For Quick Alerts
  ALLOW NOTIFICATIONS  
  For Daily Alerts

  ಇಂದು ನಿಖಿಲ್-ರೇವತಿ ನಿಶ್ಚಿತಾರ್ಥ: ಏಪ್ರಿಲ್ 17 ಕ್ಕೆ ಅದ್ಧೂರಿ ಕಲ್ಯಾಣ.!

  |

  ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಗೆ ಇಂದು ಸಂಭ್ರಮದ ದಿನ. ಯಾಕಂದ್ರೆ, ಇವತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ನಿಶ್ಚಿತಾರ್ಥ. ಕುಟುಂಬದವರು ಹುಡುಕಿರುವ ಹುಡುಗಿ ರೇವತಿಯ ಕೈಬೆರಳಿಗಿಂದು ನಿಖಿಲ್ ಕುಮಾರ್ ಉಂಗುರ ತೊಡಿಸಲಿದ್ದಾರೆ.

  ನಿಖಿಲ್ ಕುಮಾರ್ ಮತ್ತು ರೇವತಿ ಎಂಗೇಜ್ ಮೆಂಟ್ ಗಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ಅದ್ಧೂರಿಯಾಗಿ ಸಿಂಗಾರಗೊಳ್ಳುತ್ತಿದೆ. ತಾಜ್ ವೆಸ್ಟ್ ಎಂಡ್ ಹೋಟೆಲ್ ನ ಆವರಣದಲ್ಲಿ ವಿವಿಧ ಹೂವುಗಳಿಂದ ವೇದಿಕೆ ಸಿದ್ಧಗೊಳ್ಳುತ್ತಿದೆ.

  ಇಂದು ಬೆಳಗ್ಗೆ 9 ಗಂಟೆಯ ನಂತರ ನಿಖಿಲ್ ಕುಮಾರ್-ರೇವತಿ ನಿಶ್ಚಿತಾರ್ಥ ನಡೆಯಲಿದೆ. ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಕುಟುಂಬಸ್ಥರು ಎಂಗೇಜ್ ಮೆಂಟ್ ನಲ್ಲಿ ಭಾಗಿಯಾಗಲಿದ್ದಾರೆ.

  ಅದ್ಧೂರಿ ಸ್ಟೇಜ್

  ಅದ್ಧೂರಿ ಸ್ಟೇಜ್

  ನಿಖಿಲ್ ಕುಮಾರ್-ರೇವತಿ ನಿಶ್ಚಿತಾರ್ಥಕ್ಕಾಗಿ ತಾಜ್ ವೆಸ್ಟ್ ಎಂಡ್ ನಲ್ಲಿ ಅದ್ಧೂರಿ ಸ್ಟೇಜ್ ನಿರ್ಮಿಸಲಾಗಿದೆ. ತರಹೇವಾರಿ ಬಣ್ಣದ ಹೂವುಗಳಿಂದ ವೇದಿಕೆ ಕಂಗೊಳಿಸುತ್ತಿದೆ. ಇವತ್ತು ಬೆಳಗ್ಗೆ ರಾಹುಕಾಲ ಮುಗಿದ ಬಳಿಕ ಇರುವ ಶುಭ ಮುಹೂರ್ತದಲ್ಲಿ ನಿಖಿಲ್ ಕುಮಾರ್ ಮತ್ತು ರೇವತಿ ಉಂಗುರ ಬದಲಿಸಿಕೊಳ್ಳಲಿದ್ದಾರೆ.

  ಭಾವಿ ಪತ್ನಿಯ ಜೊತೆಗೆ ಮೊದಲ ಫೋಟೋ ಹಂಚಿಕೊಂಡ ನಿಖಿಲ್ಭಾವಿ ಪತ್ನಿಯ ಜೊತೆಗೆ ಮೊದಲ ಫೋಟೋ ಹಂಚಿಕೊಂಡ ನಿಖಿಲ್

  ಮದುವೆ ದಿನಾಂಕ ನಿಗದಿ

  ಮದುವೆ ದಿನಾಂಕ ನಿಗದಿ

  ಇವತ್ತು ರಿಂಗ್ ಎಕ್ಸ್ ಚೇಂಜ್ ಮಾಡಿಕೊಳ್ಳುವ ಜೋಡಿ, ಏಪ್ರಿಲ್ 17 ರಂದು ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ. ''ನಿಖಿಲ್-ರೇವತಿ ಮದುವೆ ದಿನಾಂಕ ಏಪ್ರಿಲ್ 17 ರಂದು ಫಿಕ್ಸ್ ಆಗಿದೆ'' ಎಂದು ಖುದ್ದು ನಿಖಿಲ್ ಕುಮಾರ್ ತಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಚಿತ ಪಡಿಸಿದ್ದಾರೆ.

  'ರೇವತಿ ನಂಗೆ ಪರ್ಫೆಕ್ಟ್ ಪಾರ್ಟ್ನರ್': ಮೊಟ್ಟ ಮೊದಲ ಬಾರಿಗೆ ಭಾವಿ ಪತ್ನಿ ಬಗ್ಗೆ ನಿಖಿಲ್ ಮಾತು.!'ರೇವತಿ ನಂಗೆ ಪರ್ಫೆಕ್ಟ್ ಪಾರ್ಟ್ನರ್': ಮೊಟ್ಟ ಮೊದಲ ಬಾರಿಗೆ ಭಾವಿ ಪತ್ನಿ ಬಗ್ಗೆ ನಿಖಿಲ್ ಮಾತು.!

  ರಾಮನಗರದಲ್ಲಿ ಮದುವೆ

  ರಾಮನಗರದಲ್ಲಿ ಮದುವೆ

  ಏಪ್ರಿಲ್ 17 ರಂದು ನಿಖಿಲ್ ಕುಮಾರ್-ರೇವತಿ ಮದುವೆ ರಾಮನಗರ ಮತ್ತು ಚನ್ನಪಟ್ಟಣ ನಡುವಿನ ವಿಸ್ತಾರ ಪ್ರದೇಶದಲ್ಲಿ ಅದ್ಧೂರಿಯಾಗಿ ನೆರವೇರಿಸಲು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

  ಯಾರೀ ರೇವತಿ.?

  ಯಾರೀ ರೇವತಿ.?

  ಬೆಂಗಳೂರಿನ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಸಂಬಂಧಿ ಈ ರೇವತಿ. ಎಂ.ಸಿ.ಎ ವ್ಯಾಸಂಗ ಮಾಡಿರುವ ರೇವತಿಗೆ ಚಲನಚಿತ್ರ ಮತ್ತು ರಾಜಕೀಯ ರಂಗದ ಪರಿಚಯವಿಲ್ಲ. ರೇವತಿ ಮತ್ತು ನಿಖಿಲ್ ಕುಮಾರ್ ರದ್ದು ಅಪ್ಪಟ ಅರೇಂಜ್ಡ್ ಮ್ಯಾರೇಜ್. ಕುಟುಂಬದವರ ನಿರ್ಧಾರದಂತೆ ಇವರಿಬ್ಬರು ಹೊಸ ಬದುಕು ಆರಂಭಿಸಲಿದ್ದಾರೆ.

  English summary
  Kannada Actor, Politician Nikhil Kumar-Revathi to wed on April 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X