twitter
    For Quick Alerts
    ALLOW NOTIFICATIONS  
    For Daily Alerts

    ನಾನು ಮದುವೆಯಾಗುವ ಹುಡುಗಿ ಯಾರು ಅಂತ ಹೇಳುವೆ: ಬ್ರೇಕಿಂಗ್ ನ್ಯೂಸ್ ಕೊಟ್ಟ ನಿಖಿಲ್.!

    |

    ಕಳೆದ ಒಂದು ವಾರದಿಂದ ಎಲ್ಲೆಲ್ಲೂ ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಮದುವೆಯದ್ದೇ ಗುಲ್ಲು. ಅದ್ರಲ್ಲೂ, ಶೃಂಗೇರಿ ಶಾರದಾಂಬೆ ಸನ್ನಿಧಿಗೆ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಭೇಟಿ ಕೊಟ್ಟ ಮೇಲೆ, ನಿಖಿಲ್ ಬರ್ತಡೇಗೆ ರಚಿತಾ ರಾಮ್ ವಿಶ್ ಮಾಡಿದ್ಮೇಲೆ ಗಾಂಧಿನಗರದಲ್ಲಿ ಇಬ್ಬರ ಬಗ್ಗೆ 'ಸಂಥಿಂಗ್ ಸಂಥಿಂಗ್' ಮಾತುಗಳೇ ಹೆಚ್ಚಾಗಿ ಕೇಳಿ ಬಂತು.

    ಇದನ್ನೆಲ್ಲ ಗಮನಿಸಿದ ರಚಿತಾ ರಾಮ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸದ್ಯಕ್ಕೆ ಮದುವೆ ಆಗುತ್ತಿಲ್ಲ ಎನ್ನುವುದನ್ನು ರಚಿತಾ ರಾಮ್ ಸ್ಪಷ್ಟ ಪಡಿಸಿದ್ದಾರೆ.

    ಆದ್ರೆ, ಈಗ ತಮ್ಮ ಮದುವೆ ಬಗ್ಗೆ ನಿಖಿಲ್ ಕುಮಾರ್ ಮಾತನ್ನಾಡಿದ್ದಾರೆ. ತಾವು ಮದುವೆ ಆಗುತ್ತಿರುವ ಹುಡುಗಿ ಯಾರು ಎಂಬುದನ್ನು ಶೀಘ್ರದಲ್ಲಿ ಹೇಳುವೆ ಎನ್ನುವ ಮೂಲಕ ನಿಖಿಲ್ ಕುಮಾರ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಮುಂದೆ ಓದಿರಿ..

    ಮದುವೆ ಬಗ್ಗೆ ನಿಖಿಲ್ ಮಾತು

    ಮದುವೆ ಬಗ್ಗೆ ನಿಖಿಲ್ ಮಾತು

    ''ನನ್ನ ಮದುವೆ ಬಗ್ಗೆ ಸದ್ಯದಲ್ಲೇ ಅನೌನ್ಸ್ ಮಾಡುವೆ. ಅಲ್ಲಿಯವರೆಗೂ ಆತುರ ಬೇಡ. ನನ್ನ ಮದುವೆ ಬಗ್ಗೆ ಈಗ ಕೇಳಿಬರುತ್ತಿರುವ ಗಾಸಿಪ್ ಸುಳ್ಳು. ಒಂದು ವರ್ಷದಿಂದ ಮನೆಯಲ್ಲಿ ನನಗೆ ಹುಡುಗಿ ಹುಡುಕುತ್ತಿದ್ದಾರೆ. ಸದ್ಯದಲ್ಲೇ ಅದು ಫೈನಲ್ ಆಗಲಿದೆ'' ಎಂದು ಸಂದರ್ಶನವೊಂದರಲ್ಲಿ ನಿಖಿಲ್ ಕುಮಾರ್ ಹೇಳಿದ್ದಾರೆ.

