ಬೆಂಕಿಯಂತೆ ಬಂದ ಅಭಿಷೇಕ್: ಅಂಬಿ ಪುತ್ರನ ಲುಕ್ ಕಂಡ ನಿಖಿಲ್ ಹೇಳಿದ್ದೇನು?

Recommended Video

ಮತ್ತೆ ಗಟ್ಟಿಯಾಯ್ತು ಅಭಿ ನಿಖಿಲ್ ಸ್ನೇಹ..? | abhishek ambarish

ಮಂಡ್ಯ ಚುನಾವಣೆ ಮುಗಿದ ಮೇಲೆ ಅಭಿಷೇಕ್ ಅಂಬರೀಶ್ ಮತ್ತು ನಿಖಿಲ್ ಕುಮಾರ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದರೆ ಇಬ್ಬರ ಮಧ್ಯೆ ಫ್ರೆಂಡ್ ಷಿಪ್ ಚೆನ್ನಾಗಿದೆ ಎಂಬುದನ್ನ ಸೋಶಿಯಲ್ ಮೀಡಿಯಾ ಸಾಬೀತು ಮಾಡಿತ್ತು.

'ಅಮರ್' ಸಿನಿಮಾದ ಬಳಿಕ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡದ ಅಭಿಷೇಕ್ ಈಗ ಸರ್ಪ್ರೈಸ್ ಎಂಬಂತೆ ಸ್ಟೈಲಿಶ್ ಫೋಟೋವೊಂದನ್ನ ಶೇರ್ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಂತೆ ಮೀಸೆ ಹಾಗೂ ಗಡ್ಡ ಬಿಟ್ಟಿರುವ ಲುಕ್ ನಲ್ಲಿ ಅಭಿಷೇಕ್ ಕಾಣಿಸಿಕೊಂಡಿದ್ದು, ಈ ಲುಕ್ ಬಗ್ಗೆ ಈಗ ಭಾರಿ ಚರ್ಚೆಯಾಗ್ತಿದೆ. ಇನ್ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡ ಕೆಲವೇ ಗಂಟೆಯಲ್ಲಿ ನಿಖಿಲ್ ಕುಮಾರ್ ಈ ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ, ಅಭಿಷೇಕ್ ಈ ಫೋಟೋ ಏತಕ್ಕಾಗಿ? ನಿಖಲ್ ಏನಂದ್ರು? ಮುಂದೆ ಓದಿ....

ಅಭಿ ಲುಕ್ ಗೆ ನಿಖಿಲ್ ಫಿದಾ

ಅಭಿ ಲುಕ್ ಗೆ ನಿಖಿಲ್ ಫಿದಾ

ಅಭಿಷೇಕ್ ಅಂಬರೀಶ್ ಅವರ ಹೊಸ ಲುಕ್ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರ್ ''Looking Sharp....ನಿನ್ನ ಮುಂದಿನ ಚಿತ್ರಕ್ಕೆ ಶುಭಾಶಯ'' ಎಂದಿದ್ದಾರೆ. ಅಮರ್ ಸಿನಿಮಾದ ಬಳಿಕ ನಿಖಿಲ್ ಮತ್ತೊಮ್ಮೆ ಅಭಿಷೇಕ್ ಗೆ ವಿಶ್ ಮಾಡಿದ್ದಾರೆ.

ನಿಖಿಲ್ ಕಾಮೆಂಟ್ ಅಭಿ ಕೊಟ್ಟ ಉತ್ತರವೇನು?

ನಿಖಿಲ್ ಕಾಮೆಂಟ್ ಅಭಿ ಕೊಟ್ಟ ಉತ್ತರವೇನು?

ಅಭಿಷೇಕ್ ಹೊಸ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿಖಿಲ್ ಕುಮಾರ್ ಗೆ ಅಂಬಿ ಪುತ್ರ ಥ್ಯಾಂಕ್ಸ್ ಹೇಳಿದ್ದಾರೆ. ''ಥ್ಯಾಂಕ್ ಯೂ ಬಡಿ...ಅಭಿಮನ್ಯು ಪಾತ್ರದಲ್ಲಿ ನಿಜಕ್ಕೂ ಅದ್ಭುತವಾಗಿ ನಟಿಸಿದ್ದೀಯಾ. ನಿನಗೂ ಒಳ್ಳೆಯದಾಗಲಿ. ಆದಷ್ಟೂ ಬೇಗ ನಿನ್ನ ಬೆಳ್ಳಿತೆರೆ ಮೇಲೆ ನೋಡಲು ಇಚ್ಛಿಸುತ್ತೇನೆ'' ಎಂದಿದ್ದಾರೆ.

ಅಭಿ ಮುಂದಿನ ಸಿನಿಮಾ ಯಾವುದು?

ಅಭಿ ಮುಂದಿನ ಸಿನಿಮಾ ಯಾವುದು?

ಅಭಿಷೇಕ್ ಮುಂದಿನ ಚಿತ್ರದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಆದರೆ, ಸುಮಲತಾ ಅವರು ಈ ಹಿಂದೆ ಹೇಳಿದಂತೆ ಎರಡು ಕಥೆ ಬಂದಿದೆ. ಅದರಲ್ಲಿ ಒಂದನ್ನ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದಿದ್ದರು. ಬಹುಶಃ ಈಗ ಸ್ಕ್ರಿಪ್ಟ್ ಪಕ್ಕಾ ಆಗಿರಬೇಕು. ಹಾಗಾಗಿ, ಅಭಿಷೇಕ್ ಕೂಡ ಪಾತ್ರಕ್ಕೆ ಸಜ್ಜಾಗುತ್ತದ್ದಾರೆ.

ಗೆಟಪ್ ನಿಂದ ಹೆಚ್ಚಿದ ಕುತೂಹಲ

ಗೆಟಪ್ ನಿಂದ ಹೆಚ್ಚಿದ ಕುತೂಹಲ

ಅಮರ್ ಚಿತ್ರದಲ್ಲಿ ಕ್ಲಾಸ್ ಆಗಿ ನಟಿಸಿದ್ದ ಅಭಿಷೇಕ್, ಮುಂದಿನ ಚಿತ್ರದಲ್ಲಿ ಔಟ್ ಅಂಡ್ ಔಟ್ ಮಾಸ್ ಆಗಿ ಬರಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಅಮರ್ ಸಿನಿಮಾ ಅಷ್ಟಾಗಿ ಸಕ್ಸಸ್ ಕೊಟ್ಟಿಲ್ಲ. ಹಾಗಾಗಿ, ಈ ಸಲ ಪಕ್ಕಾ ಪ್ಲಾನ್ ಮಾಡಿ ಪ್ರೇಕ್ಷಕರೆದುರು ಬರಲು ಅಂಬಿ ಪುತ್ರ ತೀರ್ಮಾನಿಸಿದ್ದಾರೆ.

More from Filmibeat

English summary
Rebel star ambarish son abhishek shared his new look in instagram. after watching abhishek look, nikhil kumar has give compliment to his friend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X