'ರೇವತಿ ನಂಗೆ ಪರ್ಫೆಕ್ಟ್ ಪಾರ್ಟ್ನರ್': ಮೊಟ್ಟ ಮೊದಲ ಬಾರಿಗೆ ಭಾವಿ ಪತ್ನಿ ಬಗ್ಗೆ ನಿಖಿಲ್ ಮಾತು.!

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ, ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಗೆ ಮದುವೆ ನಿಶ್ಚಯವಾಗಿದೆ.

Recommended Video

Nikhil Kumar speaks about his fiance Revathi | Nikhil kumarswamy | Revathi | Filmibeat kannada

ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿಯನ್ನ ನಿಖಿಲ್ ಕುಮಾರ್ ವರಿಸಲಿದ್ದಾರೆ. ಈಗಾಗಲೇ ಹುಡುಗಿ ನೋಡುವ ಶಾಸ್ತ್ರ ಮುಗಿದಿದ್ದು, ಸದ್ಯದಲ್ಲೇ ರೇವತಿ-ನಿಖಿಲ್ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯಲಿದೆ.

''ಮದುವೆ ಬಗ್ಗೆ ಸಮಯ ಬಂದಾಗ ಮಾತಾಡುವೆ'' ಎಂದು ಇಷ್ಟು ದಿನ ಹೇಳುತ್ತಿದ್ದ ನಟ ನಿಖಿಲ್ ಕುಮಾರ್ ಇದೀಗ ಮೊಟ್ಟ ಮೊದಲ ಬಾರಿಗೆ ತಾವು ಮದುವೆ ಆಗುತ್ತಿರುವ ಹುಡುಗಿ ರೇವತಿ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...

ಸಂಪ್ರದಾಯಸ್ಥ ಕುಟುಂಬ

ಸಂಪ್ರದಾಯಸ್ಥ ಕುಟುಂಬ

''ನಾನು ರೇವತಿ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದೇನೆ. ಕೃಷ್ಣಪ್ಪ ಅವರದ್ದು ಸಂಪ್ರದಾಯಸ್ಥ ಕುಟುಂಬ. ಬಹುಶಃ ಕೃಷ್ಣಪ್ಪ ಅವರನ್ನು ನೋಡಿ ನಾನು ಮದುವೆಗೆ ಒಪ್ಪಿಕೊಂಡೆ'' ಎಂದು ಸಂದರ್ಶನವೊಂದರಲ್ಲಿ ನಿಖಿಲ್ ಕುಮಾರ್ ಹೇಳಿದ್ದಾರೆ.

ಕಣ್ಮುಚ್ಚಿಕೊಂಡು ಒಪ್ಪಿದ್ದೇನೆ.!

ಕಣ್ಮುಚ್ಚಿಕೊಂಡು ಒಪ್ಪಿದ್ದೇನೆ.!

''ರೇವತಿ ಜೊತೆಗೆ ನಾನಿನ್ನೂ ಮಾತನಾಡಿಲ್ಲ. ನನ್ನ ತಂದೆ ತಾಯಿ ನನಗೆ ಒಳ್ಳೆಯ ಹುಡುಗಿಯನ್ನು ಆರಿಸುತ್ತಾರೆ ಎಂಬ ನಂಬಿಕೆ ನನಗಿದೆ. ಹಾಗಾಗಿ ಕಣ್ಮುಚ್ಚಿಕೊಂಡು ಮದುವೆಗೆ ಒಪ್ಪಿಕೊಂಡಿದ್ದೇನೆ'' ಎಂದಿದ್ದಾರೆ ನಿಖಿಲ್ ಕುಮಾರ್.

ಪರ್ಫೆಕ್ಟ್ ಪಾರ್ಟ್ನರ್.!

ಪರ್ಫೆಕ್ಟ್ ಪಾರ್ಟ್ನರ್.!

''ನನಗೆ ರೇವತಿ ಪರ್ಫೆಕ್ಟ್ ಪಾರ್ಟ್ನರ್. ಹಿರಿಯರ ಆಶೀರ್ವಾದ ಸದಾ ನಮ್ಮ ಮೇಲೆ ಇರಬೇಕು. ರೇವತಿ ಅವರು ತುಂಬಾ ಸೂಕ್ಷ್ಮ ಎಂಬ ಮಾತು ಕೇಳಿಪಟ್ಟೆ. ನನಗೆ ಗೊತ್ತಿಲ್ಲ. ಇನ್ನೂ ಅವರೊಂದಿಗೆ ನಾನು ಮಾತನಾಡಿಲ್ಲ. ಅವರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುವೆ, ಅಷ್ಟಂತೂ ಹೇಳಬಲ್ಲೆ'' - ನಿಖಿಲ್ ಕುಮಾರ್.

ರೇವತಿ ಸಂತೋಷವಾಗಿ ನಮ್ಮ ಮನೆಗೆ ಬರಬಹುದು.!

ರೇವತಿ ಸಂತೋಷವಾಗಿ ನಮ್ಮ ಮನೆಗೆ ಬರಬಹುದು.!

''ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ. ನನ್ನ ತಂದೆ ಆಗಲೇ ರೇವತಿಯನ್ನು ಮಗಳೇ.. ಮಗಳೇ.. ಅಂತಿದ್ದಾರೆ. ನನಗಿಂತ ರೇವತಿಯನ್ನ ನಮ್ಮ ಮನೆಯಲ್ಲಿ ತಂದೆ-ತಾಯಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ರೇವತಿ ಅವರು ತುಂಬಾ ಸಂತೋಷವಾಗಿ ನಮ್ಮ ಮನೆಗೆ ಬರಬಹುದು. ರೇವತಿಗೆ ನಾನು ಸದಾ ಸಪೋರ್ಟ್ ಮಾಡುವೆ'' ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

ಯಾರೀ ರೇವತಿ.?

ಯಾರೀ ರೇವತಿ.?

ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಸಹೋದರನ ಪುತ್ರ ಮಂಜುನಾಥ್ ಎನ್ನುವವರ ಮೊದಲ ಮಗಳು ರೇವತಿ. ಎಂ.ಸಿ.ಎ ಓದಿರುವ ರೇವತಿ ಚಲನಚಿತ್ರ ರಂಗ ಮತ್ತು ರಾಜಕೀಯ ರಂಗದಿಂದ ದೂರ ಉಳಿದಿದ್ದಾರೆ.

More from Filmibeat

English summary
Kannada Actor, Politician Nikhil Kumar speaks about his fiance Revathi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X