ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಪ್ರಚಾರ ಸುಮಾರು 28 ಹಳ್ಳಿಗಳಲ್ಲಿ ಸಂಜೆ 6 ಗಂಟೆವರೆಗೂ ನಡೆಯಲಿದೆ.
'ದಾಸ' ಹೋದ ಕಡೆಯಲೆಲ್ಲಾ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಅಂಬರೀಶ್ ಮೇಲಿನ ಅಭಿಮಾನವನ್ನ ಸುಮಲತಾ ಮೇಲೆ ತೋರಿಸಿ, ನಿಮ್ಮ ಜೊತೆ ಅವರು ಇರ್ತಾರೆ. ಫಲಿತಾಂಶದ ಮೂಲಕ ನಿಮ್ಮ ಉತ್ತರ ನೀಡಬೇಕು' ಎಂದು ಮತಯಾಚನೆ ಮಾಡುತ್ತಿದ್ದಾರೆ.
ಮತ್ತೊಂದೆಡೆ ಮಂಡ್ಯದಲ್ಲೇ ಬೀಡುಬಿಟ್ಟಿರುವ ಮೈತ್ರಿ ಅಭ್ಯರ್ಥಿ ನಟ ನಿಖಿಲ್ ಕುಮಾರ್ ದರ್ಶನ್ ಅವರ ಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಡಿ ಬಾಸ್ ಅಬ್ಬರ ಪ್ರಚಾರ ಶುರು ಮಾಡಿದ್ದಾರೆ, ನೀವೇನು ಹೇಳ್ತೀರಾ ಎಂದು ಕೇಳಿದ್ದಕ್ಕೆ ತಮ್ಮದೇ ಸ್ಟೈಲ್ ನಲ್ಲಿ ಸಿಎಂ ಪುತ್ರ ಉತ್ತರಿಸಿದ್ದಾರೆ. ಅಷ್ಟಕ್ಕೂ, ನಿಖಿಲ್ ಏನಂದ್ರು? ಮುಂದೆ ಓದಿ....

ದರ್ಶನ್ ಅವರಿಗೆ ಒಳ್ಳೆಯದಾಗಲಿ
ಸುಮಲತಾ ಪರ ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಮೈತ್ರಿ ಅಭ್ಯರ್ಥಿ ನಟ ನಿಖಿಲ್ ಕುಮಾರ್ ಮಾತನಾಡಿದ್ದು, 'ದರ್ಶನ್ ಪ್ರಚಾರಕ್ಕೆ ಬಂದಿದ್ದಾರೆ...ಅವರಿಗೆ ಒಳ್ಳೆಯದಾಗಲಿ' ಎಂದು ಕೂಲ್ ಆಗಿ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಸ್ಟಾರ್ ಕುಮಾರಣ್ಣ
ಸಿನಿಮಾ ಇಂಡಸ್ಟ್ರಿಯಲ್ಲಿ ನಿಖಿಲ್ ಪರ ಯಾರಾದರೂ ಕಲಾವಿದರು ಪ್ರಚಾರಕ್ಕೆ ಬರ್ತಾರಾ ಎಂದು ಕೇಳಿದ್ದಕ್ಕೆ, ''ನಮ್ಮ ಸ್ಟಾರ್ ಕುಮಾರಣ್ಣ. ನನಗೆ ಯಾರನ್ನ ದುರಪಯೋಗ ಪಡಿಸಿಕೊಳ್ಳಲು ಇಷ್ಟವಿಲ್ಲ. ಒಂದು ವೇಳೆ ಯಾರಾದರೂ ಬಂದರೇ ಸ್ವಾಗತಿಸುತ್ತೇನೆ'' ಎಂದು ತಿಳಿಸಿದರು.

ಇಂಡಸ್ಟ್ರಿಯಲ್ಲಿ ಚೆನ್ನಾಗಿರಬೇಕು
'ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲರ ಬಳಿಯೂ ಚೆನ್ನಾಗಿದ್ದೇನೆ, ಮುಂದೆಯೂ ಚೆನ್ನಾಗಿರಲು ಬಯಸುತ್ತೇನೆ' ಎಂದು ಹೇಳುವ ಮೂಲಕ ದರ್ಶನ್ ಪ್ರಚಾರದ ಬಗ್ಗೆ ಸಮಾಧಾನವಾಗಿ ಉತ್ತರಿಸಿದ್ದಾರೆ. ಒಂದು ಕಡೆ ದರ್ಶನ್ ಸುಮಲತಾ ಪರ ಪ್ರಚಾರ ಮಾಡ್ತಿದ್ರೆ, ಮತ್ತೊಂದೆಡೆ ನಿಖಿಲ್ ಪರ ಸಿಎಂ ಅಖಾಡಕ್ಕಿಳಿಯಲಿದ್ದಾರೆ.

ನಾಳೆ ರಾಕಿಂಗ್ ಸ್ಟಾರ್ ಎಂಟ್ರಿ
ದರ್ಶನ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಕೂಡ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡಲಿದ್ದು, ನಾಳೆ ಯಶ್ ಪ್ರಚಾರಕ್ಕೆ ಧುಮುಕಲಿದ್ದಾರೆ. ದರ್ಶನ್-ಯಶ್ ಇಬ್ಬರು ಸೇರಿ 16ನೇ ತಾರೀಖಿನ ವರೆಗೂ ಪ್ಲಾನ್ ಮಾಡಿ ಪ್ರಚಾರ ಮಾಡುತ್ತಿದ್ದು, ಹೇಗಾದರೂ ಅಂಬಿ ಪತ್ನಿಯನ್ನ ಗೆಲ್ಲಿಸಲೇ ಬೇಕು ಎಂದು ನಿರ್ಧರಿಸಿದ್ದಾರೆ.


Click it and Unblock the Notifications











