕ್ ಹೊರಬಂದಿದೆ. ನಿಖಿಲ್ ಅವರ ಈ ಫೋಟೋ ನೋಡಿ ಎಲ್ಲರೂ ಸಖತ್ ಇಷ್ಟ ಪಟ್ಟಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ನಿಖಿಲ್ ಫೋಟೋ ದೊಡ್ಡ ರೆಸ್ಪಾನ್ಸ್ ಪಡೆದುಕೊಂಡಿದೆ.

Nikhil Kumar new movie look released

ನಿಖಿಲ್ ಅವರ ಈ ಸಿನಿಮಾ ಕುಮಾರಸ್ವಾಮಿ ಅವರ ಚೆನ್ನಾಂಬಿಕಾ ಬ್ಯಾನರ್ ನಲ್ಲಿ ನಿರ್ಮಾಣವಾಗಿದೆ. ಸದ್ಯ ಲೊಕೇಷನ್ ಹುಡುಕಾಟದಲ್ಲಿ ನಿರ್ದೇಶಕರು ಬ್ಯುಸಿ ಇದ್ದು, ಅಕ್ಟೋಬರ್ 18ಕ್ಕೆ ಸಿನಿಮಾದ ಚಿತ್ರೀಕರಣ ಶುರು ಆಗಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಚಿತ್ರತಂಡದ್ದಾಗಿದೆ.

English summary
Kananda actor Nikhil Kumar new movie look released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada