For Quick Alerts
  ALLOW NOTIFICATIONS  
  For Daily Alerts

  'ಸೀತಾರಾಮ ಕಲ್ಯಾಣ'ಕ್ಕೆ ಸಜ್ಜಾದ 'ಜಾಗ್ವಾರ್' ಬಾಯ್ ನಿಖಿಲ್ ಕುಮಾರ್

  By Naveen
  |
  ಸೀತಾರಾಮ ಕಲ್ಯಾಣ'ಕ್ಕೆ ಸಜ್ಜಾದ 'ಜಾಗ್ವಾರ್' ಬಾಯ್ ನಿಖಿಲ್ ಕುಮಾರ್ | Filmibeat Kannada

  ನಟ ನಿಖಿಲ್ ಕುಮಾರ್ ಸದ್ಯ 'ಕುರುಕ್ಷೇತ್ರ' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ. ಕನ್ನಡದ ಬಿಗ್ ಬಜೆಟ್ ಸಿನಿಮಾ 'ಕುರುಕ್ಷೇತ್ರ'ದಲ್ಲಿ ಅಭಿಮನ್ಯು ಪಾತ್ರ ಮಾಡುತ್ತಿರುವ ನಿಖಿಲ್ ಇದರೊಂದಿಗೆ ನಿರ್ದೇಶಕ ಹರ್ಷ ಜೊತೆ ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ.

  ಹೊಸ ಸಿನಿಮಾಗೆ ನಿಖಿಲ್ ಕುಮಾರ್ ಭರ್ಜರಿ ತಯಾರಿ

  ನಿಖಿಲ್ ಮತ್ತು ಹರ್ಷ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಹೊಸ ಸಿನಿಮಾದ ಟೈಟಲ್ ಈಗ ಫಿಕ್ಸ್ ಆಗಿದೆ. ಚಿತ್ರಕ್ಕೆ 'ಸೀತಾರಾಮ ಕಲ್ಯಾಣ' ಎಂಬ ವಿಶೇಷ ಹೆಸರನ್ನು ಇಡಲಾಗಿದೆ. ಅಂದಹಾಗೆ, ಈ ಚಿತ್ರದ ಮುಹೂರ್ತ ನಾಳೆ ಬಸವನಗುಡಿಯಲ್ಲಿರುವ ಕಾರಂಜಿ ಆಂಜನೇಯ ದೇವಸ್ಥಾನದಲ್ಲಿ ನಡೆಯಲಿದೆ.

  ಒಂದು ಕಡೆ ಪುನೀತ್ ಜೊತೆ 'ಅಂಜನೀಪುತ್ರ' ಸಿನಿಮಾ ಮಾಡುತ್ತಿರುವ ಹರ್ಷ ನಿಖಿಲ್ ಜೊತೆ 'ಸೀತಾರಾಮ ಕಲ್ಯಾಣ' ಚಿತ್ರ ಪ್ರಾರಂಭಿಸಿದ್ದಾರೆ. ಕುಮಾರಸ್ವಾಮಿ ಅವರ ಹೋಮ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಡಿಸೆಂಬರ್ 10 ರಿಂದ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಲಿದ್ದು, ಹರ್ಷ ಜೊತೆಗೆ ಹರೀಶ್ ಎನ್ನುವವರು ಚಿತ್ರದ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ.

  ವಿಶೇಷ ಅಂದರೆ ಈ ಚಿತ್ರದಲ್ಲಿ ನಟ ಶರತ್ ಕುಮಾರ್ ನಿಖಿಲ್ ತಂದೆಯ ಪಾತ್ರವನ್ನು ಮಾಡುತ್ತಿದ್ದಾರೆ. 'ರಾಜಕುಮಾರ' ನಂತರ ಮತ್ತೆ ಶರತ್ ಕುಮಾರ್ ಕನ್ನಡದ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 'ಸೀತಾರಾಮ ಕಲ್ಯಾಣ' ಸಿನಿಮಾ ಒಂದು ಸೆಂಟಿಮೆಂಟ್ ಮತ್ತು ಆಕ್ಷನ್ ಚಿತ್ರವಾಗಿದೆ. ಇದೊಂದು ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು ಯಾವುದೇ ಪೌರಾಣಿಕ ಚಿತ್ರ ಅಲ್ಲ.

  English summary
  Kannada Actor Nikhil Kumar's new movie titled as 'Seetha Rama Kalyana'. The movie is directed by A.Harsha. ನಿಖಿಲ್ ಕುಮಾರ್ ಮತ್ತು ಹರ್ಷ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರಕ್ಕೆ 'ಸೀತಾರಾಮ ಕಲ್ಯಾಣ' ಹೆಸರನ್ನು ಇಡಲಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X