ನಿಖಿಲ್ ಕಲ್ಯಾಣ ಯಾವಾಗ.? ದೊಡ್ಡಗೌಡರ ಮನೆ ಸೊಸೆ ಹೇಗಿರಬೇಕು.?

ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅವರ ಮದುವೆ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು.

ಆಂಧ್ರ ಪ್ರದೇಶದ ಖ್ಯಾತ ಉದ್ಯಮಿ ಕೋಟೇಶ್ವರ ರಾವ್ ಪುತ್ರಿ ಸಹಜ ಅವರ ಜೊತೆ ನಿಖಿಲ್ ಕುಮಾರ್ ಮದುವೆ ಆಗಲಿದ್ದಾರಂತೆ. ಮದುವೆ ಮಾತುಕತೆ ನಡೆಸುವುದಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಆಂಧ್ರ ಪ್ರದೇಶಕ್ಕೆ ಹೋಗಿದ್ದರಂತೆ ಎನ್ನಲಾಗಿತ್ತು.

ಆಮೇಲೆ ಈ ಸುದ್ದಿಯನ್ನ ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ಸುಳ್ಳು ಎಂದು ಹೇಳಿ ಅಚ್ಚರಿ ಮೂಡಿಸಿದರು. ಆದ್ರೆ, ಹುಡುಗಿ ನೋಡೋಕೆ ಹೋಗಿದ್ದು ಮಾತ್ರ ನಿಜಾ ಎಂದು ಆಪ್ತ ವಲಯಗಳು ಹೇಳುತ್ತಿತ್ತು. ಇದೀಗ, ಮದುವೆ ಬಗ್ಗೆ ಮತ್ತು ಮದುವೆಯಾಗಬೇಕೆಂದುಕೊಂಡಿರುವ ಹುಡುಗಿ ಹೇಗಿರಬೇಕು ಎಂದು ನಿಖಿಲ್ ಕುಮಾರ್ ಹೇಳಿಕೊಂಡಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿಖಿಲ್ ತಮ್ಮ ಡ್ರೀಮ್ ಹುಡುಗಿ ಬಗ್ಗೆ ತಿಳಿಸಿದ್ದಾರೆ. ಮುಂದೆ ಓದಿ....

ನನ್ನ ಮದುವೆ ಓಪನ್ ಸೀಕ್ರೆಟ್

ನನ್ನ ಮದುವೆ ಓಪನ್ ಸೀಕ್ರೆಟ್

''ನನ್ನ ಮದುವೆ ಓಪನ್ ಸೀಕ್ರೆಟ್. ಅದರಲ್ಲಿ ಯಾವುದೇ ಮುಚ್ಚಿಡುವಂತದ್ದು ಇಲ್ಲ. ನನ್ನ ತಂದೆ-ತಾಯಿ ಹುಡುಗಿಯನ್ನ ನೋಡ್ತಿದ್ದಾರೆ. ಓಕೆ ಆದ್ರೆ, ನೋಡೋಣ'' ಎಂದು ಹೇಳುವ ಮೂಲಕ ವಧುವನ್ನ ತಲಾಶ್ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮೊನ್ನೆ ಆಗಿದ್ದು ಬೇಸರ ತಂದಿದೆ

ಮೊನ್ನೆ ಆಗಿದ್ದು ಬೇಸರ ತಂದಿದೆ

'ನಮ್ಮ ತಂದೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಹಾಗಾಗಿ, ಅವರ ಎಲ್ಲೇ ಹೋದ್ರು ಸುದ್ದಿಯಾಗುತ್ತೆ. ಆಂಧ್ರಗೆ ಅವರು ಹೋಗಿದ್ದು ದೇವಸ್ಥಾನಕ್ಕೆ, ನಂತರ ಉದ್ಯಮಿಯನ್ನ ಭೇಟಿ ಮಾಡಿದ್ದಾರೆ. ಆದ್ರೆ, ನಮ್ಮ ಹೆಸರು ಬಂದ್ರೆ, ಓಕೆ. ಏನೂ ಅಂತಿಮವಾಗದೇ ಇದ್ದಾಗ ಆ ಹುಡುಗಿಯ ಹೆಸರು, ಅವರ ಕುಟುಂಬದ ಹೆಸರು ಪ್ರಸ್ತಾಪಿಸುವುದು ಸರಿಯಿಲ್ಲ. ಆ ಸುದ್ದಿ ಮಾಡಿದ್ದು ಸ್ವಲ್ಪ ಬೇಸರ ತಂದಿದೆ'' ಎಂದು ಹೇಳಿದರು.

ಮದುವೆ ಹುಡುಗಿ ಹೇಗಿರಬೇಕು

ಮದುವೆ ಹುಡುಗಿ ಹೇಗಿರಬೇಕು

''ನಾನು ಭಾವನಾತ್ಮಕ ಜೀವಿ, ನಮ್ಮ ತಂದೆ ಅವರ ರೀತಿ. ನನ್ನ ಭಾವನೆಗಳನ್ನ ಹಂಚಿಕೊಳ್ಳುವಂತಹ ಹುಡುಗಿ ಸಿಕ್ಕರೇ ಸಾಕು. ತುಂಬಾ ಸರಳ. ಪ್ರೀತಿ ಅಷ್ಟೇ ನಾನು ಕೇಳೋದು. ಅದನ್ನ ನಾನು ಹೇಳೋದೆ ಬೇಡ. ಅದನ್ನ ನಮ್ಮ ತಂದೆ ಅರ್ಥ ಮಾಡಿಕೊಂಡಿದ್ದಾರೆ'' ಎಂದು ಆಸೆಯನ್ನ ವ್ಯಕ್ತಪಡಿಸಿದ್ದಾರೆ.

ನಿಖಿಲ್ ವಿವಾಹದ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ!

ಪಕ್ಕಾ ಅರೇಂಜ್ ಮ್ಯಾರೇಜ್

ಪಕ್ಕಾ ಅರೇಂಜ್ ಮ್ಯಾರೇಜ್

ನಿಖಿಲ್ ಕುಮಾರ್ ಅವರು ಈ ಹಿಂದೆ ಒಮ್ಮೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದ್ರೆ, ಅದು ಕಾರಣಾಂತರಗಳಿಂದ ಅದು ಮುರಿದು ಬಿದ್ದಿತ್ತು. ಹೀಗಾಗಿ, ಈಗ ನಿಖಿಲ್ ಕಲ್ಯಾಣದ ಜವಾಬ್ದಾರಿಯನ್ನ ಎಚ್.ಡಿ.ಕೆ ದಂಪತಿ ಖುದ್ದು ಕಾಳಜಿ ವಹಿಸಿ ಹುಡುಗಿಯನ್ನ ಹುಡುಕುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ ನಿಖಿಲ್ ಅವರು ಅರೇಂಜ್ ಮ್ಯಾರೆಜ್ ಆಗೋದು ಖಚಿತವೆನ್ನಲಾಗಿದೆ.

More from Filmibeat

English summary
Karnataka Chief Minister HD Kumaraswamy son Nikhil Kumar spoke about his marriage and his dream girl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X