ವಿಡಿಯೋ : 'ಕುರುಕ್ಷೇತ್ರ'ದ ಯುವರಾಜ ಅಭಿಮನ್ಯು ಟೀಸರ್ ನೋಡಿ
ಕನ್ನಡದ ಬಹು ಕೋಟಿ ವೆಚ್ಚದ ಅದ್ದೂರಿ ಸಿನಿಮಾ 'ಕುರುಕ್ಷೇತ್ರ'ದ ಮತ್ತೊಂದು ಟೀಸರ್ ರಿಲೀಸ್ ಆಗಿದೆ. ಧುರ್ಯೋಧನ ಆಗಿರುವ ದರ್ಶನ್ ಟೀಸರ್ ನಂತರ ಈಗ ನಿಖಿಲ್ ಕುಮಾರ್ ಅವರ ಅಭಿಮನ್ಯು ಟೀಸರ್ ರಿಲೀಸ್ ಆಗಿದೆ. ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಇದ್ದು, ಅದರ ವಿಶೇಷವಾಗಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರ ಟೀಸರ್ ರಿಲೀಸ್ ಮಾಡಲಾಗಿದೆ.
'ಕುರುಕ್ಷೇತ್ರ' ಎರಡನೇ ಟೀಸರ್ ಇದಾಗಿದ್ದು, ಮತ್ತೆ ಚಿತ್ರದ ಮೇಲೆ ನಿರೀಕ್ಷೆಯನ್ನು ಹುಟ್ಟಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಟೀಸರ್ ನೋಡಿದವರು ಒಂದು ಕ್ಷಣ ಆಶ್ಚರ್ಯ ಪಡುತ್ತಾರೆ. ನಿರ್ದೇಶಕ ನಾಗಣ್ಣ ಚಿತ್ರದ ಮೇಕಿಂಗ್ ತುಂಬ ಚೆನ್ನಾಗಿ ಮಾಡಿದ್ದಾರೆ. ಅದರಲ್ಲಿಯೂ ನಿಖಿಲ್ ಅಭಿನಯ ಅದ್ಬುತವಾಗಿದೆ. ಟೀಸರ್ ನೋಡಿದ ಮೇಲೆ ಅಭಿಮನ್ಯು ಪಾತ್ರಕ್ಕೆ ನಿಖಿಲ್ ಉತ್ತಮ ಆಯ್ಕೆ ಎನಿಸುತ್ತದೆ.

ಚಿತ್ರದ ಸಾಹಸ ದೃಶ್ಯಗಳನ್ನು ನಿಜಕ್ಕೂ ಮನೋಜ್ಞ ವಾಗಿದೆ. ಯುದ್ಧದ ಸನ್ನಿವೇಶಗಳು ಅಭಿಮಾನಿಗಳಿಗೆ ಹೆಚ್ಚು ಥ್ರಿಲ್ ನೀಡಲಿದೆ. 1 ನಿಮಿಷ 38 ಸೆಕೆಂಡ್ ಇರುವ ಈ ಟೀಸರ್ ದೃಶ್ಯಕಾವ್ಯದಂತೆ ಇದೆ. ಇದನ್ನು ನೋಡುತ್ತಿದ್ದರೆ ಒಂದು ವಿಸ್ಮಯಕಾರಿ ಲೋಕಕ್ಕೆ ನಾಗಣ್ಣ ಕರೆದುಕೊಂಡು ಹೋಗಿದ್ದಾರೆ. ಇನ್ನು ಮುನಿರತ್ನ 'ಕುರುಕ್ಷೇತ್ರ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸಿನಿಮಾ ಜನವರಿ ಕೊನೆಯಲ್ಲಿ ಅಥವ ಫೆಬ್ರವರಿ ಪ್ರಾರಂಭದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