    ನಿಖಿಲ್ ಜೊತೆಗಿನ ಮದುವೆ ವದಂತಿ ಬಗ್ಗೆ ರಚಿತಾ ರಾಮ್ ಕೊಟ್ಟ ಸ್ಪಷ್ಟನೆ ಇದು.!ನಿಖಿಲ್ ಜೊತೆಗಿನ ಮದುವೆ ವದಂತಿ ಬಗ್ಗೆ ರಚಿತಾ ರಾಮ್ ಕೊಟ್ಟ ಸ್ಪಷ್ಟನೆ ಇದು.!

    ಶೀಘ್ರದಲ್ಲಿ ಹೇಳುವೆ

    ಶೀಘ್ರದಲ್ಲಿ ಹೇಳುವೆ

    ''ನಾನು ಮದುವೆ ಆಗುವ ಹುಡುಗಿ ಯಾರು ಅಂತ ಶೀಘ್ರದಲ್ಲಿ ಹೇಳುವೆ. ನಾನು ಮದುವೆ ಆಗುವ ಹುಡುಗಿಗೂ ಚಿತ್ರರಂಗಕ್ಕೂ ಸಂಬಂಧ ಇಲ್ಲ. ಆಕೆ ತುಂಬಾ ಸಿಂಪಲ್. ನಮ್ಮ ಸಂಸ್ಕೃತಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ'' ಎಂದಿದ್ದಾರೆ ನಿಖಿಲ್.

    'ಕುರುಕ್ಷೇತ್ರ' ಬಳಿಕ ನಿಖಿಲ್ ಗೆ ಮತ್ತೊಂದು ಮೆಗಾ ಆಫರ್ ನೀಡಿದ ಮುನಿರತ್ನ'ಕುರುಕ್ಷೇತ್ರ' ಬಳಿಕ ನಿಖಿಲ್ ಗೆ ಮತ್ತೊಂದು ಮೆಗಾ ಆಫರ್ ನೀಡಿದ ಮುನಿರತ್ನ

    ಅಪ್ಪ-ಅಮ್ಮ ತೋರಿಸಿದ ಹುಡುಗಿ ಜೊತೆ ಮದುವೆ

    ಅಪ್ಪ-ಅಮ್ಮ ತೋರಿಸಿದ ಹುಡುಗಿ ಜೊತೆ ಮದುವೆ

    ''ನನ್ನ ಮದುವೆ ಬಗ್ಗೆ ಅಪ್ಪ-ಅಮ್ಮ ಡಿಸೈಡ್ ಮಾಡುತ್ತಾರೆ. ಅಪ್ಪ-ಅಮ್ಮ ಏನು ಹೇಳ್ತಾರೋ, ಅದೇ ಫೈನಲ್'' ಅಂತ ಹೇಳುವ ಮೂಲಕ ಎಲ್ಲಾ ಗಾಸಿಪ್ ಗಳಿಗೂ ನಟ ನಿಖಿಲ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ನಾಲ್ಕು ಚಿತ್ರಗಳು ಅನೌನ್ಸ್

    ನಾಲ್ಕು ಚಿತ್ರಗಳು ಅನೌನ್ಸ್

    ನಿಖಿಲ್ ಕುಮಾರ್ ಬರ್ತಡೇ ಪ್ರಯುಕ್ತ ನಾಲ್ಕು ಸಿನಿಮಾಗಳು ಅನೌನ್ಸ್ ಆಗಿವೆ. 'ಧನುಷ್ IPS', ಎಪಿ ಅರ್ಜುನ್ ನಿರ್ದೇಶನದ ಸಿನಿಮಾ, ವಿಜಯ್ ಕುಮಾರ್ ಕೊಂಡ ನಿರ್ದೇಶನದ ಸಿನಿಮಾ ಸೇರಿದಂತೆ ನಾಲ್ಕು ಚಿತ್ರಗಳು ನಿಖಿಲ್ ಕುಮಾರ್ ಕೈಯಲ್ಲಿವೆ.

    English summary
    Nikhil Kumar reveals about their marriage plans.
    Thursday, January 23, 2020, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X