For Quick Alerts
  ALLOW NOTIFICATIONS  
  For Daily Alerts

  ಹಳ್ಳಿ ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದ ನಿಖಿಲ್ ಕುಮಾರ್

  By Naveen
  |
  ಶೂಟಿಂಗ್ ಮುಗಿಸಿ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ ನಿಖಿಲ್..! | Filmibeat Kannada

  ಸಿನಿಮಾ ಶೂಟಿಂಗ್ ನಲ್ಲಿ ತೊಡಗಿರುವ ನಟರಿಗೆ ಬಿಡುವು ಸಿಗುವುದೇ ಕಷ್ಟ. ಹಾಗೆನಾದರೂ ಚಿತ್ರೀಕರಣದ ಮಧ್ಯೆ ಬಿಡುವು ಸಿಕ್ಕರೆ ಅನೇಕ ನಟರು ಕ್ರಿಕೆಟ್ ಆಡುತ್ತಾರೆ. ಈಗ ನಿಖಿಲ್ ಕೂಡ ಶೂಟಿಂಗ್ ನಡುವೆ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದಾರೆ.

  ನಿಖಿಲ್ ಸದ್ಯ ತಮ್ಮ 'ಸೀತಾರಾಮ ಕಲ್ಯಾಣ' ಚಿತ್ರದ ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ. ಈ ಸಿನಿಮಾದ ಆಕ್ಷನ್ ಸನ್ನಿವೇಷದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ವೇಳೆ ಮೈಸೂರಿನ ನಾರ್ತ್ ಬ್ಯಾಂಕ್ ಪಕ್ಕದ ಹಳ್ಳಿಯ ಮಕ್ಕಳ ಜೊತೆಗೆ ಸೇರಿ ನಿಖಿಲ್ ಕ್ರಿಕೆಟ್ ಆಡಿದ್ದಾರೆ. ಮಕ್ಕಳ ಜೊತೆಗೆ ಸೇರಿ ಕೆಲ ಕಾಲ ಅವರು ಮಕ್ಕಳಾಗಿದ್ದಾರೆ.

  ಗದ್ದೆಗಿಳಿದು ಕುಸ್ತಿ ಮಾಡಿದ ಗೌಡ್ರು ಮೊಮ್ಮಗ ನಿಖಿಲ್ ಗದ್ದೆಗಿಳಿದು ಕುಸ್ತಿ ಮಾಡಿದ ಗೌಡ್ರು ಮೊಮ್ಮಗ ನಿಖಿಲ್

  ಅಂದಹಾಗೆ, ನಿಖಿಲ್ ಕ್ರಿಕೆಟ್ ಆಡಿರುವ ವಿಡಿಯೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು 'ಸೀತಾರಾಮ ಕಲ್ಯಾಣ' ಚಿತ್ರದ ಶೂಟಿಂಗ್ ಅನೇಕ ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿದೆ. ನಾಯಕನ ಎಂಟ್ರಿ ಸೀನ್ ಅದ್ದೂರಿಯಾಗಿ ಹಾಗೂ ನೆಟೆವಿಟಿಗೆ ತಕ್ಕಂತೆ ಇರಲಿ ಎನ್ನುವ ಕಾರಣದಿಂದ ಗದ್ದೆಯ ಮಧ್ಯೆ ಸಾಹಸ ದೃಶ್ಯವನ್ನು ಚಿತ್ರೀಕರಿಸಿದೆ.

  ಅಂದಹಾಗೆ, 'ಸೀತಾರಾಮ ಕಲ್ಯಾಣ' ಚಿತ್ರವನ್ನು ನಿಖಿಲ್ ತಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ. ಹರ್ಷ ನಿರ್ದೇಶನ ಸಿನಿಮಾಗೆ ಇದ್ದು, ನಿಖಿಲ್ ಗೆ ಜೊತೆಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

  English summary
  Kannada Nikhil Kumar played cricket in Seetharama Kalyana movie set. Seetharama Kalyana shooting is taking place in mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X