»   » 'ಕುರುಕ್ಷೇತ್ರ'ದಲ್ಲಿ ಅಭಿಮನ್ಯು ನಿಖಿಲ್ ಕುಮಾರ್ ಲುಕ್ ಹೀಗೆ ಇರುತ್ತದೆ!

'ಕುರುಕ್ಷೇತ್ರ'ದಲ್ಲಿ ಅಭಿಮನ್ಯು ನಿಖಿಲ್ ಕುಮಾರ್ ಲುಕ್ ಹೀಗೆ ಇರುತ್ತದೆ!

Posted By:
Subscribe to Filmibeat Kannada
Nikhil Kumar look in Kurukshetra movie revealed | Filmibeat Kannada

ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿರುವ ನಟರ ಲುಕ್ ಗಳು ಸಹ ಒಂದರ ಹಿಂದೆ ಒಂದರಂತೆ ರಿವಿಲ್ ಆಗುತ್ತಿದೆ. ಸದ್ಯ ನಟ ನಿಖಿಲ್ ಕುಮಾರ್ ಅವರ ಅಭಿಮನ್ಯು ಲುಕ್ ಕೂಡ ಈಗ ಹೊರಬಿದ್ದಿದೆ.

'ಜಾಗ್ವರ್' ಹುಡುಗ ನಿಖಿಲ್ ಕುಮಾರ್ ಅಭಿಮನ್ಯು ವೇಷದಲ್ಲಿ ಮಿಂಚಿದ್ದಾರೆ. ಸದ್ಯ ಬಂದಿರುವ ಮೇಕಿಂಗ್ ಫೋಟೋದ ಮೂಲಕ ಅಭಿಮನ್ಯು ಲುಕ್ ರಿವಿಲ್ ಆಗಿದೆ. ಇನ್ನು ನಿಖಿಲ್ ಅವರ 'ಅಭಿಮನ್ಯು' ಲುಕ್ ಕಂಡು ಅಭಿಮಾನಿಗಳು ತುಂಬ ಸಂತಸಗೊಂಡಿದ್ದಾರೆ. ನೂರಾರೂ ಅಭಿಮಾನಿಗಳು ಈ ಪಾತ್ರ ನಿಖಿಲ್ ಅವರಿಗೆ ತುಂಬ ಚೆನ್ನಾಗಿ ಸೂಕ್ತವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Nikhil kumar's Abhimanyu look in 'Kurukshetra' Movie.

ಹಿಂದೆಯೇ ಒಂದು ಸ್ಕೆಚ್ ಮಾಡಿ ಅಭಿಮನ್ಯು ಲುಕ್ ಇದೇ ರೀತಿ ಇರಬೇಕು ಎಂದು ಚಿತ್ರತಂಡ ಡಿಸೈನ್ ಮಾಡಿತ್ತು. ಈಗ ಅದೇ ರೀತಿ ತೆರೆ ಮೇಲೆ ನಿಖಿಲ್ ಅಭಿಮನ್ಯು ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

English summary
Actor Nikhil kumar's Abhimanyu look in 'Kurukshetra' kannada Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada