ಎಕ್ಸಿಟ್ ಪೋಲ್ ಬಗ್ಗೆ ನಿಖಿಲ್ ಕುಮಾರ್ ಮೊದಲ ಪ್ರತಿಕ್ರಿಯೆ
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿಯದೆ. ಎಲೆಕ್ಷನ್ ನಂತರ ಹೊರಬಿದ್ದ ಎಕ್ಸಿಟ್ ಪೋಲ್ ನಲ್ಲಿ ಆರು ಸಮೀಕ್ಷೆಗಳು ನಿಖಿಲ್ ಕುಮಾರ್ ಗೆಲುವು ಕಾಣುತ್ತಾರೆ ಎಂದು ಹೇಳಿತ್ತು. ನಾಲ್ಕು ಸಮೀಕ್ಷೆಗಳು ಸುಮಲತಾ ಗೆಲ್ತಾರೆ ಎಂದು ಭವಿಷ್ಯ ನುಡಿದಿತ್ತು.
ಎಕ್ಸಿಟ್ ಪೋಲ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರ್ ''ಯಾವ ಪೋಲ್ ಬಗ್ಗೆಯೂ ನನಗೆ ನಂಬಿಕೆ ಇಲ್ಲ, ನನ್ನನ್ನು ಜನ ಈಗಾಗಲೇ ಆಶೀರ್ವಾದ ಮಾಡಿದ್ದಾರೆ. ನಾಳೆ ಫಲಿತಾಂಶ ಬರುತ್ತೆ ಅಲ್ವಾ ನೋಡೋಣ ಬಿಡಿ'' ಎಂದು ಮಾಧ್ಯಮದವರು ಜೊತೆ ಹಂಚಿಕೊಂಡಿದ್ದಾರೆ.
ತಾಯಿ ಅನಿತಾ ಕುಮಾರಸ್ವಾಮಿ ಜೊತೆ ಶೃಂಗೇರಿಗೆ ಭೇಟಿ ನೀಡಿದ್ದ ನಿಖಿಲ್ ಕುಮಾರ್ ಮಂಡ್ಯದಲ್ಲಿ ಗೆಲುವಿನ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅನಿತಾ ಕುಮಾರಸ್ವಾಮಿ ಕೂಡ 'ನಾವೇ ಮಂಡ್ಯದಲ್ಲಿ ಗೆಲ್ಲೋದು. ಯಾವುದೇ ಅನುಮಾನ ಇಲ್ಲ' ಎಂದಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕುತೂಹಲ ಹುಟ್ಟಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಅಂಬರೀಶ್ ಪತ್ನಿ ಸುಮಲತಾ ಮತ್ತು ನಿಖಿಲ್ ಕುಮಾರ್ ಸ್ಪರ್ಧಿಸಿದ್ದಾರೆ. ಮಂಡ್ಯ ಕ್ಷೇತ್ರ ಸಿಎಂಗೆ ಪ್ರತಿಷ್ಠೆಯಾಗಿದ್ದು ಸರ್ಕಾರದ ಭವಿಷ್ಯ ನಿರ್ಧಾರ ಮಾಡಲಿದೆ ಎಂದು ಕೂಡ ಹೇಳಲಾಗ್ತಿದೆ.


Click it and Unblock the Notifications











