ನಿಖಿಲ್-ರೇವತಿ ಮದುವೆ: ಭಾವಿ ಬೀಗರ ಜೊತೆ ಎಚ್.ಡಿ.ಕುಮಾರಸ್ವಾಮಿ ಸ್ಥಳ ವೀಕ್ಷಣೆ
ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಮತ್ತು ರೇವತಿ ನಿಶ್ಚಿತಾರ್ಥ ಸಮಾರಂಭ ಮೊನ್ನೆಯಷ್ಟೇ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.
ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಮತ್ತು ರೇವತಿ ಮದುವೆ ಏಪ್ರಿಲ್ 17 ಕ್ಕೆ ನಿಗದಿ ಆಗಿದೆ. ನಿಖಿಲ್ ಮತ್ತು ರೇವತಿ ವಿವಾಹ ಮಹೋತ್ಸವವನ್ನು ತಮಗೆ ರಾಜಕೀಯದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ರಾಮನಗರ ಮತ್ತು ಚನ್ನಪಟ್ಟಣ ಮಧ್ಯೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ನಿಖಿಲ್ ಮತ್ತು ರೇವತಿ ಮದುವೆಗೆ ಇನ್ನೆರಡೇ ತಿಂಗಳು ಬಾಕಿ ಉಳಿದಿರುವುದರಿಂದ, ನಿನ್ನೆ ರಾಮನಗರ ಮತ್ತು ಚನ್ನಪಟ್ಟಣದ ಮಧ್ಯದಲ್ಲಿ ಮದುವೆ ನಡೆಯುವ ಸ್ಥಳವನ್ನ ಭಾವಿ ಬೀಗರ ಜೊತೆಗೆ ಎಚ್.ಡಿ.ಕುಮಾರಸ್ವಾಮಿ ವೀಕ್ಷಿಸಿದರು.

ರಾಮನಗರದ ಹೊರವಲಯದಲ್ಲಿರುವ ಜನಪದ ಲೋಕದ ಹಿಂಭಾಗದ ಜಾಗದ ಜೊತೆಗೆ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೆ ಸೇರಿದ ಜಾಗವನ್ನೂ ಎಚ್.ಡಿ.ಕುಮಾರಸ್ವಾಮಿ ಮತ್ತು ವಧುವಿನ ತಂದೆ ಮಂಜುನಾಥ್ ವೀಕ್ಷಿಸಿದರು.

ವಿಶಾಲವಾದ ಜಾಗದಲ್ಲಿ ಬೃಹತ್ ಸೆಟ್ ಹಾಕಿ ನಿಖಿಲ್-ರೇವತಿ ಮದುವೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.


Click it and Unblock the Notifications











